4 ವರ್ಷಗಳಲ್ಲಿ ಪುತ್ತೂರಿಗೆ ರೂ.808ಕೋಟಿ ಅನುದಾನ-ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು:ಶಾಸಕನಾಗಿ ಆಯ್ಕೆಯಾದ ನಾಲ್ಕು ವರ್ಷಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ರೂ.808ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮೇ.9ರಂದು ದರ್ಬೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.7ಕೋಟಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.1.29ಕೋಟಿ, ಲೋಕೋಪಯೋಗಿ ಇಲಾಖೆಯಿಂದ ಪ.ಜಾತಿ & ಪಂಗಡದ ಕಾಲನಿ ರಸ್ತೆ ಅಭಿವೃದ್ಧಿಗೆ ರೂ.19.02ಕೋಟಿ, ಲೋಕೋಪಯೋಗಿ ಇಲಾಖೆಯ 5054 ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿಗೆ ರೂ.22ಕೋಟಿ, ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ದೇವಸ್ಯ, ಕುಕ್ಕುಪುಣಿ, ಅಂದ್ರಟ್ಟ, ಕಿಜಾನ, ನೀರ್ಕಜೆ, ಮಂಜ ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ, ನವೀಕರಣ, ಸಂರಕ್ಷಣೆ ಕಾಮಗಾರಿಗಳಿಗೆ ರೂ.೭.೬೦ಕೋಟಿ, ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತು ಮತ್ತು ಗ್ರಾಮಬಂಧು ಯೋಜನೆಯಡಿ ಕಾಲುಸಂಕಗಳ ನಿರ್ಮಾಣಕ್ಕೆ ರೂ.೭.೬೧ಕೋಟಿ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಅನುದಾನಗಳು ರೂ.೬೮.೪೫ಕೋಟಿ, ಶಾಲಾ, ಕಾಲೇಜು ಕಟ್ಟಡಗಳು, ಐಟಿಐ ಅಭಿವೃದ್ಧಿ, ಕೆಯ್ಯೂರು ಕೆಪಿಎಸ್ ಕಲೇಜು, ಮೌಲಾನಾ ಆಝಾದ್, ಡಾ. ಅಂಬೇಡ್ಕರ್ ವಸತಿ ಶಾಲೆಗೆಳಿಗೆ ರೂ.೪೦ ಕೋಟಿ, ಸರ್ಕಾರಿ ಶಾಲೆಗಳು, ಅಂಗನವಾಡಿ & ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳ ಪೂರೈಕೆಗೆ ರೂ.೫ಕೋಟಿ, ಬನ್ನೂರು ಅನೆಮಜಲು ಎಂಬಲ್ಲಿ ನ್ಯಾಯಾಲಯ ನೂತನ ಸಂಕಿರ್ಣ, ಬಾರ್ ಅಸೋಸಿಯೇಷನ್ ಕಟ್ಟಡ, ವಸತಿಗೃಹ ಕಟ್ಟಗಳ ನಿರ್ಮಾಣಕ್ಕೆ ರೂ.೫೫ಕೋಟಿ, ಸಣ್ಣ ನೀರಾವರಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ಬೆಳೆಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ.೫೧.೮೮ಕೋಟಿ, ಸಣ್ಣ ನೀರಾವರಿ ಇಲಾಖೆಯ ಪಶ್ಚಿಮವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳು ನಿರ್ಮಾಣಕ್ಕೆ ರೂ.೬೦.೨೫ಕೋಟಿ, ೨೦೨೧-೨೨ ನೇ ಸಾಲಿನ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೃಷಿ ಭೂಮಿ ಸಂರಕ್ಷಣೆ ಕಾಮಗಾರಿಗಳಿಗೆ ರೂ.೨೪.೪೩ಕೋಟಿ, ಕೆರೆ ಅಭಿವೃದ್ಧಿಗೆ ರೂ.೨ಕೋಟಿ, ಕೇಂದ್ರ ಸರ್ಕಾರದ ಐಪಿಡಿಎಸ್ ಯೋಜನೆಯಲ್ಲಿ ಮೆಸ್ಕಾಂನ ಭೂಗತ ಕೇಬಲ್ ಅಳವಡಿಕೆಗೆ ರೂ.೨೦.೮೦ಕೋಟಿ, ಕೇಂದ್ರ ಸರ್ಕಾರದ ದೀನ ದಯಾಳ್ ಉಪಾಧ್ಯಾಯ ಗಾಮ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕಗಳ ಉನ್ನತಿಕರಣಕ್ಕೆ ರೂ.