ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾರವರಿಂದ ಶವದಹನ ಪೆಟ್ಟಿಗೆ ಅರ್ಪಣೆ

0

ಪುತ್ತೂರು: ಉಪ್ಪಿನಂಗಡಿಯ ಶ್ರೀರಾಮ ಶಾಲೆ ಮತ್ತು ಇಂದ್ರಪ್ರಸ್ಥ ವಿದ್ಯಾಸಂಸ್ಥೆಗಳ ಸಂಚಾಲಕರೂ, 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರೂ ಆಗಿರುವ ಉಪ್ಪಿನಂಗಡಿಯ ಕೈಲಾರ್ ಮೆಡಿಕಲ್ಸ್ ಮಾಲಕ ಯು.ಜಿ.ರಾಧಾರವರು ತನ್ನ ತಾಯಿ ಪರಮೇಶ್ವರಿರವರ ಸ್ಮರಣಾರ್ಥ ಶವದಹನ ಪೆಟ್ಟಿಗೆಯನ್ನು ಕೊಡುಗೆಯಾಗಿ ಅರ್ಪಿಸಿದ್ದಾರೆ. ಶಾಂತಿನಗರದಲ್ಲಿರುವ ತನ್ನ ಮನೆಯಲ್ಲಿ ಮೇ. 12ರಂದು ನಡೆದ ತನ್ನ ತಾಯಿಯ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಅವರು ಶವ ದಹನ ಪೆಟ್ಟಿಗೆಯನ್ನು ಹಸ್ತಾಂತರಿಸಿದ್ದಾರೆ.

 

ಉಪ್ಪಿನಂಗಡಿ, 34 ನೆಕ್ಕಿಲಾಡಿ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ ಇಂಧನ(ಎರಡೂವರೆ ಗೋಣಿ ಗೆರಟೆ) ಮತ್ತು ಕರ್ಪೂರ ಬಳಸಿ ಹಾಗೂ ಕನಿಷ್ಠ ಸ್ಥಳದಲ್ಲಿ ಶವವನ್ನು ದಹನ ಮಾಡಲು ಅನುಕೂಲ ಕಲ್ಪಿಸುವ ಸಲುವಾಗಿ ಯು.ಜಿ.ರಾಧಾರವರು 55 ಸಾವಿರ ರೂ ಮೌಲ್ಯದ ಶವ ದಹನ ಪೆಟ್ಟಿಗೆಯನ್ನು ಕೊಡುಗೆಯಾಗಿ ಅರ್ಪಣೆ ಮಾಡಿದ್ದಾರೆ. ಅನಿವಾರ್ಯ ಸಮಯದಲ್ಲಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ತನ್ನ ತಾಯಿಯವರ ಸ್ಮರಣಾರ್ಥ ಯು.ಜಿ.ರಾಧಾರವರು ಅರ್ಪಿಸಿರುವ ಈ ಕೊಡುಗೆಯನ್ನು ಉಪ್ಪಿನಂಗಡಿಯ ಉಮೇಶ್ ಅಮೀನ್ ಯು ಮತ್ತು ಹರೀಶ್ ಭಂಡಾರಿ ನಿರ್ವಹಿಸಲಿದ್ದಾರೆ. ಶವ ದಹನ ಪೆಟ್ಟಿಗೆಯನ್ನು ಸಾರ್ವಜನಿಕರು ಉಚಿತವಾಗಿ ಪಡೆದುಕೊಳ್ಳಬಹುದಾಗಿದ್ದು ಬಾಡಿಗೆ ವೆಚ್ಚ ಮತ್ತು ನಿರ್ವಾಹಕರ ಗೌರವ ಧನವನ್ನು ಮಾತ್ರ ಪಾವತಿಸಬೇಕಿದೆ. ಶವ ದಹನ ಪೆಟ್ಟಿಗೆ ಬೇಕಾದವರು ಉಮೇಶ್ ಅಮೀನ್(9481761461) ಅಥವಾ ಹರೀಶ್ ಭಂಡಾರಿ(9902806449)ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಯು.ಜಿ.ರಾಧಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here