ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಮಾಯಣ,ಮಹಾಭಾರತದ ಮೌಲ್ಯದ ಪರಿಕಲ್ಪನೆ ಕುರಿತು ವಿಶೇಷ ಉಪನ್ಯಾಸ

0

 

 


ಪುತ್ತೂರು: ನರೇಂದ್ರ ಪ.ಪೂ.ಕಾಲೇಜಿನಲ್ಲಿ ೧೦ನೇ ತರಗತಿ ಪರೀಕ್ಷೆ ಬರೆದು ಪ್ರಥಮ ಪಿಯುಸಿ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ತರಂಗ 2022 ಇದರ ಮೂರನೇ ದಿನದಕಾರ್ಯಕ್ರಮದಲ್ಲಿ ಬೆಟ್ಟಂಪಾಡಿಯ ನವೋದಯ ಶಾಲೆಯ ನಿಕಟಪೂರ್ವ ಸಂಚಾಲಕರಾದ ಮಂಜಳಗಿರಿ ವೆಂಕಟರಮಣ ಭಟ್ ಇವರು ರಾಮಾಯಣ,ಮಹಾಭಾರತದ ಮೌಲ್ಯದ ಪರಿಕಲ್ಪನೆ ಕುರಿತು ಎಂಬ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಭರತಖಂಡದ ಆಧ್ಯಾತ್ಮಿಕ ಗ್ರಂಥಗಳಾದ ರಾಮಾಯಣ ,ಮಹಾಭಾರತ ವಿಶ್ವಕ್ಕೇ ಮಾರ್ಗದರ್ಶಕಗಳಾಗಿದೆ.ಎಲ್ಲರೂ ಅನುಸರಿಸುವ ಮಹೋನ್ನತ ,ಮಾನವೀಯ ಮೌಲ್ಯವನ್ನು ಹೊಂದಿದೆ.ಅನ್ಯಾಯದ ನೀರು ಭೂಮಿಯ ಮೇಲೆ ತುಂಬಲು ಪ್ರಾರಂಭಿಸಿದಾಗಲೆಲ್ಲಾ ಧರ್ಮವನ್ನು ಸ್ಥಾಪಿಸಲು ದೇವರುಜನ್ಮ ಪಡೆಯುತ್ತಾನೆ ಮತ್ತುಇದರಿಂದ ಹೊಸ ಪುರಾಣರಚನೆಯಾಗುತ್ತದೆ.ಇದು ಮನುಷ್ಯನಿಗೆ ಯುಗಗಳಿಗೆ ಮಾರ್ಗದರ್ಶನ ನೀಡುತ್ತದೆ.ಈ ಪುರಾಣಗಳು ಸಂಸ್ಕೃತಿ ಮತ್ತು ಪದ್ಧತಿಗಳ ಆಧಾರವಾಗುತ್ತದೆ.

ಜಗತ್ತಿನಎಲ್ಲಾ ಸಮಸ್ಯೆಗಳಿಗೂ ಈ ಎರಡು ಮಹಾಗ್ರಂಥಗಳಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಂದು ಬೆಟ್ಟಂಪಾಡಿಯ ನವೋದಯ ಶಾಲೆಯ ನಿಕಟಪೂರ್ವ ಸಂಚಾಲಕರಾದ ಮಂಜಳಗಿರಿ ವೆಂಕಟರಮಣ ಭಟ್ ಹೇಳಿದರು. ರಾಮಾಯಣದಲ್ಲಿನ ಸತ್ಯ ಸಂಧತೆ,ಭ್ರಾತೃಪ್ರೇಮ,ಪಿತೃವಾಕ್ಯ ಪರಿಪಾಲನೆ,ರಾಜಧರ್ಮ,ರಾಮರಾಜ್ಯದ ಆದರ್ಶಗಳನ್ನು ವಿವರಿಸಿದರು.
ರಾಮಾಯಣದಲ್ಲಿ ಮಾನವಕುಲದಜೀವನ ಮತ್ತು ಕಾರ್‍ಯಗಳ ಬಗ್ಗೆ ವಿಶೇಷ ವಿವರಣೆಯಿದೆ.ಜೀವನದ ಮೂಲಾಧಾರದ ಬಗ್ಗೆ ಅರಿವು ಮೂಡಿಸುತ್ತದೆಎಂದು ಹೇಳಿದರು.

ನಂತರದ ಅವಧಿಗಳಲ್ಲಿ ನರೇಂದ್ರ ಪ.ಪೂ.ಕಾಲೇಜಿನ 2022-23 ಶೈಕ್ಷಣಿಕ ವರ್ಷದಉಚಿತ ಶಿಕ್ಷಣ ಸೌಲಭ್ಯದಡಿಯಲ್ಲಿಉಚಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದರಾಮಾಯಣ-ಮಹಾಭಾರತಪರೀಕ್ಷೆಯನ್ನು ನಡೆಸಲಾಯಿತು.ಪರೀಕ್ಷೆ ಬರೆದುಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮೊದಲ ೫ ವಿದ್ಯಾರ್ಥಿಗಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯ ದೊರೆಯಲಿದೆ.ಮತ್ತು ಪ್ರಥಮ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದ ಬಿಇಬಿಎ ಸಂಯೋಜನೆಯಲ್ಲಿ ಉಚಿತಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದಅದರ ಪ್ರವೇಶ ಪರೀಕ್ಷೆಯನ್ನು ನಡೆಸಲಾಯಿತು.ಅದನ್ನು ಬರೆದು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮೊದಲ ೫ ವಿದ್ಯಾರ್ಥಿಗಳಿಗೆ ಈ ಉಚಿತ ಶಿಕ್ಷಣದ ಸೌಲಭ್ಯದೊರೆಯಲಿದೆ.

ಶಿಬಿರದ ಕೊನೆಯಲ್ಲಿ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ) ಯ ಚಿತ್ರಕಲಾ ಶಿಕ್ಷಕರಾದ ರಮೇಶ್‌ರವರು ,ವಿದ್ಯಾರ್ಥಿಗಳಿಗೆ ಕ್ಲೇ ಮಾಡೆಲಿಂಗ್ ನ ತಯಾರಿಯ ಬಗ್ಗೆ ತಿಳಿಸಿ ವಿವಿಧ ಚಟುವಟಿಕೆಗಳ ಮೂಲಕ ಬಹುವರ್ಣದ ಮಾದರಿಗಳನ್ನು ತಯಾರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಮಧುರಾ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here