೩.೯೬ಕೋಟಿ, ಕುಂಬ ಗ್ರಾಮಾಂತರ ಮೆಸ್ಕಾಂನ ವಿಭಾಗದ ನೂತನ ಕಟ್ಟಡ ನಿರ್ಮಾಣಕ್ಕೆ ರೂ.೧.೫೦ಕೋಟಿ, ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ’ (ನಗರಸಭೆ & ಪಟ್ಟಣ ಪಂಚಾಯತ್) ಎಸ್‌ಎಫ್‌ಸಿ ವಿಶೇಷ ಅನುದಾನ ರೂ.೫ ಕೋಟಿ, ಪುತ್ತೂರು, ನಗರಸಭಾ ವ್ಯಾಪ್ತಿಯಲ್ಲಿ ೨೪*೭ ಕುಡಿಯುವ ನೀರಿನ ಜಲಸಿರಿ ಯೋಜನೆಯಲ್ಲಿ ರೂ.೧೧೩.೦೮ಕೋಟಿ, ನಗರಸಭೆಗೆ ಸ್ವಚ್ಛ ಭಾರತ್ ಮಿಶನ್ ಕಾರ್ಯಕ್ರಮದ ಘನತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ರೂ.೪.೪೯ಕೋಟಿ, ವಿಟ್ಲ ಪಟ್ಟಣ ಪಂಚಾಯತ್‌ಗೆ ಸ್ವಚ್ಛ ಭಾರನ್ ಮಿಶನ್ ಕಾರ್ಯಕ್ರಮದಡಿ ತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ರೂ.೩.೩೦ಕೋಟಿ, ಪುತ್ತೂರು ನಗರಸಭೆ ಮತ್ತು ವಿಟ್ಲ ಪಟ್ಟ ಪಂಚಾಯತ್‌ಗೆ ೧೫ನೇ ಹಣಕಾಸು ಯೋಜನೆಯಡಿ ೨೦೨೧-೨೨ ಸಾಲಿನನಲ್ಲಿ ರೂ.೩.೮೩ಕೋಟಿ, ಪುತ್ತೂರು ನಗರಸಭೆ ಮತ್ತು ವಿಟ್ಲ ಪಟ್ಟಣ ಪಂಚಾಯತ್‌ಗೆ ಅಮೃತ ನಗರೋತ್ಥಾನ ಯೋಜನೆಯಡಿ ೨೦೨೧-೨೨ ಸಾಲಿನಲ್ಲಿ ರೂ.೩೫ಕೋಟಿ, ಉಪ್ಪಿನಂಗಡಿ, ಈಶ್ವರಮಂಗಲ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ರೂ.೮ಕೋಟಿ, ಕೆದಂಬಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ರೂ.೫ಕೋಟಿ, ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಮ್ಲಜನಕ ಘಟಕ ಸ್ಥಾಪನೆಗೆ ರೂ.೧.೫೦ಕೋಟಿ, ೨೦೨೧-೨೨ನೇ ಸಾಲಿನಲ್ಲಿ 27 ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ರೂ.೮ಕೋಟಿ, ಪುತ್ತೂರು, ಉಪ್ಪಿನಂಗಡಿ ಮತ್ತು ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ರೂ.೧.೫೦ಕೋಟಿ, ಪಿಎಂಜಿಎಸ್.ವೈ ಯೋಜನೆಯಡಿ ರಸ್ತೆ ಅಭಿವೃದ್ಧಿ ರೂ.೫೮ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ ರೂ.೨೫ಕೋಟಿ, ೨೦೧೧-೨೨ನೇ ಸಾಲಿನಲ್ಲಿ ೪ ಗ್ರಾಮಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.೮೦ಲಕ್ಷ, ಪುತ್ತೂರು ನಗರ ಬಹು ಉಪಯೋಗಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ೧.೪೦ಕೋಟಿ, ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ ಯೋಜನೆಯಡಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಪ್ರೌಢಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ರೂ.೫.೩೩ಕೋಟಿ, ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗೆ ರೂ.೬೦.೪೩ಕೋಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಟ್ಟಡದ ಮೇಲಂಸ್ಥಿನ ಕಾಮಗಾರಿಗಳಗೆ ರೂ.೨.೯೯ಕೋಟಿ ಅನುದಾನ ನೀಡಲಾಗಿದೆ ಎಂದರು.

