ವಿಟ್ಲ ಕನ್ಯಾನದಲ್ಲಿ ಅಪ್ರಾಪ್ತ ಬಾಲಕಿ ಸಾವಿನ ಪ್ರಕರಣ – ಪುತ್ತೂರಿನಲ್ಲಿ ಪ್ರತಿಭಟನೆ

0

  • ಆರೋಪಿಯ ಮನೆಯವರನ್ನು ಬಂಧಿಸುವಂತೆ ವಿಹಿಂಪ, ಬಜರಂಗದಳ ಆಗ್ರಹ

ಪುತ್ತೂರು: ವಿಟ್ಲದ ಕನ್ಯಾನದಲ್ಲಿ ಅಪ್ರಾಪ್ತ ಬಾಲಕಿಯ ಸಾವಿಗೆ ಸಂಬಂಧಿಸಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿ ಶಾಹುಲ್‌ನನ್ನು ಬಂಧಿಸಿ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇಂತಹ ಕೃತ್ಯಕ್ಕೆ ಬೆಂಬಲ ನೀಡಿರುವ ಶಾಹುಲ್‌ನ ಮನೆಯವರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಆಗ್ರಹಿಸಿದ್ದಾರೆ.

ವಿಟ್ಲ ಕನ್ಯಾನದ ಅಪ್ರಾಪ್ತ ದಲಿತ ಬಾಲಕಿಯ ಸಾವಿನ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಮೇ 9ರಂದು ವಿಶ್ವ ಹಿಂದು ಪರಿಷತ್ ಬಜರಂಗದಳದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ ತೆಂಕಿಲ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ ಕುಂಜೂರು ಪಂಜ, ಪುತ್ತೂರು ನಗರ ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ವಿಶ್ವ ಹಿಂದು ಪರಿಷತ್ ಪುತ್ತೂರು ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿ ಕುಮಾರ್ ಕೈತಡ್ಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಸಂಚಾಲಕ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here