ಕರಾವಳಿಯ ಹರಳು ಮಾಫಿಯಾದ ಅಪಾಯಕಾರಿ ಕಥಾನಕ ‘ಮೇಲೊಬ್ಬ ಮಾಯಾವಿ’

0

  • ನಾಳೆಯಿಂದ (ಮೇ.12) ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಆರಂಭ

@ ಸಿಶೇ ಕಜೆಮಾರ್

 

ಪುತ್ತೂರು: ಕರಾವಳಿಯಲ್ಲಿ ನಡೆಯುವ ಹರಳು ಮಾಫಿಯಾದ ಅಪಾಯಕಾರಿ ಕಥೆಯನ್ನು ಇಟ್ಟುಕೊಂಡು ಪುತ್ತೂರು ಸುತ್ತಮುತ್ತ ಚಿತ್ರೀಕರಣಗೊಂಡ ಭರತ್ ಪುತ್ತೂರು ನಿರ್ಮಾಣ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನ ಹಳೇ ವಿದ್ಯಾರ್ಥಿ ಬಿ.ನವೀನ್ ಕೃಷ್ಣ ನಿರ್ದೇಶನದ ` ಮೇಲೊಬ್ಬ ಮಾಯಾವಿ’ ಸಿನಿಮಾ ಮೇ.12 ರಿಂದ ಪುತ್ತೂರು ಅರುಣಾ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣುತ್ತಿದೆ.

ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ ಇದಾಗಿದೆ. ಈ ಚಿತ್ರದ ಟ್ರೇಲರ್ ನಟ ಶ್ರೀನಗರ ಕಿಟ್ಟಿ ಅವರಿಂದ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಚಿತ್ರ ಈಗಾಗಲೇ ರಾಜ್ಯದಾದ್ಯಂತ ಬಿಡುಗೊಂಡು ಸದ್ದು ಮಾಡುತ್ತಿದೆ. ಕರಾವಳಿಯ ಹರಳು ಮಾಫಿಯಾದ ಕಂಟೆಂಟ್ ನಿಂದಾಗಿ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣಗೊಂಡ ಮೇಲೊಬ್ಬ ಮಾಯಾವಿಯು ಒಂದು ವಿಭಿನ್ನ ಸಿನಿಮಾವಾಗಿದೆ.

ಪತ್ರಕರ್ತನಾಗಿ ಹಲವು ವರ್ಷಗಳ ಕಾಲ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ದುಡಿದಿರುವ ನಿರ್ದೇಶಕ ಬಿ.ನವೀನ್ ಕೃಷ್ಣ ಪ್ರಸ್ತುತ ‘ಚಿತ್ತಾರ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದು ‘ಮೇಲೊಬ್ನ ಮಾಯಾವಿ’ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾದ ಕುರಿತಾದ ಕಥೆಯುಳ್ಳ ‘ಮೇಲೊಬ್ಬ ಮಾಯಾವಿ’ಯಲ್ಲಿ ಸಕ್ಕರೆ, ಇರುವೆ ಮತ್ತು ಸುಲೇಮಾನ್ ಈ ಮೂರು ಪ್ರಮುಖ ಪಾತ್ರಗಳು ಪ್ರೇಕ್ಷಕರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತವೆ. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆಯ ಪಾತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಸುಲೇಮಾನ್ ಪತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತವಾಗಿ ಮೂಡಿನಬಂದಿದ್ದು ಚಿತ್ರದ ಎಲ್ಲಾ ನಟ-ನಟಿಯರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಂಗಭೂಮಿಯ ಹಿನ್ನಲೆಯ ಉಡುಪಿಯ ಕಲಾವಿದೆ ಅನನ್ಯ ಶೆಟ್ಟಿಯವರು ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆಯ ನಟಿ ಅನ್ನಿಸಿಕೊಂಡಿದ್ದಾರೆ. `ಮೇಲೊಬ್ಬ ಮಾಯಾವಿ ಸಿನಿಮಾ `ಶ್ರೀ ಕಟೀಲ್ ಸಿನಿಮಾಸ್ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ನಿರ್ಮಾಣದಲ್ಲಿ ಮೂಡಿಬಂದಿದೆ. ಚಿತ್ರಕ್ಕೆ ದಿ.ಎಲ್.ಎನ್.ಶಾಸ್ತ್ರೀಯವರ ಸಂಗೀತವಿದ್ದು, ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ನೀಡಿದ್ದಾರೆ.

ಕೆ.ಗಿರೀಶ್ ಕುಮಾರ್ ಸಂಕಲನ, ದೀಪಿತ್ ಬಿ ಜೈ ರತ್ನಾಕರ್ ಛಾಯಾಗ್ರಾಹಣ, ರಾಮು ಅವರ ನೃತ್ಯ ಸಂಯೋಜನೆಯಿದೆ. ಚಿತ್ರದಲ್ಲಿ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್ ಕುಮಾರ್, ಆರ್.ವೆಂಕಟ್ ರಾಜು, ಲಕ್ಷ್ಮಿ ಅರ್ಪಣ್, ಮುಖೇಶ್ , ಡಾ.ಮನೋನ್ಮಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮಾಡಾವು ಸುತ್ತಮುತ್ತ ಚಿತ್ರೀಕರಣಗೊಂಡ ಸಿನಿಮಾ
ಮೇಲೊಬ್ಬ ಮಾಯಾವಿಯಲ್ಲಿ ಬಹುತೇಕ ಪುತ್ತೂರಿನ ರಂಗ ಕಲಾವಿದರು ಅಭಿನಯಿಸಿದ್ದಾರೆ. ಪುತ್ತೂರು, ಸುಳ್ಯ ಸೇರಿದಂತೆ ಕರಾವಳಿಯ ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಪುತ್ತೂರಿನ ಮಾಡಾವು ಬೊಳಿಕ್ಕಲದ ಕಾಡು ಪ್ರದೇಶದಲ್ಲಿ ಹಲವು ದಿನಗಳ ಕಾಲ ಚಿತ್ರೀಕರಣಗೊಂಡಿದೆ.

LEAVE A REPLY

Please enter your comment!
Please enter your name here