ರೂ.375 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ:
ಪುತ್ತೂರು ವಿಧಾನ ಸಭಾ ವ್ಯಾಪ್ತಿಯ ಪುತ್ತೂರು ತಾಲೂಕಿನ 22 ಹಾಗೂ ಬಂಟ್ವಾಳ ತಾಲೂಕಿನ 11 ಪಂಚಾಯತ್‌ಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ರೂ.375 ಕೋಟಿಯ ಡಿ.ಪಿ,ಆರ್ ಸಿದ್ದವಾಗಿದೆ. ಇದರ ಮುಖಾಂತರ ಕಡೇಶಿವಾಲಯ ಎಎಂಆರ್ ಡ್ಯಾಮ್‌ನಿಂದ ನೀರನ್ನು ಸರಬರಾಜು ಮಾಡಿ ಬಲ್ನಾಡು ಹಾಗೂ ಪುಣಚದಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ಸಂಗ್ರಹಿ ಬಳಿಕ ಅಲ್ಲಿಂದ ವಿವಿಧ ಪಂಚಾಯತ್‌ಗಳ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.

ಕೈಗಾರಿಕೆಗಳು ಭೂಮಿ:
ಪುತ್ತೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಅವಕಾಶ ಕಲ್ಪಿಸಲು ಕೈಗಾರಿಕಾ ವಲಯ ನಿರ್ಮಾಣಕ್ಕೆ ಚಿಕ್ಕಮುಡ್ನೂರು ಗ್ರಾಮದಲ್ಲಿ 100ಎಕರೆ ಗುರುತಿಸಲಾಗಿದೆ. ಇದು ಸರ್ವೆ ಆಗಿದ್ದು ಸರಕಾರದ ಹಂತದಲ್ಲಿದೆ. ಅಲ್ಲದೆ ಸಣ್ಣ ಕೈಗಾಗಿಕೆಗಳ ಸ್ಥಾಪನೆಗೆ ಅವಕಾಶ ನೀಡಲು ಆರ್ಯಾಪುನಲ್ಲಿ 15ಎಕರೆ ಭೂಮಿಯನ್ನು ಗುರುತಿಸಲಾಗಿದೆ.

ರೂ.15ಕೋಟಿಯಲ್ಲಿ ಕಬಕ-ವಿಟ್ಲ ರಸ್ತೆ ಅಭಿವೃದ್ಧಿ:
ಕಬಕ-ವಿಟ್ಲ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಳೆದ ನಾಲ್ಕು ವರ್ಷಗಳ ಹಿಂದೆ ಟೆಂಡರ್ ಆಗಿದ್ದು ಗುತ್ತಿಗೆದಾರ ಕಾಮಗಾರಿ ನಡೆಸದೇ ಬಾಕಿಯಿರಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದೀಗ ಹೊಸ ಟೆಂಡರ್ ನಡೆಸಲಾಗಿದ್ದು ರೂ.15ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಲಿದ್ದು ಏಳು ಮೀಟರ್ ಅಗಲವಾಗಲಿದೆ. ಕಲ್ಲಡ್ಕ-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಮಂಗಿಲಪದವಿನಿಂದ ಅಡ್ಯನಡ್ಕ ತನಕ ರಸ್ತೆ ಅಭಿವೃದ್ಧಿಗೆ ರೂ.8ಕೋಟಿ ಅನುದಾನ ಮಂಜೂರುಗೊಂಡಿದೆ.

ನಾಡಕಚೇರಿ ಕಟ್ಟಡಕ್ಕೆ ರೂ.36ಲಕ್ಷ:
ಶಿಥಿಲಾವಸ್ಥೆಯಲ್ಲಿರುವ ವಿಟ್ಲ ಹಾಗೂ ಉಪ್ಪಿನಂಗಡಿಯ ನಾಡ ಕಚೇರಿಗಳಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ತಲಾ ರೂ.18ಲಕ್ಷ ಅನುದಾನ ಮಂಜೂರಾಗಿದೆ.

