ಪಿ.ಯು.ಸಿ ಶಿಕ್ಷಣದ ಜೊತೆಗೆ ಶರೀಅತ್ ಕಲಿಕೆಗೆ ಅವಕಾಶ

0

  • ಸಂಪ್ಯ ಝಹ್ರಬತೂಲ್ ವುಮೆನ್ಸ್ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ

ಪುತ್ತೂರು: ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಸಂಪ್ಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜಿನಲ್ಲಿ ಶರೀಅತ್, ಶರೀಅತ್&ಪಿ.ಯು.ಸಿ ಮತ್ತು ಶರೀಅತ್&ಡಿಗ್ರಿ ತರಗತಿಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ.

 


ಎರಡು ವರ್ಷಗಳ ಅಝ್ಝಕಿಯ್ಯ ಶರೀಅತ್ ಡಿಗ್ರಿ ಪಡೆಯಲು ಸಂಸ್ಥೆಯಲ್ಲಿ ಅವಕಾಶವಿದೆ. ಶರೀಯತ್ ವಿದ್ಯಾರ್ಥಿನಿಯರಿಗೆ ಖುರ್‌ಆನ್, ತಫ್ಸೀರ್, ಫಿಕ್‌ಹ್(ಕರ್ಮಶಾಸ್ತ್ರ), ಅಖೀದ, ತಸವ್ವುಫ್(ಆಧ್ಯಾತ್ಮಿಕ), ತಜ್‌ವೀದ್, ತಾರೀಖ್(ಇಸ್ಲಾಮಿಕ್ ಚರಿತ್ರೆ ಅಧ್ಯಯನ), ಅದ್ಕಾರ್ ಮೊದಲಾದ ಅಧ್ಯಯನವನ್ನು ತರಗತಿಯಲ್ಲಿ ನೀಡಲಾಗುತ್ತಿದ್ದು ಇಂಗ್ಲೀಷ್, ಅರೆಬಿಕ್, ಕನ್ನಡ, ಉರ್ದು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಧ್ಯಯನ ತರಗತಿಗಳು ನಡೆಯುತ್ತದೆ.

ಎಲ್ಲಾ ತರಗತಿಗಳೂ ಮಹಿಳಾ ಅಧ್ಯಾಪಕಿಯರಿಂದಲೇ ನಡೆಸಲಾಗುತ್ತಿದ್ದು ೨ ವರ್ಷ ಪೂರೈಸಿದ ಶರೀಯತ್ ವಿದ್ಯಾರ್ಥಿನಿಯರಿಗೆ ಬಿರುದು ನೀಡಲಾಗುತ್ತದೆ. ಅಲ್ಲದೇ ತಿಬ್ಬುನ್ನಬವೀ ಕೋರ್ಸ್, ಟೀಚರ್ ಟ್ರೈನಿಂಗ್, ಹಿಝ್ಬ್ ಟ್ರೈನಿಂಗ್ ಕೋರ್ಸ್, ಹಿಜಾಮ ಥೆರಫಿ, ವ್ಯಕ್ತಿತ್ವ ವಿಕಸನ ತರಗತಿಗಳು, ಸೈಕೋಲಜಿ, ಹೋಂ ಸಯನ್ಸ್, ಟೈಲರಿಂಗ್, ಪ್ರಾಯೋಗಿಕ ಇಬಾದತ್ ತರಬೇತಿ ಹಾಗೂ ಕಂಪ್ಯೂಟರ್ ತರಗತಿಗಳನ್ನು ನೀಡಲಾಗುತ್ತದೆ. ಸ್ಕಾಲರ್‌ಶಿಪ್ ಸೌಲಭ್ಯವನ್ನೂ ಸಂಸ್ಥೆ ಒದಗಿಸುತ್ತಿದ್ದು ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಾಹನ ಸೌಕರ್ಯದ ವ್ಯವಸ್ಥೆಯೂ ಇದೆ.

ಹೆಚ್ಚಿನ ಮಾಹಿತಿಗಾಗಿ 7483521719, 7760311272, 9483493516, 9108879552 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದೀಕ್ ಜಲಾಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here