ಮೇ.12-15 : ಚಿಕ್ಕಪುತ್ತೂರು ಕುಟುಂಬದ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ

0

ಪುತ್ತೂರು : ಪುತ್ತೂರು ಕಸಬಾದ ಚಿಕ್ಕಪುತ್ತೂರು ಕುಟುಂಬದ ಧರ್ಮದೈವ ಶ್ರೀರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಜಗದ್ಗುರು ಶ್ರೀಭಾರತೀ ತೀರ್ಥ ಮಹಾಸ್ವಾಮಿಯವವ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಮೇ.12 ರಿಂದ 15ರವರೆಗೆ ಚಿಕ್ಕಪುತ್ತೂರು ತರವಾಡು ಮನೆಯಲ್ಲಿ ನಡೆಯಲಿದೆ.

 


ಮೇ.೧೨ರಂದು ಬೆಳಿಗ್ಗೆ ೧೦ರಿಂದ ಉಗ್ರಾಣ ತುಂಬಿಸುವುದು, ಸಂಜೆ ೫ರಿಂದ ತಂತ್ರಿಗಳ ಆಗಮನ, ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ. ಮೇ.೧೩ರಂದು ಬೆಳಿಗ್ಗೆ ೫ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ೭.೧೦ರ ವೃಷಭ ಲಗ್ನ ಶುಭಮುಹೂರ್ತದಲ್ಲಿ ಸಬ್ಬಮ್ಮ ತಾಯಿ, ರುದ್ರಚಾಮುಂಡಿ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮೇ.೧೪ರಂದು ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಹರಿಸೇವೆ, ಸಬ್ಬಮ್ಮ ಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ ಕೆಂಚರಾಯನ ಪೂಜೆ, ಸಂಜೆ ದೈವಗಳ ಭಂಡಾರ ತೆಗೆದು ಮಹಿಷಂತಾಯ, ಗುರುಕಾರ್ನೂರ್, ಸತ್ಯದೇವತೆ ನೇಮ, ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ, ಅಜ್ಜಿ ಕಲ್ಲುರ್ಟಿ, ಮೈಯಂತೆ ದೇವತೆ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಮಣಿಪಂದ ಪಂಜುರ್ಲಿ ನೇಮೋತ್ಸವ ನಡೆಯಲಿದೆ. ಮೇ.೧೫ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ರುದ್ರಚಾಮುಂಡಿ ಧರ್ಮನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಗುಳಿಗ, ಅಂಗಾರ ಬಾಕುಟ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here