ಏನೆಕಲ್ಲು: ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ‘ಉದ್ಯಮಶೀಲತಾ ಸ್ವ-ಉದ್ಯೋಗ’ ಅರಿವು ಕಾರ್ಯಾಗಾರ

0

ಕಡಬ: ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ “ಉದ್ಯಮಶೀಲತಾ ಸ್ವ-ಉದ್ಯೋಗ” ಅರಿವು ಕಾರ್ಯಾಗಾರ ಏನೆಕಲ್ಲು ಸಂಜೀವಿನಿ ಕಟ್ಟಡದಲ್ಲಿ ಮೇ. 5ರಂದು ನಡೆಯಿತು.


ತೆಲಂಗಾಣ ರಾಜ್ಯದ ಮಿಲ್ಲೆಟ್ ಮ್ಯಾನ್ ಬಿರುದು ಪಡೆದಿರುವ ಎಸ್.ಎಸ್.ಭವಾನಿ ಫುಡ್ಸ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರೂ, ಸ್ವಯಂ ಶಕ್ತಿ ಅಗ್ರಿ ಪೌಂಡೇಶನ್ ಸರಕಾರೇತರ ಸಂಸ್ಥೆಯ ಸ್ಥಾಪಕರೂ ಆದ ವೀರ ಶೆಟ್ಟಿ ಪಾಟೀಲ್ ಬಿರದಾರ್‌ರವರು ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರಿಗೆ ರಾಗಿ ಹಾಗೂ ಇತರೇ ದವಸ ಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನ ಮತ್ತು ಇನ್ನಿತರ ಚಟುವಟಿಕೆಗಳ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎನ್.ಎರ್.ಎಲ್.ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ., ಒಕ್ಕೂಟದ ಉಪಾಧ್ಯಕ್ಷೆ ರಮಣಿ, ಕಾರ್ಯದರ್ಶಿ ಮೀನಾಕ್ಷಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರತ್ನ ನಿರೂಪಣೆ ಮಾಡಿದರು. ಕವಿತಾ ಸ್ವಾಗತಿಸಿದರು. ಮುಖ್ಯ ಪುಸ್ತಕ ಬರಹಗಾರರಾದ ಹೇಮಲತಾ ವಂದಿಸಿದರು.

LEAVE A REPLY

Please enter your comment!
Please enter your name here