800ಮನೆ ಮಂಜೂರು:
ರಾಜೀವ ಗಾಂಧಿ ವಸತಿ ನಿಗಮದಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು ೮೦೦ ಮನೆಗಳು ಮಂಜೂರಾಗಿದೆ. ಪ್ರತಿ ಪಂಚಾಯತ್‌ಗಳಿಗೆ ೩೦-೫೦ ಮನೆಗಳು ದೊರೆಯಲಿದೆ. ನಗರ ಸಭಾ ವ್ಯಾಪ್ತಿಯಲ್ಲಿ ವಸತಿ ನಿವೇಶನಕ್ಕೆ 1900ಅರ್ಜಿಗಳಿದ್ದು ಇದಕ್ಕಾಗಿ ನಗರದ ವಿವಿಧ ಕಡೆಗಳಲ್ಲಿ ಒಟ್ಟು 15 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಪ.ಜಾತಿ, ಪ.ಪಂಗಡ, ವಿಕಲಚೇತನರು, ವಿಧವೆಯರು ಹಾಗೂ ಹಿರಿಯ ನಾಗರಿಕರಿಗೆ ಆಧ್ಯತೆ ನೀಡಿ ವಿತರಿಸಲಾಗುವುದು.

ರಾಜ್ಯದಲ್ಲಿಯೇ ಪುತ್ತೂರಿನಲ್ಲಿ ಅತೀ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳಿದ್ದು ಇದರ ಅಭಿವೃದ್ಧಿ ತಲಾ ರೂ.೧ಕೋಟಿ ಅನುದಾನ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಶಾಸಕರ ವಾರ್ ರೂಂ ಮೂಲಕ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದರು.

ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನವರ ಆರೋಪದ ಬಗ್ಗೆ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಚುನಾವಣೆ ಹತ್ತಿರ ಬಂದಾಗ ಇಂತಹ ಆರೋಪಗಳನ್ನು ಕಾಂಗ್ರೆಸ್‌ನವರು ಮಾಡುತ್ತಾರೆ. ನಾನು ಶಾಸಕನಾಗಿ ೪ ವರ್ಷಗಳು ಕಳೆದಿವೆ. ಈಗ ಯಾಕೆ ಆರೋಪ ಮಾಡುತ್ತಾರೆ? ದೇಶಕ್ಕೆ ಭ್ರಷ್ಟಾಚಾರ ನೀಡಿರುವುದೇ ಕಾಂಗ್ರೆಸ್. ಹೀಗಾಗಿ ಅವರಿಗೆ ಹೇಳುವ ನೈತಿಕತೆಯಿಲ್ಲ. ಭ್ರಷ್ಟಾಚಾರವನ್ನು ಈ ಹಂತಕ್ಕೆ ತಂದವರೇ ಅವರು. ಕಾಂಗ್ರೆಸ್‌ನವರಿಗೆ ಅಪಪ್ರಚಾರ ಮಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಕಾಂಗ್ರೆಸ್ ನೀರಿನಿಂದ ತೆಗೆದ ಮೀನಿನಂತೆ ಒದ್ದಾಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿರುವಾಗ ಅವರನ್ನೇ ಹೀಯಾಳಿಸಿದವರು ಇನ್ನು ನಮ್ಮನ್ನು ಬಿಡುತ್ತಾರೋ? ಎಂದ ಶಾಸಕರು ಭ್ರಷ್ಟ ಅಧಿಕಾರಿಗಳನ್ನು ಇಲ್ಲಿ ನಿಲ್ಲಲು ಬಿಡುವುದಿಲ್ಲ. ಖಂಡಿತಾ ಅವರನ್ನು ಕಳುಹಿಸಿಕೊಡಲು ಬದ್ದ ಎಂದರು.

ಎಸ್.ಪಿ ಕಚೇರಿಗೆ 19.5 ಎಕ್ರೆ ಜಾಗ:
ಜನರ ಹಿತ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಎಸ್.ಪಿ ಕಚೇರಿಯನ್ನು ತೆರೆಯಲಾಗುವುದು. ಪೊಲೀಸರ ವಸತಿಗೃಹ ಹಾಗೂ ಪರೇಡ್‌ಗೆ ಕೆಮ್ಮಿಂಜೆಯಲ್ಲಿ ೧೫ ಎಕರೆ, ಎಸ್.ಪಿ ಕಚೇರಿಗೆ ಚಿಕ್ಕಮುಡ್ನೂರಿನಲ್ಲಿ ೨ಎಕರೆ ಹಾಗೂ ಎಸ್.ಪಿ ಕಚೇರಿಯ ಅಧಿಕಾರಿಗಳ ವಸತಿಗೃಹಕ್ಕೆ ಬನ್ನೂರಿನಲ್ಲಿ ೨.೫ ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು.

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ಜಯಂತಿ ನಾಯಕ್, ರಾಜೇಶ್ ಬನ್ನೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here