ಕಾಣಿಯೂರು: ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ

0

 

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಕಾಣಿಯೂರಿನ ಸರ್ವಧರ್ಮದವರನ್ನು ಒಟ್ಟಿಗೆ ಸೇರಿಸಿಕೊಂಡು ಸಾರ್ವಜನಿಕ ಸೇವೆಗಾಗಿ ಆಂಬುಲೆನ್ಸ್ ಲೋಕಾರ್ಪಣೆ ಮಾಡುವ ಮುಖಾಂತರ ಎಲ್ಲರ ಪ್ರೀತಿಯನ್ನು ಗಳಿಸಿ ಒಳ್ಳೆಯ ಸಂದೇಶವನ್ನು ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನವರು ಸಮಾಜಕ್ಕೆ ಕೊಟ್ಟಿದ್ದು ಶ್ಲಾಘನೀಯ ಎಂದು ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ಅವರು ಕೂಡುರಸ್ತೆ ಫ್ರೆಂಡ್ಸ್ ಸೋರ್ಟ್ಸ್ ಕ್ಲಬ್ ಮತ್ತು ದಾನಿಗಳ, ಸಂಘ ಸಂಸ್ಥೆಗಳ ನೆರವಿನೊಂದಿಗೆ ಮೆ ೮ರಂದು ಕಾಣಿಯೂರಿನಲ್ಲಿ ಆಂಬ್ಲುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಣಿಯೂರಿಗೆ ಆಂಬುಲೆನ್ಸ್‌ನ ಬೇಡಿಕೆ ಹಲವು ವರ್ಷಗಳಿಂದ ಇತ್ತು, ಇದೀಗ ಸಾಕರಗೊಂಡಿದೆ. ಈ ನಿಟ್ಟಿನಲ್ಲಿ ಪರಿಸರದ ಸುತ್ತಮುತ್ತಲಿನ ಜನತೆಗೆ ಸದುಪಯೋಪ ಸಿಕ್ಕಿರುವುದು ಶ್ಲಾಘನೀಯ ಎಂದರು. ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸೇವೆಯನ್ನು ನೀಡುವ ಉದ್ಧೇಶದಿಂದ ಆಂಬುಲೆನ್ಸ್ ಲೋಕಾರ್ಪಣೆ ಮಾಡಿರುವುದು ಒಳ್ಳೆಯ ವಿಚಾರ. ಈ ನಿಟ್ಟಿನಲ್ಲಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ದೇವತಾ ಕಾರ್ಯವನ್ನು ಮಾಡಿದೆ. ಕಾಣಿಯೂರು ಆಂಬುಲೆನ್ಸ್‌ನ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಹಲವಾರು ಬಾರಿ ಗ್ರಾ.ಪಂ. ಸಭೆಗಳಲ್ಲಿ ನಿರ್ಣಯವನ್ನು ಕೈಗೊಂಡು ಸಂಬಂಧಪಟ್ಟವರಿಗೆ ಮತ್ತು ಶಾಸಕರಿಗೆ ಕಳುಹಿಸಿ ಕೊಟ್ಟಿದ್ದೇವೆ. ಆದರೆ ಆಲಂಕಾರು ಮತ್ತು ಬೆಳ್ಳಾರೆಯಲ್ಲಿ ಆಂಬುಲೆನ್ಸ್ ಸೇವೆ ಇದ್ದುದ್ದರಿಂದ ಸರಕಾರದ ಮಟ್ಟದಲ್ಲಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಪ್ರಯೋಜನ ದೊರಕಲಿ ಎಂದರು. ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷರು, ಉದ್ಯಮಿ ನಂದಕುಮಾರ್ ಮಡಿಕೇರಿ ಮಾತನಾಡಿ, ನಮ್ಮಲ್ಲಿ ಶಕ್ತಿಯಿದ್ದರೂ ಕೂಡ ಸಮಾಜ ಸೇವೆ ಮಾಡುವಂತಹ ಮನಸ್ಸು ಇರಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯ. ಸಮಾಜದಿಂದ ಬಂದಂತಹ ಒಂದು ಪಾಲನ್ನು ಸಮಾಜಕ್ಕೆ ಸಮರ್ಪಿಸಿದಾಗ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದವರು ಸಂಘಟನೆಯ ಮೂಲಕ ಯುವಕರು ಸಮಾಜಮುಖಿಗಳಾಗಿ ತೊಡಗಿಸಿಕೊಂಡಾಗ ಗ್ರಾಮದ ಅಭಿವೃದ್ದ್ಧಿ ಆಗುವುದರೊಂದಿಗೆ ದೇಶದ ಅಭಿವೃದ್ದಿ ಆಗಲು ಸಾಧ್ಯ. ನಾವು ಎಲ್ಲವನ್ನೂ ರಾಜಕೀಯವಾಗಿ ನೋಡಬಾರದು, ರಾಜಕೀಯ ಹೊರತಾಗಿ ನೋಡಿದಾಗ ಸಮಾಜ ಮತ್ತು ದೇಶ ಒಳ್ಳೆಯದಾಗಲು ಸಾಧ್ಯ. ಇಂತಹ ಭಾವನೆಯನ್ನು ಇಟ್ಟುಕೊಂಡು ಆಂಬುಲೆನ್ಸ್ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು. ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಾಜಿದಾ, ತಾ.