ಮಾಯಿಲಕೋಟೆ ಪ್ರತಿಷ್ಠಾ ಮಹೋತ್ಸವ- ಮೇ.12ರಂದು ನೆಲ್ಯಾಡಿಯಿಂದ ಹೊರೆಕಾಣಿಕೆ

0

ನೆಲ್ಯಾಡಿ: ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ನಡೆಯುವ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವದ ಅಂಗವಾಗಿ ಮೇ.12ರಂದು ಬೆಳಿಗ್ಗೆ ನೆಲ್ಯಾಡಿ ಭಾಗದಿಂದ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ ಎಂದು ನೆಲ್ಯಾಡಿ ವಲಯ ಸಂಚಾಲಕರೂ, ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷರೂ ಆದ ಜಯಾನಂದ ಬಂಟ್ರಿಯಾಲ್‌ರವರು ತಿಳಿಸಿದ್ದಾರೆ.

ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತ್ತೊಟ್ಟು, ಬಲ್ಯ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಮೇ. 12ರಂದು ಬೆಳಿಗ್ಗೆ 10.30ಕ್ಕೆ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಮಾಯಿಲಕೋಟೆಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಗ್ರಾಮಸ್ಥರು ಸಹಕರಿಸುವಂತೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here