ಉಪ್ಪಿನಂಗಡಿ ಪುಳಿತ್ತಡಿ ಗೌಡತ್ತಿಗೆ ಮನೆತನದಲ್ಲಿ ಗಣಹೋಮ, ದೈವಗಳ ನೇಮೊತ್ಸವ

0

ಕಾಣಿಯೂರು: ಉಪ್ಪಿನಂಗಡಿ ಪುಳಿತ್ತಡಿ ಗೌಡತ್ತಿಗೆ ಮನೆತನದಲ್ಲಿ ಗಣಹೋಮ, ಮುಡಿಪು ಶುದ್ಧ ಮತ್ತು ಸಂಜೆ ಭಂಡಾರ ತೆಗೆದು ಕಲ್ಲುರ್ಟಿ, ವರ್ಣರ ಪಂಜುರ್ಲಿ, ಧರ್ಮದೈವ, ರುದ್ರಾಂಡಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಹಿರಿಯ ನಾಗರೀಕ ಪ್ರಕೋಷ್ಟ್ ಪುತ್ತೂರು ಬಿಜೆಪಿ ಮಂಡಲದ ಉಮೇಶ್ ಶೆಣೈ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಉದಯ ಶಂಕರ್ ಭಟ್, ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್ ಜೈನ್ ಸಹಿತ ಹಲವಾರು ಗಣ್ಯರು ಆಗಮಿಸಿದ್ದರು. ಪುಳಿತ್ತಡಿ ಗೌಡತ್ತಿಗೆ ಮನೆತನದ ಹಿರಿಯರಾದ ಸೇಸಪ್ಪ ಗೌಡ ಹಾಗೂ ಕುಟುಂಬದ 32 ಮನೆಯವರು ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here