ದೇಶಪ್ರೇಮ, ಸಂಸ್ಕಾರದೊಂದಿಗೆ ನಾಳಿನ ಸಮಾಜವನ್ನು ನಿರ್ಮಿಸುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆಗಳು

0

  ಪುತ್ತೂರು: ನಾಳಿನ ಪ್ರಜೆಗಳಲ್ಲಿ ರಾಷ್ಟ್ರಭಕ್ತಿ, ಸಂಸ್ಕಾರವನ್ನು ನಿರಂತರ ತುಂಬುವ, ಯಾವುದೇ ಚಟಗಳು ಮಕ್ಕಳ ಹತ್ತಿರಕ್ಕೂ ಸುಳಿಯದಂತೆ ಕಾಪಾಡುವುದರ ಜತೆಗೆ ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ರ್‍ಯಾಂಕ್ ದಾಖಲಿಸುತ್ತಿರುವ, ಎಲ್ಲಕ್ಕಿಂತ ಮುಖ್ಯವಾಗಿ ಹೆತ್ತವರ ಪಾಲಿಗೊಂದು ಭರವಸೆಯಾಗಿ ಕಾಣುತ್ತಿರುವ ಒಂದು ವಿಶೇಷ ಸಂಸ್ಥೆ ಅಂಬಿಕಾ ಪದವಿಪೂರ್ವ ವಿದ್ಯಾಲಯ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬೆಳೆದು, ಇಂದು ರಾಜ್ಯಕ್ಕೇ ತನ್ನ ಸುಗಂಧವನ್ನು ಪಸರಿಸುತ್ತಿರುವ ಅಂಬಿಕಾ ವಿದ್ಯಾಸಂಸ್ಥೆಗಳ ಸಾಧನೆಯ ಹಾದಿ ಮೈನವಿರೇಳಿಸುವಂತಹದ್ದು.

ಅಂಬಿಕಾ ಪದವಿಪೂರ್ವ ವಿದ್ಯಾಲಯ ಸ್ಥಾಪನೆಯಾದದ್ದೇ ಗುರುತರ ಉದ್ದೇಶದೊಂದಿಗೆ. ‘ಜ್ಞಾನಂ ವಿಜ್ಞಾನ ಸಹಿತಂ’ ಎನ್ನುವ ಕಲ್ಪನೆ, ದೇಶಕ್ಕೆ ಕೇವಲ ಒಬ್ಬ ಡಾಕ್ಟರ್, ಇಂಜಿನಿಯರ್ ಕೊಟ್ಟರೆ ಸಾಲದು, ಆತ ರಾಷ್ಟ್ರಭಕ್ತನೂ ಆಗಿರಬೇಕು, ಸಂಸ್ಕಾರವಂತನಾಗಿಯೂ ಮೂಡಿಬರಬೇಕು ಎಂಬ ಮಹೋದ್ದೇಶ ಈ ಸಂಸ್ಥೆಯ ಹಿನ್ನಲೆಯಲ್ಲಿದೆ. ಹಾಗಾಗಿಯೇ ವಿದ್ಯಾರ್ಥಿಗಳು ಈ ಸಂಸ್ಥೆಗೆ ಅಡಿಯಿಟ್ಟ ತಕ್ಷಣ ಅವರಿಗೆ ಭಗವದ್ಗೀತೆ ಕೇಳಿಸುತ್ತದೆ. ವಿಷ್ಣು ಸಹಸ್ರನಾಮ ನಿತ್ಯದ ಪಾಠವಾಗುತ್ತದೆ. ದೇಶಭಕ್ತಿಯ ಧಾರೆ ನಿರಂತರವಾಗಿ ಅವರನ್ನು ತೋಯಿಸುತ್ತದೆ. ದೇಶದ ನಿಜ ಇತಿಹಾಸದ ದಿಗ್ದರ್ಶನವಾಗುತ್ತದೆ. ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಧ್ಯಾನ, ಪ್ರಾಣಾಯಾಮ, ಭಗವದ್ಗೀತಾ ಪಠಣ, ಭಾರತೀಯ ಕಾಲ ಗಣನೆಯ ಲೆಕ್ಕಾಚಾರಗಳ ವಿವರ ಇತ್ಯಾದಿಗಳು ಇಲ್ಲಿನ ನಿತ್ಯಕಾಯಕ.

