ಮೇ.12: ಬೊಳುವಾರು ಮಹಾವೀರ ಮಾಲ್‌ನಲ್ಲಿ ಪುತ್ತೂರು ಪಾಲಿಕ್ಲಿನಿಕ್ ಶುಭಾರಂಭ

0

 

ಪುತ್ತೂರು : ಬೊಳುವಾರು ಮಹಾವೀರ ಮೆಡಿಕಲ್ ಸೆಂಟರ್ ಎದುರುಗಡೆಯ ಮಹಾವೀರ ಮಾಲ್‌ನಲ್ಲಿ ಮೇ.12ರಂದು ಸಂಜೆ ೫ ಗಂಟೆಗೆ ಪುತ್ತೂರು ಪಾಲಿಕ್ಲಿನಿಕ್ ಶುಭಾರಂಭಗೊಳ್ಳಲಿದೆ.
ಮೂಡಬಿದ್ರಿ ಮಠದ ಡಾ.ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಕ್ಲಿನಿಕ್ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಮಂಗಳೂರು ಎಜೆ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಎಂಡಿ ಮತ್ತು ಸಿಇಒ ಡಾ.ಪ್ರಶಾಂತ್ ಮಾರ್ಲ, ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸುದಾನ ವಸತಿಯುತ ಶಾಲೆಯ ಪ್ರಾಮಶುಪಾಲ ಇಜಯ ಹಾರ್ವಿನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಧನ್ವಂತರಿ ಆಸ್ಪತ್ರೆಯ ಡಾ.ಚಂದ್ರಶೇಖರ ಕಜೆ, ಪುತ್ತೂರು ಟಿ.ಎಚ್.ಒ ಡಾ.ದೀಪಕ್ ರೈ, ಪುತ್ತೂರು ಐಎಂಎಯ ಡಾ.ನರಸಿಂಹ ಶರ್ಮ ಕಾನಾವು, ಮಹಾವೀರ ಹಾಸ್ಪಿಟಲ್‌ನ ಎಮ್‌ಡಿ ಡಾ.ಸುರೇಶ್ ಪುತ್ತೂರಾಯ, ಡಾ.ಪ್ರದೀಪ್ ಕುಮಾರ್, ಡಾ. ನಝೀರ್ ಅಹಮ್ಮದ್, ಕಜೆ ಲಾ ಚೇಂಬರ್‍ಸ್‌ನ ವಕೀಲ ಮಹೇಶ್ ಕಜೆರವರು ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here