ಯುವ ಜನತೆಯ ಆಕರ್ಷಿಸುವ ಟಿವಿಎಸ್ ಜ್ಯುಪಿಟರ್-125 ಡಿಸ್ಕ್ ದ್ವಿಚಕ್ರ

0

  • ಬೊಳುವಾರಿನ ಏಸ್ ಮೋಟಾರ್‍ಸ್‌ನಲ್ಲಿ ಬಿಡುಗಡೆ

 

ಪುತ್ತೂರು: ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿಯೇ ಅಗ್ರಸ್ಥಾನದಲ್ಲಿರುವ ಟಿವಿಎಸ್ ಕಂಪನಿಯು ಇಂದಿನ ಯುವ ಜನೆತೆಗೆ ಪೂರಕವಾದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಶೈಲಿಯಲ್ಲಿ ತಯಾರಾಗಿರುವ ಟಿವಿಎಸ್ ಜ್ಯುಪಿಟರ್-125 ಡಿಸ್ಕ್ ಬ್ರೇಕ್‌ನ ದ್ವಿಚಕ್ರ ವಾಹನವು ಮೇ.9ರಂದು ಬೊಳುವಾರಿನ ಏಸ್ ಮೋಟಾರ್‍ಸ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ಪ್ರಸಾದ್ ಇಂಟಸ್ಟ್ರೀಸ್‌ನ ಮ್ಹಾಲಕ ಶೀವಪ್ರಸಾದ್ ಶೆಟ್ಟಿಯವರು ಬಿಡುಗಡೆಗೊಳಿಸಿ ಪ್ರಥಮ ಗ್ರಾಹಕರಾದ ನರಿಮೊಗರು ಸಾಂದೀಪನಿ ಶಾಲಾ ಶಿಕ್ಷಕಿ ಪ್ರಮೀಳಾ ಹಾಗೂ ಅಶ್ವಥ್ ಆರ್ಯಾಪುರವರಿಗೆ ಕೀಲಿ ಕೈ ಹಸ್ತಾಂತರಿಸಲಾಯಿತು. ಮ್ಹಾಲಕ ಆಕಾಶ್ ಐತ್ತಾಳ್ ಉಪಸ್ಥಿತರಿದ್ದರು.


ನೂತನ ಆವಿಷ್ಕಾರದೊಂದಿಗೆ ತಯಾರಿಸಲಾಗಿರುವ ಜ್ಯುಪಿಟರ್ ೧೨೫-ಡಿಸ್ಕ್ ವಾಹನವು ಶಬ್ದ ರಹಿತವಾಗಿದ್ದು ಪರಿಸರ ಪ್ರೇಮಿಯಾಗಿ ನಿರ್ಮಾಣಗೊಂಡಿದೆ. ಇದರ ಸೀಟ್ ೭೯೦ ಮಿಮೀ ಉದ್ದವಿದೆ. ಇದರ ಮುಂಭಾಗದ ಲೆಗ್ ಸ್ಪೇಸ್ ಇತರ ವಾಹನಗಳಿಗಿಂತ ಹೆಚ್ಚು ೩೮೦ ಎಂಎಂ ಹೊಂದಿದ್ದು ಜಗೇಜ್‌ಗಳ ಸಾಗಾಟಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಉತ್ತಮ ಬಾಡಿ ಬ್ಯಾಲೆನ್ಸ್ ಟೆಕ್, ಮೆಟಲ್ ಬಾಡಿಯೊಂದಿಗೆ ಆಕರ್ಷಕ ವಿನ್ಯಾಸದೊಂದಿಗೆ ವಾಹನವು ನಿರ್ಮಾಣಗೊಂಡಿದೆ. ಡಿಜಿಟಲ್ ಮೀಟರ್ ಹೊಂದಿದ್ದು ಎಷ್ಟು ಮೈಲ್ ದೊರೆಯುತ್ತಿದೆ ಎಂಬುದನ್ನು ಚಾಲನೆಯ ವೇಳೆ ಸೂಚಿಸುತ್ತದೆ. ಈ ವಾಹನದಲ್ಲಿ ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜೊತೆಗೆ ಸಿಂಗಲ್ ಸಿಲಿಂಡರ್, ೪ ಸ್ಟ್ರೋಕ್, ಏರ್ ಕೂಲ್‌ಡ ಇಂಜಿನ್ ಹೊಂದಿದೆ. ಎಲ್‌ಇಡಿ ಹೆಡ್‌ಲೈಟ್ ಹಾಗೂ ಮುಂಭಾಗದ ಸಿಗ್ನಲ್ ಲೈಟ್‌ಗಳನ್ನು ಒಳಗೊಂಡಿದೆ. ರಿಫ್ಲೆಕ್ಟರ್‌ನೊಂದಿಗೆ ಟೈಲ್ ಲ್ಯಾಂಪ್, ಸೆಂಟರ್ ಲಾಕ್, ಪೇಟೆಂಟ್ ಪಡೆದ ಈಸಿ ಸೆಂಟರ್ ಸ್ಟ್ಯಾಂಡ್, ಸಿಗ್ನೇಚರ್ ಸ್ಟೈಲ್ ಎಲಿಮೆಂಟ್ಸ್-ಲೈಟ್ ಗೈಡ್‌ಗಳು, ಕ್ರೋಮ್, ಸೀಟ್ ಸ್ಟೈಲಿಂಗ್ ವೈಸರ್ ಜೊತೆಗೆ ಸ್ಟೈಲಿಶ್ ಹೆಡ್‌ಲ್ಯಾಂಪ್, ಕ್ರೋಮ್ ಫ್ರಂಟ್ ಪ್ಯಾನಲ್‌ಗಳು, ಇಟಿಎಫ್‌ಐ ತಂತ್ರಜ್ಞಾನ, ಇಂಟೆಲಿಗೋ, ಐ-ಟಚ್ (ಸೈಲೆಂಟ್ ಸ್ಟಾರ್ಟ್), ಸುರಕ್ಷತಾ ಪ್ರತಿಫಲಕದೊಂದಿಗೆ ಬಾಡಿ ಕಲರ್ ಪಿಲಿಯನ್ ಹ್ಯಾಂಡಲ್, ರಿಯರ್ ವ್ಯೂ ಮಿರರ್ – ಕ್ರೋಮ್, ಯುಟಿಲಿಟಿ ಬಾಕ್ಸ್ ಲೈಟ್‌ಗಳೊಂದಿಗೆ ಈ ವಾಹನ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.

ಇದರ ಬೆಲೆಯು ರೂ.೮೦,೮೭೫ ರಿಂದ ಪ್ರಾರಂಭವಾಗಲಿದೆ. ಡಾನ್ ಆರೆಂಜ್, ಇಂಡಿ ಬ್ಲೂ ಹಾಗೂ ಟೈಟಾನಯಂ ಗ್ರೇ. ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ನೂತನ ವಾಹನ ಪ್ರದರ್ಶನ ಹಾಗೂ ಟೆಸ್ಟ್ ಡೈಗೆ ಶೋರೂಂನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ ೭೭೬೦೮೮೮೩೩೩ ನಂಬರನ್ನು ಸಂಪರ್ಕಿಸಬಹುದು.

ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್‌ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು. ಟಿವಿಎಸ್ ಕ್ರೆಡಿಟ್ ಮೂಲಕ ಎಕ್ಸ್ ಚೇಂಜ್ ಮಾಡುವ ವಾಹನಗಳಿಗೆ ಮಾರುಕಟ್ಟೆ ಬೆಲೆಗಿಂತ ರೂ.೨೦೦೦ ಹೆಚ್ಚುವರಿ ದರ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here