ಸವಣೂರು : ಕಂಚಿಗಾರ ಕೆರೆ ಒತ್ತುವರಿ ತೆರವು ವಿಚಾರ-ದಾಖಲೆ ಹಾಜರುಪಡಿಸಲು ಜಿಲ್ಲಾ ನ್ಯಾಯಾಲಯದಿಂದ ತಹಶೀಲ್ದಾರ್‌ಗೆ ನೋಟಿಸ್

0

ಸವಣೂರು: ಸವಣೂರು ಗ್ರಾಮದ ದೊಡ್ಡಕೆರೆ ಎಂದೇ ಹೆಸರುವಾಸಿಯಾಗಿರುವ ಕಂಚಿಗಾರ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೇ.10ರಂದು ನಡೆಸಲು ಕಡಬ ತಹಸೀಲ್ದಾರ್ ಅವರು ಕಂದಾಯ ನಿರೀಕ್ಷಕರಿಗೆ ಆದೇಶ ನೀಡಿದ್ದರು.

 


ಈ ಮಧ್ಯೆ ಈ ತೆರವು ಆದೇಶಕ್ಕೆ ಪ್ರತಿಯಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಸುಜಿತ್ ಕುಮಾರ್ ಶೆಟ್ಟಿ ಅವರು ಕಡಬ ತಹಶೀಲ್ದಾರ್ ಅವರಿಗೆ ಸರಕಾರಿ ಜಮೀನಿನ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲು ದಾವೆ ಹೂಡಿದ್ದರು.ಅದರಂತೆ ನ್ಯಾಯಾಲಯದಿಂದ ಮೇ. 10ರಂದು ಸರಕಾರಿ ಜಮೀನಿನ ದಾಖಲೆಗಳನ್ನು ಹಾಜರುಪಡಿಸುವಂತೆ ತಹಶೀಲ್ದಾರ್‌ರವರಿಗೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇ.10ರಂದು ನಡೆಯಬೇಕಿದ್ದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here