ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನ ರಂಗಮಂದಿರ ಕಾಮಗಾರಿಗೆ ಚಾಲನೆ

0

ಪುತ್ತೂರು:ಇತ್ತೀಚಿಗೆ ನಡೆದ ದೇವಸ್ಥಾನದ ಯಶಸ್ವಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಂತರ ನಡೆದ ಅಭಿನಂದನಾ ಸಭೆಯಲ್ಲಿ ನಡೆದ ಲೆಕ್ಕಪತ್ರ ಮಂಡನೆ ಯಲ್ಲಿ ಸುಮಾರು 12.5ಲಕ್ಷ ರು ಗಳ ಉಳಿಕೆ ಹಣದಲ್ಲಿ ದೇವಾಲಯದಲ್ಲಿ ಸಾರ್ವಜನಿಕರ ಭಕ್ತಾದಿಗಳ ಉಪಯೋಗಕ್ಕೆ ನೂತನ ರಂಗಮಂಟಪದ ಅವಶ್ಯಕತೆಯನ್ನು ಕಂಡು ಬ್ರಹ್ಮಾಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ, ವ್ಯವಸ್ಥಾಪನ ಸಮಿತಿ ನಿರ್ಣಯದಂತೆ ದೇವಾಲಯದ ವಠಾರದಲ್ಲಿ ರಂಗಮಂಟಪ ನಿರ್ಮಿಸಲು ನಿರ್ಣಯಿಸಲಾಗಿತ್ತು, ಇದರ ಚಾಲನೆಯನ್ನು ಸಮಿಯ ಗೌರವಾಧ್ಯಕ್ಷರಾದ ದಾನಿ ಮಿತ್ರ೦ಪಾಡಿ ಜಯರಾಮ ರೈ ಅಬುದಾಬಿ ಯವರು ಕಾಮಗಾರಿಗೆ ನಾರೀಕೆಳವನ್ನು ಒಡೆಯುವ ಮೂಲಕ ಚಾಲನೆಯನ್ನು ನೀಡಿದರು.

ಬಳಿಕ ಮಾತನಾಡಿದ ಅವರು ದೇವಸ್ಥಾನವು ಬ್ರಹ್ಮಕಲಶೋತ್ಸವದ ನಂತರದ ದಿನಗಳಲ್ಲಿ ಹೆಚ್ಚು ಭಕ್ತರ ಆಕರ್ಷಣೆ ಗೆ ಒಳಗಾಗಿರುತ್ತದೆ, ಹೆಚ್ಚು ಹೆಚ್ಚು ಭಕ್ತರು ದೇವಾಲಯಕ್ಕೆ ಬರುತ್ತಿದ್ದು ದೇವಾಲಯದ ಅವಶ್ಯಕ ಕಾಮಗಾರಿಗಳನ್ನು ನಡೆಸಬೇಕಾಗುತ್ತದೆ. ದೇವಳದ ಅಭಿವೃದ್ದಿ ಕಾರ್ಯಕ್ಕೆ 50ಸಾವಿರ ದೇಣಿಗೆಯನ್ನು ಘೋಷಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರು ಮಾತನಾಡಿ ದೇವಸ್ಥಾನದ ಸೇವೆಯನ್ನು ನೆರವೇರಿಸಳು ನಮಗೆಲ್ಲರಿಗೂ ದೊರೆತ ಪುಣ್ಯ ಅವಕಾಶವಾಗಿದ್ದು ಅದೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ ಆತ್ಮ ತೃಪ್ತಿ ನಮಗೆಲ್ಲರಿಗೂ ಇದೆ. ಸಹಕರಿಸಿದ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬೋಲೋಡಿಗುತ್ತು ಅರುಣ್ ಕುಮಾರ್ ಆಳ್ವಾ, ಜೀರ್ಣೋದ್ದಾರ ಸಮಿತಿ ಕುಡ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ಶ್ರೀ ರಂಗ ಶಾಸ್ತ್ರೀ, ಮತ್ತು ಅರ್ಚಕರಾದ ಸುಭ್ರಮಣ್ಯ ಭಟ್, ಬ್ರಹ್ಮಕಲಾಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ್ ರೈ ಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ವಿಶ್ವನಾಥ್ ರೈ ಕುಕ್ಕುಂಜೋಡು, ಸದಾಶಿವ ರೈ ಗುತ್ತು, ರುಕ್ಮ ನಾಯ್ಕ್, ಪದ್ಮಾವತಿ ಶೀನಪ್ಪ ರೈ, ಬ್ರಹ್ಮಕಲಾಶೋತ್ಸವ ಸಮಿತಿ ಗೌರವಧ್ಯಕ್ಷ ಪ್ರಕಾಶ್ ಪುತ್ತೂರಾಯ, ಜನ್ಮ ಫೌಂಡೇಶನ್‌ನ ಹರ್ಷ ಕುಮಾರ್ ರೈ ಮಾಡಾವು ,ಮಹಾಬಲ ರೈ, ಧನಂಜಯ ರೈ,ಕೊಡೆಂಕಿರಿ ಚಂದ್ರಹಾಸ್ ರೈ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here