ಪಂ. ಮಾಜಿ ಉಪಾಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಬೆಳಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೈತಡ್ಕ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಕಾಣಿಯೂರು ಶ್ರೀ ದುರ್ಗಾ ಕ್ಲಿನಿಕ್‌ನ ಡಾ| ಶಶಿಧರ್ ಪೆರುವಾಜೆ, ಕೊಲ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ| ಧರ್ಮಪಾಲ ಗೌಡ ಕರಂದ್ಲಾಜೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್‌ಕುಮಾರ್ ಕೆಡೆಂಜಿಗುತ್ತು, ಕಾಣಿಯೂರು ಗ್ರಾ.ಪಂ. ಸದಸ್ಯ ವಸಂತ ಪೆರ್ಲೋಡಿ, ಬೈತಡ್ಕ ದರ್ಗಾ ಶರೀಫ್ ಮತ್ತು ಜುಮಾ ಮಸೀದಿಯ ಅಧ್ಯಕ್ಷ ಜ| ಬಿ.ಪಿ. ಹಮೀದ್ ಹಾಜಿ ಬೈತಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಉಪಾಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ, ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ, ಕಾಣಿಯೂರು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಗುಂಡಿಗದ್ದೆ, ಏಲಡ್ಕ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಲುವೆ, ಚಾರ್ವಾಕ ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದಿಶಾಂತ್ ಎನ್.ಎಸ್. ಗೌಡ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಅಧ್ಯಕ್ಷ ಸುಂದರ ನಾಯ್ಕ್ ಉಪ್ಪಡ್ಕ, ದೈಪಿಲ ಶ್ರೀ ಕ್ಷೇತ್ರ ಕ್ರೀಡಾ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ, ಪುಣ್ಚತ್ತಾರು ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್‌ನ ದಿನೇಶ್ ಮಾಳ, ಬೈತಡ್ಕ ಮುಸ್ಲಿಂ ಯೂತ್ ಫೆಡರೇಶನ್‌ನ ಅಧ್ಯಕ್ಷ ಆಝೀಝ್ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಗತ್‌ರಾಜ್ ಬೈತಡ್ಕ, ಮಜೀದ್ ಬೆದ್ರಾಜೆ, ಅವಿನಾಶ್ ಬೈತಡ್ಕ, ಪುರುಷೋತ್ತಮ ನಾವೂರು, ರಕ್ಷಿತ್ ಮುಗರಂಜ, ಯಶೋಧರ್ ಮುಗರಂಜ, ನಾಸೀರ್ ಬೆದ್ರಾಜೆ, ರವೀಂದ್ರ ಅನಿಲ, ನಿತಿನ್ ಮುಗರಂಜ, ಮೋಹನ್ ಬೈತಡ್ಕ, ಧವನ್ ಕೂರೇಲು, ಹನೀಫ್ ಬೆದ್ರಾಜೆ, ಶರೀಫ್ ಬೆದ್ರಾಜೆ, ಸುಮಂತ್ ಬೆದ್ರಾಜೆ, ನಾಗವೇಣಿ ಬೆದ್ರಾಜೆ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಕ್ಲಬ್‌ನ ಅಧ್ಯಕ್ಷ ನವೀನ್ ಕಟ್ಟತ್ತಾರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅವಿನಾಶ್ ಬೈತಡ್ಕ ವರದಿ ವಾಚಿಸಿದರು. ಕ್ಲಬ್‌ನ ಗೌರವಾಧ್ಯಕ್ಷರು, ಕಾಣಿಯೂರು ಗ್ರಾ.ಪಂ. ಸದಸ್ಯ ರಾಮಣ್ಣ ಗೌಡ ಮುಗರಂಜ ಸ್ವಾಗತಿಸಿ, ಕಾರ್ಯದರ್ಶಿ ರಕ್ಷಿತ್ ಮುಗರಂಜ ವಂದಿಸಿದರು. ಗೌತಮ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

25,000 ನಗದು ಹಸ್ತಾಂತರ: ಈ ಸಂದರ್ಭದಲ್ಲಿ ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ರೂ 25,00 ನಗದನ್ನು ಕೂಡುರಸ್ತೆ ಫ್ರೆಂರ್ಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳೀಗೆ ಹಸ್ತಾಂತರಿಸಿದರು.

ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸೋರ್ಟ್ಸ್ ಕ್ಲಬ್ ಮತ್ತು ದಾನಿಗಳ, ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಾಣಿಯೂರಿನಲ್ಲಿ ಆಂಬ್ಲುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ಮಾಧವ ಕಟ್ಟತ್ತಾರು ಅವರಿಗೆ ಆಂಬುಲೆನ್ಸ್‌ನ ಕೀ ಅನ್ನು ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here