ಎಸ್ಸೆಸ್ಸೆಫ್ ನರಿಮೊಗರು ಯುನಿಟ್‌ಗೆ ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷರಾಗಿ ಮುಹಮ್ಮದ್ ಹಾರಿಸ್, ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಶಿಹಾಬ್

ಪುತ್ತೂರು: ಎಸ್ಸೆಸ್ಸೆಫ್ ನರಿಮೊಗರು ಯುನಿಟ್‌ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹಾರಿಸ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಿಹಾಬ್ ಹಾಗೂ ಕೋಶಾಧಿಕಾರಿಯಾಗಿ ಅರ್ಷಾದ್ ಕೆ ಆಯ್ಕೆಯಾಗಿದ್ದಾರೆ.

ಕೆ.ಮುಸ್ತಫಾರವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಅನೀಸ್ ನಿಝಾಮಿಯವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮುಹಮ್ಮದ್ ಮುಂಫಾಝ್, ಜೊತೆ ಕಾರ್ಯದರ್ಶಿಯಾಗಿ ಅಹ್ಮದ್ ಇರ್ಶಾದ್, ದಅವಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಶ್ತಾಕ್, ಇಬ್ರಾಹಿಂ ಬಾತಿಷ್, ಮುಹಮ್ಮದ್ ಇದ್ರೀಸ್, ಮೀಡಿಯಾ ಕಾರ್ಯದರ್ಶಿಯಾಗಿ ಮುಹಮ್ಮದ್ ಮಿಸ್ತಾಹ್, ರೈನ್‌ಬೋ ಕಾರ್ಯದರ್ಶಿಯಾಗಿ ಅಬ್ದುಲ್ ಹಾಫಿಲ್, ಸಂಘಟನಾ ಸಂಚಾಲಕರಾಗಿ ಮುಹಮ್ಮದ್ ಸಿನಾನ್‌ರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್‌ವೈಎಸ್ ಮುಖಂಡರಾದ ಕೆ.ಪಿ ಉಮ್ಮರ್, ಕೆ ಉಮ್ಮರ್, ಶರೀಫ್ ಕೆ ಹಾಗೂ ಎಸ್ಸೆಸ್ಸೆಫ್ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.ಮಾಜಿ ಪ್ರ.ಕಾರ್ಯದರ್ಶಿ ಮುಹಮ್ಮದ್ ಸಿನಾನ್ ಸ್ವಾಗತಿಸಿದರು. ನೂತನ ಪ್ರ.ಕಾರ್ಯದರ್ಶಿ ಮುಹಮ್ಮದ್ ಶಿಹಾಬ್ ವಂದಿಸಿದರು.

LEAVE A REPLY

Please enter your comment!
Please enter your name here