ಝೀನತ್ ಭಕ್ಷ್ ಯತೀಂ ಖಾನದಲ್ಲಿ ದಾಖಲಾತಿ ಪ್ರಾರಂಭ

0

  • ಅನಾಥ(ಯತೀಂ) ಮಕ್ಕಳಿಗೆ ಉಚಿತ ಶಿಕ್ಷಣ

ಪುತ್ತೂರು: ಮಂಗಳೂರಿನ ಬಂದರು ಡಾ.ಅನ್ಸಾರಿ ರಸ್ತೆ ಬಳಿ ಕಾರ್ಯಾಚರಿಸುತ್ತಿರುವ ಝೀನತ್ ಭಕ್ಷ್ ಯತೀಂ ಖಾನದಲ್ಲಿ ೨೦೨೨-೨೩ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.

ಯತೀಂ ಖಾನದ ಸೌಲಭ್ಯಗಳು:
ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದ್ದು ವಿಶಾಲವಾದ ಮತ್ತು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ವಾಸ್ತವ್ಯ ಕೊಠಡಿ, ಪ್ರತ್ಯೇಕ ಸುಸಜ್ಜಿತ ವಾಚನಾಲಯ(Reading &Study class Room) ವ್ಯವಸ್ಥೆ ಹೊಂದಿದೆ.

ಮಕ್ಕಳನ್ನು ಸಂಸ್ಥೆಯಿಂದ ಶಾಲಾ-ಕಾಲೇಜುಗಳಿಗೆ ಕೊಂಡೊಯ್ಯಲು ಶಾಲಾ ವಾಹನ ವ್ಯವಸ್ಥೆಯಿದ್ದು ವರ್ಷಕ್ಕೆ ಮೂರು ಸೆಟ್ ಡ್ರೆಸ್ ಮತ್ತು ಶಾಲಾ ಯುನಿಫಾರ್ಮ್, ಶಾಫಿ, ಹನಫಿ ಮಝ್ಹಬ್ ಅನುಸಾರ ಧಾರ್ಮಿಕ ಶಿಕ್ಷಣ, ಒಂದರಿಂದ ಹತ್ತನೇ ತರಗತಿಯವರೆಗೆ ಸಾಮಾನ್ಯ ಶಿಕ್ಷಣ, ಹತ್ತನೇ ತರಗತಿ ಪಾಸಾದ ಮಕ್ಕಳಿಗೆ ಅವರ ಪ್ರತಿಭೆ ಅನುಸಾರ ಪಿಯುಸಿ ವಿವಿಧ ಕೋರ್ಸುಗಳಿಗೆ ದಾಖಲು, ಮಕ್ಕಳು ಮತ್ತು ಹೆತ್ತವರ ಆಸಕ್ತಿಯಂತೆ ವಿವಿಧ ಕೋರ್ಸು ಗಳಲ್ಲಿ ಡಿಪ್ಲೋಮಾ ಮತ್ತು ಐಟಿಐ, ಪಿಯುಸಿ ಪಾಸಾದ ಮಕ್ಕಳಿಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಮಾಡುವ ಅವಕಾಶವನ್ನು ಸಂಸ್ಥೆ ಕಲ್ಪಿಸುತ್ತದೆ. ಸಂಸ್ಥೆಯ ಕ್ಯಾಂಪಸ್‌ನಲ್ಲೇ ಕಂಪ್ಯೂಟರ್ ಶಿಕ್ಷಣ, ದೈಹಿಕ ಶಿಕ್ಷಣ(indoor &outdoor gam) ವರ್ಷದ ಕೊನೆಯಲ್ಲಿ ಶೈಕ್ಷಣಿಕ ಪ್ರವಾಸ ಹಾಗೂ ಪ್ರತಿಭೋತ್ಸವ ಏರ್ಪಡಿಸಲಾಗುತ್ತದೆ.

ಈ ಮೇಲಿನ ಎಲ್ಲಾ ಸೌಲಭ್ಯಗಳು ಉಚಿತವಾಗಿದ್ದು ೬ರಿಂದ ೧೨ ವರ್ಷದೊಳಗಿನ ಯತೀಂ(ಅನಾಥ) ಮಕ್ಕಳನ್ನು ಸಂಸ್ಥೆಗೆ ಸೇರಿಸುವಂತೆ ಝೀನತ್ ಭಕ್ಷ್ ಯತೀಂ ಖಾನ ಸಂಸ್ಥೆಯವರು ವಿನಂತಿಸಿದ್ದಾರೆ. ಅರ್ಹ ಆಸಕ್ತ ವಿದ್ಯಾರ್ಥಿಗಳು ದಾಖಲಾತಿ ಫಾರಂನ್ನು ಸಂಸ್ಥೆಯ ಕಚೇರಿಯನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 0824-2424442, 2428342, 8951330809, 9449767812, 9449554512 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

 

LEAVE A REPLY

Please enter your comment!
Please enter your name here