ಇದರ ಜತೆಗೆ ದೇಶದ ಔನ್ನತ್ಯ, ದೇಶದ ಕುರಿತು ಹೆಮ್ಮೆ ಪಡಬಹುದಾದ ನೂರಾರು ವಿಷಯಗಳು, ದೇಶ ಕಂಡ ಮಹಾನ್ ವ್ಯಕ್ತಿಗಳು ॒ಈ ಎಲ್ಲ ಸಂಗತಿಗಳ ಬಗೆಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ನಮ್ಮ ದೇಸೀಯವಾದ ಆಚಾರ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಶಿವರಾತ್ರಿ, ರಾಮ ನವಮಿ, ದೀಪಾವಳಿ, ಯುಗಾದಿಯೇ ಮೊದಲಾದ ನಮ್ಮ ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ.

ಪಿಯು ಶಿಕ್ಷಣ ಕ್ರಾಂತಿ : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮೊದಲಿಗೆ ಆರಂಭಿಸಿದ್ದು ಪಿಯು ಶಿಕ್ಷಣವನ್ನು. ಭಾರತೀಯ ಸಂಸ್ಕಾರ, ದೇಶಪ್ರೇಮದ ಜತೆಗೆ ಆಧುನಿಕ ಶಿಕ್ಷಣದ ಕಲ್ಪನೆಯಲ್ಲಿ ಅಡಿಯಿಟ್ಟ ಪಿಯು ಶಿಕ್ಷಣ ಇಡಿಯ ರಾಜ್ಯದಲ್ಲೇ ಇಂದು ಹೆಸರುವಾಸಿಯಾಗಿದೆ. ಭಾರತದ ಮಣ್ಣಿನಲ್ಲಿ ಹುದುಗಿರುವ ಆಧ್ಯಾತ್ಮದ ಸಾರವನ್ನು ಎಳೆಯ ಮನಸ್ಸುಗಳಿಗೆ ಉಣಬಡಿಸುತ್ತಾ ದೇಶದ ಬಗೆಗೆ ವಿದ್ಯಾರ್ಥಿಗಳು ಹೆಮ್ಮೆಪಡುವಂತೆ ಇಲ್ಲಿ ವ್ಯಕ್ತಿತ್ವಗಳನ್ನು ರೂಪಿಸಲಾಗುತ್ತಿದೆ. ದೈನಂದಿನ ಓಡಾಟ ನಡೆಸುವವರಿಗಾಗಿ ಹಾಗೂ ಹಾಸ್ಟೆಲಲ್ಲಿ ಉಳಿದು ಅಧ್ಯಯನ ನಡೆಸುವವರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಎರಡು ಪಿಯು ಕಾಲೇಜುಗಳನ್ನು ಆರಂಭಿಸಿದ್ದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಹೆಚ್ಚುಗಾರಿಕೆ.


