ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

0

 

ನೆಲ್ಯಾಡಿ: ಇಲ್ಲಿಗೆ ಸಮೀಪದ ಕೊಕ್ಕಡ ಗ್ರಾಮದ ಮಾಯಿಲಕೋಟೆ ಎಂಬಲ್ಲಿ ಅಂದಾಜು 3 ಸಾವಿರ ವರ್ಷಗಳ ಹಿಂದೆ ಕದಂಬ ವಂಶಸ್ಥರ ಆಳ್ವಿಕೆಯ ಸಂದರ್ಭದಲ್ಲಿ ಮಾಯಿಲ ಜನಾಂಗದ ವೀರ ಪುರುಷ ತುಳು ಮಾಯಿಲ ತನ್ನ ರಕ್ಷಣೆಗಾಗಿ ನಿರ್ಮಿಸಿದ್ದ ಕೋಟೆ ಹಾಗೂ ದೈವಾನುಗ್ರಹಕ್ಕಾಗಿ ಆರಾಧಿಸಿಕೊಂಡು ಬರುತ್ತಿದ್ದ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಸಾನಿಧ್ಯ ಈಗ ಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿದ್ದು ಇದರ ಪ್ರತಿಷ್ಠಾ ಮಹೋತ್ಸವಕ್ಕೆ ಮೇ. 11ರಂದು ಬೆಳಿಗ್ಗೆ ಚಾಲನೆ ನೀಡಲಾಗಿದೆ.

ಬೃಹತ್ ಹೊರೆಕಾಣಿಕೆ:
ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮೇ ೧೧ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಕೊಕ್ಕಡ, ನಿಡ್ಲೆ, ಶಿಶಿಲ, ಹತ್ಯಡ್ಕ, ಶಿಬಾಜೆ, ಪಟ್ರಮೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯಾಯಿತು. ಕೊಕ್ಕಡ ಜಂಕ್ಷನ್‌ನಿಂದ ಬ್ಯಾಂಡ್, ವಾದ್ಯಗಳೊಂದಿಗೆ ಹೊರೆಕಾಣಿಕೆ ಮೆರವಣಿಗೆಯೂ ಮಾಯಿಲಕೋಟೆ ದೈವ ಸನ್ನಿಧಿಗೆ ಆಗಮಿಸಿತು. ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ದೈವಗಳ ಆಭರಣ ಸಮರ್ಪಣೆ:
ದೈವಗಳ ನೂತನ ಆಭರಣ ಹಾಗೂ ಪರಿಕರಗಳನ್ನು ಮೆರವಣಿಗೆಯಲ್ಲಿ ದೈವ ಸನ್ನಿಧಿಗೆ ತರಲಾಯಿತು. ಆಭರಣಗಳಿಗೆ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೊಕ್ಕಡ ಜಂಕ್ಷನ್‌ನಿಂದ ಹೊರೆಕಾಣಿಕೆ ಮೆರವಣಿಗೆಯ ಜೊತೆಗೆ ದೈವ ಸನ್ನಿಧಿಗೆ ತರಲಾಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷ ಜಯರಾಮ ಗೌಡ ಹಾರ, ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ಕಾರ್ಯಾಧ್ಯಕ್ಷ ಜಯರಾಮ ಗೌಡ ನ್ಯೂ ಆರಿಗ, ಪ್ರಧಾನ ಸಂಚಾಲಕ ಬಿ.ಜಯರಾಮ ನೆಲ್ಲಿತ್ತಾಯ ಶಿಶಿಲ, ಸಹ ಸಂಚಾಲಕರಾದ ಮಂಜುನಾಥ ಗೌಡ ಕೈಕುರೆ, ಹರೀಶ್ ರಾವ್ ಮುಂಡ್ರುಪ್ಪಾಡಿ, ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಎ., ನ್ಯೂ ಆರಿಗ, ಉಪಾಧ್ಯಕ್ಷರಾದ ಡಾ.ಬಿ.ಮೋಹನದಾಸ್ ಗೌಡ, ಜಯಾನಂದ ಬಂಟ್ರಿಯಾಲ್, ಕುಶಾಲಪ್ಪ ಗೌಡ ಪುಡ್ಕೆತ್ತೂರು, ಕುಮಾರ ಬಳ್ಳಕ ಪಂಜ, ಕಾರ್ಯದರ್ಶಿಗಳಾದ ಶೀನ ನಾಯ್ಕ ಕೊಕ್ಕಡ, ಯೋಗೀಶ್ ಆಲಂಬಿಲ, ಸುರೇಶ್ ಪಡಿಪಂಡ, ಪ್ರಶಾಂತ್ ಪೂವಾಜೆ, ಪುರಂದರ ಗೌಡ ಕಡೀರ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸದಸ್ಯರುಗಳು ಪಾಲ್ಗೊಂಡಿದ್ದರು.

 

 

LEAVE A REPLY

Please enter your comment!
Please enter your name here