ಬಲಿಪಗುಳಿ ಇಕೋಬ್ಲಿಸ್ ಮಾಲಕ ಸಿ.ಜಿ. ರಾಜಾರಾಮ್ ರವರಿಗೆ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ

0

ವಿಟ್ಲ:  ಶ್ರೀ ಅಖಿಲ ಹವ್ಯಕ ಮಹಾಸಭಾವು 2020ನೇ ಸಾಲಿನ ವಿವಿಧ ಹವ್ಯಕ ವಿಶೇಷ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಯ್ಕೆ ಮಾಡಿದ್ದು ಈ ಪೈಕಿ ಕೃಷಿ ಉದ್ಯಮ ದಲ್ಲಿ  ಸಾಧನೆ ಮಾಡಿರುವ ಬಲಿಪಗುಳಿ ಇಕೋಬ್ಲಿಸ್ ನ ಮಾಲಕ ಸಿ.ಜಿ. ರಾಜಾರಾಮ ಬಲಿಪಗುಳಿರವರು ಆಯ್ಕೆಯಾಗಿದ್ದು, ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ 79ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಕಾರ್ಯಕ್ರಮದಲ್ಲಿ ಎಚ್.ಎಸ್.ಸಚ್ಚಿದಾನಂದಮೂರ್ತಿ ಅವರು ಬಲಿಪಗುಳಿ ಇಕೋಬ್ಲಿಸ್ ನ‌ ಮಾಲಕ ಸಿ.ಜಿ.ರಾಜಾರಾಮರವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಹವ್ಯಕಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಿ.ಜಿ.ರಾಜಾರಾಮರವರ ಪತ್ನಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರಿ ಜೊತೆಗಿದ್ದರು. ಉಳಿದಂತೆ   ತ್ರಿಯಂಬಕ ಗಣೇಶ ಹೆಗಡೆಯವರಿಗೆ ಹವ್ಯಕ ಸೇವಾಶ್ರೀ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಅಶ್ವಿನಿ ಭಟ್ ರವರಿಗೆ ಹವ್ಯಕಶ್ರೀ, ಯಕ್ಷಗಾನದಲ್ಲಿ ಸಾಧನೆಗೈದ  ಬಳ್ಳೂರು ಕೃಷ್ಣಯಾಜಿರವರಿಗೆ ಹವ್ಯಕ ಭೂಷಣ, ಹರಿಕಥೆ ಕ್ಷೇತ್ರದ ಸಾಧನೆಗಾಗಿ  ನಾರಾಯಣ ದಾಸರಿಗರ ಹವ್ಯಕ ಭೂಷಣ,  ಸಾಹಿತ್ಯಕ್ಷೇತ್ರದ ಸಾಧನೆಗಾಗಿ  ಗಜಾನನ ಶರ್ಮ ರವರಿಗೆ  ಹವ್ಯಕ ವಿಭೂಷಣ, ಸಮಾಜಸೇವೆಗಾಗಿ  ಉದಯಕುಮಾರ್ ನೂಜಿರವರಿಗೆ ಹವ್ಯಕ ಭೂಷಣ,  ಪರಿಸರದ ವುಚಾರವಾಗಿ  ಅಶ್ವಿನಿಕುಮಾರ್ ಭಟ್ ರವರಿಗೆ ಹವ್ಯಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥಾಪನೋತ್ಸವ ಸಮಿತಿ ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ, ಹವ್ಯಕ ವಿಶೇಷ ಪ್ರಶಸ್ತಿ ಸಂಚಾಲಕ ರವಿನಾರಾಯಣ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಸಿ.ವಿ.ವೇಣುವಿಜೇಶ, ಡಾ.ಗಿರಿಧರ ಕಜೆ, ಜಿ.ಎಲ್.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here