ಅಂಬಿಕಾ ಪಿಯು ಸಂಸ್ಥೆಗಳು ಹೆಸರುವಾಸಿಯಾಗುವುದಕ್ಕೆ ಮತ್ತೊಂದು ಕಾರಣ ಪ್ರತಿ ವರ್ಷ ಜೆಇಇ, ನೀಟ್ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಗಳಿಸುತ್ತಿರುವ ರಾಂಕ್‌ಗಳು. ಅತ್ಯುತ್ತಮ ಶಿಕ್ಷಕರಿಂದ ನಿಗದಿತ ಶಿಕ್ಷಣ ಒದಗಿಸುತ್ತಿರುವುದಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ತಜ್ಞರು ಆಗಮಿಸಿ ಜೆಇಇ, ನೀಟ್‌ನಂತಹ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ದೇಶದ ಪ್ರತಿಷ್ಟಿತ ಸಂಸ್ಥೆಯಾದ ‘ಎಂ.ಟಿ.ಜಿ’ ಜತೆಗೆ ಅಂಬಿಕಾ ಸಂಸ್ಥೆಯ ಒಡಂಬಡಿಕೆ ಇದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಎಂಟಿಜಿ ವತಿಯಿಂದ ಅಧ್ಯಯನ ಸಾಮಾಗ್ರಿಗಳನ್ನು ಲಭ್ಯವಾಗುತ್ತಿವೆ. ಅಂತಹ ಸಾಮಾಗ್ರಿಗಳು ವಿದ್ಯಾರ್ಥಿಗಳ ರ್‍ಯಾಂಕಿಂಗ್ ಉತ್ತಮವಾಗುವಲ್ಲಿ ಶ್ರಮಿಸುತ್ತಿವೆ. ಪರಿಣಾಮವಾಗಿ ಸಾಲು ಸಾಲು ರ್‍ಯಾಂಕ್‌ಗಳು ಅಂಬಿಕಾ ಸಂಸ್ಥೆಯಲ್ಲಿ ಪಿಯು ಓದಿದ ವಿದ್ಯಾರ್ಥಿಗಳತ್ತ ಹರಿದುಬರುತ್ತಿವೆ.

೨೦೧೯-೨೦ನೇ ಶೈಕ್ಷಣಿಕ ವರ್ಷದಿಂದೀಚೆಗೆ ಶೇಕಡಾ ನೂರು ಫಲಿತಾಂಶ ದಾಖಲು ಮಾಡಿರುವುದು, ಸುಮಾರು ಇಪ್ಪತ್ತಕ್ಕೂ ಅಧಿಕ ಮಂದಿ ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವುದು, ಹಾಗೆಯೇ ಹದಿನೈದಕ್ಕೂ ಮಿಕ್ಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತೇರ್ಗಡೆಗೊಂಡಿರುವುದು, ಸಿಇಟಿಯಲ್ಲಿ ಸಾವಿರ ರ್‍ಯಾಂಕ್ ಒಳಗಡೆ ಸುಮಾರು ಅರವತ್ತೈದು ಮಂದಿ ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿರುವುದು… ಇವೆಲ್ಲ ಅಂಬಿಕಾ ಶಿಕ್ಷಣ ಸಂಸ್ಥೆಯ ಮುಕುಟಕ್ಕೇರಿದ ಹೆಮ್ಮೆಯ ಗರಿಗಳು.

ಅಂಬಿಕಾ ಸಂಸ್ಥೆಯಲ್ಲಿ ಪಿಯು ಕಾಮರ್ಸ್ ಶಿಕ್ಷಣವನ್ನೂ ಒದಗಿಸಿಕೊಡಲಾಗುತ್ತಿದೆ. ಪಿಯುಸಿಯಿಂದಲೇ ಸಿಎ, ಸಿ.ಎಸ್ ತರಬೇತಿಯನ್ನು ಕಾಮರ್ಸ್ ಶಿಕ್ಷಣದೊಂದಿಗೆ ಸೇರಿಸಲಾಗಿದೆ. ಮುಂದೆ ಬಿ.ಕಾಂ ಕೂಡ ಅಂಬಿಕಾ ಪದವಿ ಕಾಲೇಜಿನಲ್ಲಿ ಲಭ್ಯ ಇರುವುದರಿಂದ ಐದು ವರ್ಷಗಳ ಇಂಟಗ್ರೇಟೆಡ್ (ಸಿ.ಎ/ಸಿ.ಎಸ್ ಸಮೇತ) ಶಿಕ್ಷಣ ಪಡೆಯುವ ಅವಕಾಶವೂ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಇದರೊಂದಿಗೆ ಬ್ಯಾಂಕಿಂಗ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಐಬಿಪಿಎಸ್ ಪರೀಕ್ಷಾ ತರಬೇತಿಯನ್ನೂ ಒದಗಿಸಿಕೊಡಲಾಗುತ್ತಿರುವುದು ವಿದ್ಯಾರ್ಥಿಗಳಿಗೆ ಉಪಯುಕ್ತ ಎನಿಸಿದೆ. ಇದರೊಂದಿಗೆ ಎಸಿ (ಏರ್ ಕಂಡೀಷನ್) ತರಗತಿಗಳು ವಿದ್ಯಾರ್ಥಿಗಳ ಓದಿಗೆ ಪೂರಕವೆನಿಸಿವೆ.

ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಗಮನಿಸುವುದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಓರ್ವ ಮಾರ್ಗದರ್ಶೀ ಉಪನ್ಯಾಸಕರಿದ್ದು, ಕಲಿಕೆಯಲ್ಲಿ ಹಿಂದುಳಿದವರಿಗಾಗಿ ವಿಶೇಷ ತರಗತಿಗಳು, ತಂತ್ರಜ್ಞಾನ ಆಧಾರಿತ ತರಗತಿಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿದೆ. ಮಾತ್ರವಲ್ಲದೆ ವಿಶಾಲವಾದ ಕ್ರೀಡಾಂಗಣ, ಈಜುಕೊಳ, ಉತ್ಕೃಷ್ಟ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯಗಳು, ಹುಡುಗರು ಮತ್ತು ಹುಡುಗಿಯರಿಗಾಗಿ ಅತ್ಯುತ್ತಮ ಹಾಸ್ಟೆಲ್ ಹಾಗೂ ಗುಣಮಟ್ಟದ ಸಸ್ಯಾಹಾರಿ ಆಹಾರ ವ್ಯವಸ್ಥೆಯೇ ಮೊದಲಾದವುಗಳು ಸಂಸ್ಥೆಯನ್ನು ಮತ್ತಷ್ಟು ಆಪ್ತವೆನಿಸುವಂತೆ ಮಾಡಿವೆ. ಹಾಸ್ಟೆಲ್‌ನಲ್ಲೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ಉಪನ್ಯಾಸಕರು ಲಭ್ಯರಿರುವುದು ವಿದ್ಯಾರ್ಥಿಗಳಿಗೆ ವರದಾನವೆನಿಸಿದೆ.

ಎನ್ ಡಿ ಎ ಕೋಚಿಂಗ್ : ಭಾರತೀಯ ಸೇನೆಗೆ ಆಯ್ಕೆಯಾಗುವುದು ಅನೇಕ ಯುವಜನರ ಕನಸು. ಅದರಲ್ಲೂ ಆಫೀಸರ್ ಆಗಿ ಆಯ್ಕೆಯಾಗುವುದೆಂದರೆ ಬಹುದೊಡ್ಡ ಹೆಮ್ಮೆಯ ವಿಚಾರವೂ ಹೌದು. ಹಾಗಾಗಿಯೇ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಬಗೆಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ಸಿದ್ಧತೆ ನಡೆದಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಎನ್ ಡಿ ಎ ಪರೀಕ್ಷೆಗಳಿಗೆ ಅಂಬಿಕಾ ಪಿಯು ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ತರಬೇತಿ ನೀಡುತ್ತಿರುವ ದೇಶದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಅಂಬಿಕಾ ಪಿಯು ಕಾಲೇಜೂ ಸೇರಿದೆ ಎಂಬುದು ಗಮನಾರ್ಹ ವಿಚಾರ. ಸೇನೆಯಲ್ಲಿ ವಿವಿಧ ಹುದ್ದೆಯಲ್ಲಿದ್ದವರು ಆಗಾಗ್ಗೆ ಬಂದು ತರಬೇತಿ ನೀಡುತ್ತಿರುವುದೂ ಉಲ್ಲೇಖಾರ್ಹ.

