ಬೆಳ್ಳಿಪ್ಪಾಡಿ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ‌ ವಾರ್ಷಿಕ ವಿಶೇಷ ಶಿಬಿರ

0

ಪುತ್ತೂರು: ಜಿಡೆಕಲ್ಲಿನಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಮೇ 14ರವರೆಗೆ ಬೆಳ್ಳಿಪ್ಪಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಮೇ 8ರಂದು ಚಾಲನೆ‌‌ ನೀಡಲಾಯಿತು.

‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವ ಜನತೆ’ ಎಂಬ ಧ್ಯೇಯದೊಂದಿಗೆ ನಡೆಯಲಿರುವ ವಾರ್ಷಿಕ ವಿಶೇಷ ಶಿಬಿರವನ್ನು ಬೆಳ್ಳಿಪ್ಪಾಡಿ ಶಾಲಾ ಸಭಾಂಗಣದಲ್ಲಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ತಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಗೌಡ ಕಂಬಳದಡ್ಡ, ಕೋಡಿಂಬಾಡಿ ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಗುಂಡೋಳೆ, ಮಾಜಿ‌ ಉಪಾಧ್ಯಕ್ಷ ಮೋಹನ‌ ಪಕ್ಕಳ ಕುಂಡಾಪು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭವ್ಯಾ ವಿದ್ಯಾಪ್ರಸಾದ್ ಶೆಟ್ಟಿ ಗುತ್ತಿನಮನೆ, ಕಾಲೇಜಿನ‌ ಪ್ರಾಂಶುಪಾಲೆ ಪ್ರೊ.‌ನಳಿನಾಕ್ಷಿ ಎ.ಎಸ್, ಶಿಬಿರಾಧಿಕಾರಿ ಪ್ರೊ.‌ಸುಜಾತಾ, ಘಟಕದ ನಾಯಕರಾದ ಪ್ರೀತಮ್, ಕಲಾವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here