ಕಥೋಲಿಕ್ ಸಭಾ ಪುತ್ತೂರು ವಲಯ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್ ಪುನರಾಯ್ಕೆ

0

  • ಕಾರ್ಯದರ್ಶಿ:ಲವೀನಾ ಪಿಂಟೋ,ಕೋಶಾಧಿಕಾರಿ:ನವೀನ್ ಬ್ರ್ಯಾಗ್ಸ್

ಪುತ್ತೂರು: ಕಥೋಲಿಕ್ ಸಭಾ ಪುತ್ತೂರು ವಲಯ ಇದರ2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಅಧ್ಯಕ್ಷರಾಗಿ ಪುತ್ತೂರು ಪುರಸಭಾ ಮಾಜಿ ಉಪಾಧ್ಯಕ್ಷ, ಸಾಮೆತ್ತಡ್ಕ ನಿವಾಸಿ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಜೋಸೆಫ್ ಅರುಣ್ ಕ್ರಾಸ್ತಾ ಸುಳ್ಯ, ಕಾರ್ಯದರ್ಶಿಯಾಗಿ ಶಿಕ್ಷಕಿ ಲವೀನಾ ಪಿಂಟೋ ಉಪ್ಪಿನಂಗಡಿ, ಸಹ ಕಾರ್ಯದರ್ಶಿಯಾಗಿ ಸ್ಮಿತಾ ರೊಡ್ರಿಗಸ್ ನೆಲ್ಯಾಡಿ, ಕೋಶಾಧಿಕಾರಿಯಾಗಿ ನವೀನ್ ಬ್ರ್ಯಾಗ್ಸ್ ಉಪ್ಪಿನಂಗಡಿ, ಸಹ ಕೋಶಾಧಿಕಾರಿಯಾಗಿ ಪೌಲ್ ಮೊಂತೇರೋ ಪುತ್ತೂರು, ಆಮ್ಚೊ ಸಂದೇಶ್ ಪತ್ರಿಕಾ ಪ್ರತಿನಿಧಿಯಾಗಿ ಪ್ಯಾಟ್ರಿಕ್ ಲೋಬೋ ಪುತ್ತೂರು, ಸ್ತ್ರೀ ಹಿತಾ ಸಂಚಾಲಕಿಯಾಗಿ ಲೂರ್ದ್ ಮೇರಿ ಸುಳ್ಯ, ರಾಜಕೀಯ ಸಂಚಾಲಕರಾಗಿ ವಿಕ್ಟರ್ ಸ್ಟೆಲ್ಲಾ ನೆಲ್ಯಾಡಿ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಜೋನ್ ಮೊಂತೇರೋ ನೆಲ್ಯಾಡಿ, ಯುವ ಸಮುದಾಯ ಸಂಚಾಲಕರಾಗಿ ಅವಿನಾಶ್ ಡಿ’ಸೋಜ ನೆಲ್ಯಾಡಿರವರು ಆಯ್ಕೆಯಾಗಿದ್ದಾರೆ.

ಕಥೋಲಿಕ್ ಸಭಾ ಮಂಗಳೂರು ಕೇಂದ್ರದ ಪ್ರತಿನಿಧಿಯಾಗಿರುವ ನೈಜಿಲ್ ಪಿರೇರಾ ಹಾಗೂ ಆಂಡ್ರೂ ನೊರೋನ್ಹಾರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಥೋಲಿಕ್ ಸಭಾ ಪುತ್ತೂರು ವಲಯವು 12 ಚರ್ಚ್‌ಗಳಾದ ಪುತ್ತೂರು, ಸುಳ್ಯ, ಬೆಳ್ಳಾರೆ, ಮರೀಲು, ಬನ್ನೂರು, ನಿಡ್ಪಳ್ಳಿ, ಉಪ್ಪಿನಂಗಡಿ, ಕಡಬ, ಕೊಕ್ಕಡ, ನೆಲ್ಯಾಡಿ, ಪಂಜ, ಸಂಪಾಜೆ ಚರ್ಚ್‌ಗಳನ್ನೊಳಗೊಂಡಿದೆ.

LEAVE A REPLY

Please enter your comment!
Please enter your name here