ಉಚಿತ ಶಿಕ್ಷಣ ಹಾಗೂ ಶುಲ್ಕ ವಿನಾಯಿತಿ: ಹತ್ತನೆಯ ತರಗತಿಯಲ್ಲಿ ಪೂರ್ಣಾಂಕ ಪಡೆದವರಿಗೆ ಹಾಸ್ಟೆಲ್ ಸಹಿತ ಸಂಪೂರ್ಣ ಉಚಿತ ಶಿಕ್ಷಣ ದೊರಕಲಿದೆ. ೬೨೦ಕ್ಕಿಂತ ಅಧಿಕ ಅಂಕ ಪಡೆದವರಿಗೆ ಐವತ್ತು ಶೇಕಡಾದಷ್ಟು ರಿಯಾಯಿತಿ ದೊರಕಲಿದೆ. ಹಾಗೆಯೇ ಆರು ನೂರಕ್ಕಿಂತ ಅಧಿಕ ಅಂಕ ಪಡೆದವರಿಗೂ ಶುಲ್ಕದಲ್ಲಿ ವಿನಾಯಿತಿ ದೊರೆಯುತ್ತದೆ ಎಂಬುದು ಗಮನಾರ್ಹ.
ದಾಖಲಾತಿ ಆರಂಭ : ಅಂಬಿಕಾ ಪದವಿ ಹಾಗೂ ಪದವಿಪೂರ್ವ ಕಾಲೇಜು ಹಾಗೂ ಸಿಬಿಎಸ್‌ಇ ವಿದ್ಯಾಲಯಗಳಲ್ಲಿ 2022-23ರ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆರಂಭಗೊಂಡಿದ್ದು, ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ತಕ್ಷಣ ಆಗಮಿಸುವ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಅವಕಾಶ ದೊರಕಲಿದೆ. ಹೆಚ್ಚಿನ ಮಾಹಿತಿಗಾಗಿ www.ambikavidyalaya.com <http://www.ambikavidyalaya.com> ಈ ವೆಬ್‌ಸೈಟ್ ವಿಳಾಸ ಅಥವ 9448835488 ಸಂಖ್ಯೆಯನ್ನು ಸಂಪರ್ಕಿಸಬಹುದು.

2021-22ನೇ ಸಾಲಿನ ಸಾಧನೆಗಳು
ಜೆಇಇ ಪರೀಕ್ಷೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಗೌತಮ್ ಎ.ಎಚ್ ೯೯.೩೬ ಪರ್ಸೆಂಟೈಲ್ ಗಳಿಸುವುದರ ಮೂಲಕ ಪುತ್ತೂರು ತಾಲೂಕಿನಲ್ಲೇ ಜೆಇಇ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಾಧನೆ ತಾಲೂಕಿನಲ್ಲೇ ಜೆಇಇ ಪರೀಕ್ಷೆಯಲ್ಲಿ ಪಿ.ಯು ಸಂಸ್ಥೆಯೊಂದರಿಂದ ಅತೀ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ೯೦ ಪರ್ಸೆಂಟೈಲ್‌ಗಿಂತಲೂ ಅಧಿಕ ಅಂಕ ಪಡೆದ ಸಾಧನೆ. ನೀಟ್ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲೇ ಸಂಸ್ಥೆಯೊಂದರಲ್ಲಿ ಅತ್ಯಧಿಕ ಮಂದಿ ವಿದ್ಯಾರ್ಥಿಗಳಿಗೆ ೫೦೦ಕ್ಕಿಂತಲೂ ಅಧಿಕ ಅಂಕ ದೊರೆತ ಸಾಧನೆ. ನೀಟ್ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನಲ್ಲೇ ಸಂಸ್ಥೆಯೊಂದರಲ್ಲಿ ಅತ್ಯಧಿಕ ಮಂದಿ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳಿಗೆ ಅರ್ಹತೆ ಪಡೆದ ಸಾಧನೆ.೨೦೨೦-೨೧ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೧೭ ಮಂದಿ ವಿದ್ಯಾರ್ಥಿಗಳು ೬೦೦ ಅಂಕಗಳಲ್ಲಿ ಪೂರ್ಣ ೬೦೦ ಅಂಕ ಪಡೆದ ಸಾಧನೆ.

LEAVE A REPLY

Please enter your comment!
Please enter your name here