ನರೇಂದ್ರ ಪ.ಪೂ ಕಾಲೇಜಿನಲ್ಲಿ ವೇದ ಪದ್ಧತಿ ವೇಗದಲ್ಲಿ ಗಣಿತ ನೆನಪು ಕುರಿತು ವಿಶೇಷ ಉಪನ್ಯಾಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆತ್ಮಸಾಕ್ಷಿಯ ಜೊತೆ ಮೌಲ್ಯ ಮಾರ್ಗ ಅನುಸರಿಸಿ – ಚಾರ್ಟರ್ಡ್ ಅಕೌಂಟೆಂಟ್ ಅನೀಶ್

 

ಪುತ್ತೂರು: ವಿದ್ಯಾರ್ಥಿಗಳು ನಂಬಿಕೆಗಳ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕು.ಮೌಲ್ಯದ ಬೇರುಗಳು ಗಟ್ಟಿಯಾದಾಗ ಎಲ್ಲಿ ಬೇಕಾದರೂ ಜೀವನ ಕಂಡುಕೊಳ್ಳಬಹುದು.ಬದುಕಿನ ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದು ಎಂದು ಪುತ್ತೂರಿನ ಚಾರ್ಟರ್ಡ್ ಅಕೌಂಟೆಂಟ್ ಅನೀಶ್ ಇವರು ಹೇಳಿದರು.

 

ನರೇಂದ್ರ ಪ.ಪೂ.ಕಾಲೇಜಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ತರಂಗ 2022 ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಚಾರ್ಟರ್ಡ್ ಅಕೌಂಟೆಂಟ್ ಅನೀಶ್ ಇವರು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಮುಂದಿರುವ ಅಪರಿಮಿತ ಅವಕಾಶಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಯಾವ ವಿಷಯಗಳಲ್ಲಿ ಹೆಚ್ಚು ಬಲವಾಗಿದ್ದೀರಿ, ದುರ್ಬಲರಾಗಿದ್ದೀರಿ ಎಂಬ ಅಂಶಗಳನ್ನು ಪಟ್ಟಿ ಮಾಡಿಕೊಂಡು ಅಧ್ಯಯನ ನಡೆಸಬೇಕು.ಅನ್ವಯ ಮಾದರಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಹೆಚ್ಚು ಕೇಳುವುದರಿಂದ ಓದಿದ ವಿಷಯಗಳನ್ನು ಪ್ರಚಲಿತ ವಿದ್ಯಾಮಾನ ಮತ್ತು ಸುತ್ತಮುತ್ತ ನಡೆಯುವ ಸಂಗತಿಗಳೊಂದಿಗೆ ಸಮೀಕರಿಸಿ ಅನ್ವಯಿಸಿಕೊಳ್ಳಬೇಕು.ಇದರಿಂದ ವಿಷಯದಲ್ಲಿ ಪಕ್ವತೆ ಸಿಗುತ್ತದೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ. ಎಂದು ತಿಳಿಸಿದರು.

ಸಿಎ ಮತ್ತು ಸಿಪಿಟಿ ಪರೀಕ್ಷೆಗಳನ್ನು ಎದುರಿಸುವ ಸುಲಭೋಪಾಯಗಳನ್ನು ತಿಳಿಸಿದರು.ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ ಮತ್ತು ಉತ್ತಮ ನಾಯಕತ್ವದ ಗುಣಲಕ್ಷಣಗಳನ್ನು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ವಿವರಿಸಿದರು.ಪರೀಕ್ಷೆಗೆ ಅವಶ್ಯವಿರುವ ಮಾನಸಿಕ ಸ್ಥಿತಿ ಕುರಿತು ವಿವರಿಸಿದರು.

ನಂತರದ ಅವಧಿಗಳಲ್ಲಿ ,ಸವಣೂರಿನ ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಸ್ಕೃತ ಉಪನ್ಯಾಸಕರಾದ ಕುಶಲ ಇವರು ವೇದ ಪದ್ಧತಿ ವೇಗದಲ್ಲಿ ಗಣಿತ ನೆನಪು ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಗಣಿತವನ್ನು ಕಲಿಯಲು ವೇದಗಳ ಕಾಲದಲ್ಲಿ ರೂಢಿಯಲ್ಲಿದ್ದ ವೇದ ಮಾದರಿಯ ಗಣಿತ ಕಲಿಕೆ ಸರಳ ವಿಧಾನವಾಗಿದೆ.ಆಧುನಿಕ ಗಣಿತ ಪದ್ಧತಿಯಲ್ಲಿ ಇರುವಂತೆ ವೇದಗಣಿತ ಪದ್ಧತಿಯಲ್ಲಿ ಯಾವುದೇ ಸೂತ್ರಗಳಿಲ್ಲ.ವೇದಗಣಿತದಲ್ಲಿ ನೇರವಾಗಿ ಉತ್ತರಿಸಬಹುದು. ಆಧುನಿಕ ಗಣಿತ ಪದ್ಧತಿಯಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಹಾಗೂ ಒತ್ತಡ ಉಂಟಾಗುವ ಜೊತೆಗೆ ಸಮಯದ ಅಭಾವವು ತಲೆದೋರುತ್ತದೆ.ವೇದಗಣಿತ ತೀರ ಸರಳ ವಿಧಾನವಾಗಿದ್ದು ಪ್ರಾಥಮಿಕ ಹಂತದಲ್ಲೇ ರೂಢಿಸಿಕೊಂಡಲ್ಲಿ ಉಪಯೋಗವಾಗುತ್ತದೆ. ಎಂದು ಸಂಸ್ಕೃತ ಉಪನ್ಯಾಸಕರಾದ ಕುಶಲರವರು ಹೇಳಿದರು.

ವೇದಗಣಿತ ಸರಳ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಆಕರ್ಷಕ ಮೋಜಿನ ಆಟಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಆಡಿಸಿದರು. ವಿಜೇತರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ಕಾರ್ಯಾಗಾರದಲ್ಲಿ ಪುತ್ತೂರು,ಬಂಟ್ವಾಳ,ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಧುರಾ,  ಅಕ್ಷತಾ ಸ್ವಾಗತಿಸಿ,ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.