ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಗೆ ನೆಲ್ಯಾಡಿಯಿಂದ ಹೊರೆಕಾಣಿಕೆ

0

 

ನೆಲ್ಯಾಡಿ: ಜೀರ್ಣೋದ್ಧಾರಗೊಂಡು ಶಿಲಾಮಯವಾಗಿ ನಿರ್ಮಾಣಗೊಂಡಿರುವ ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಗೆ ನೆಲ್ಯಾಡಿ ಭಾಗದಿಂದ ಮೇ. 12ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು.


ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತ್ತೊಟ್ಟು, ಬಲ್ಯ ಗ್ರಾಮಸ್ಥರಿಂದ ಹೊರೆಕಾಣಿಕೆ ಸಲ್ಲಿಸಲಾಯಿತು. ಬೆಳಿಗ್ಗೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಹೊರೆಕಾಣಿಕೆ ಹೊತ್ತ ವಾಹನಗಳು ಮೆರವಣಿಗೆ ಮೂಲಕ ಮಾಯಿಲಕೋಟೆ ದೈವ ಸನ್ನಿಧಿಗೆ ಹೊರಟಿತು. ಮಾಯಿಲಕೋಟೆ ದೈವ ಸನ್ನಿಧಿ ಸಮೀಪದಿಂದ ಭಜನಾ ತಂಡಗಳ ಜೊತೆ ಹೊರೆಕಾಣಿಕೆ ಮೆರವಣಿಗೆಯೂ ಪಾದಯಾತ್ರೆ ಮೂಲಕ ಸಾಗಿತು. ಶ್ರೀ ರಾಜ ರಾಜೇಶ್ವರಿ ಭಜನಾ ಮಂಡಳಿ ಶಿವಾರು, ಆಲಂತಾಯ ಹಾಗೂ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ ಕೊಣಾಲು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಕೊಕ್ಕಡ ಸೀಮೆ ಮಾಯಿಲಕೋಟೆ ದೈವಗಳ ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷರೂ, ಹೊರೆಕಾಣಿಕೆ ನೆಲ್ಯಾಡಿ ವಲಯ ಸಮಿತಿ ಸಂಚಾಲಕರೂ ಆದ ಜಯಾನಂದ ಬಂಟ್ರಿಯಾಲ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರೂ ಆದ ಬಾಲಕೃಷ್ಣ ಗೌಡ ಹಾರ್ಪಳರವರ ನೇತೃತ್ವದಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸದಾನಂದ ಕುಂದರ್, ಹೊರೆಕಾಣಿಕೆ ಸಮಿತಿ ಸದಸ್ಯರಾದ ರತ್ನಾಕರ ಶೆಟ್ಟಿ ಅಶ್ವಮೇಧ, ತುಕರಾಮ ರೈ, ವಸಂತ ಗೌಡ ಪುಚ್ಚೇರಿ, ಪುರುಷೋತ್ತಮ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್, ಪ್ರಮುಖರಾದ ಬಾಲಕೃಷ್ಣ ಬಾಣಜಾಲು, ಸುಮಿತ್ರಾ, ಸೆಬಾಸ್ಟಿಯನ್ ಪಿ.ಜೆ., ನೋಣಯ್ಯ ಗೌಡ ಡೆಬ್ಬೇಲಿ, ನೋಣಯ್ಯ ಪೂಜಾರಿ ಅಂಬರ್ಜೆ, ಸವಿತಾ ಸರ್ವೋತ್ತಮ ಗೌಡ, ಲಕ್ಷ್ಮಣ ಗೌಡ ಇಚ್ಚೂರು, ಸುಂದರ ಗೌಡ ಅತ್ರಿಜಾಲು, ಹೇಮಾವತಿ ಜೆ., ನಮಿತಾ ಸದಾನಂದ, ಹರೀಶ್ ಶೆಟ್ಟಿ, ರಾಕೇಶ್ ಗೌಡ ನೆಲ್ಯಾಡಿ, ರವಿಪ್ರಸಾದ್ ಶೆಟ್ಟಿ ರಾಮನಗರ, ಪ್ರಕಾಶ್ ಪೂಜಾರಿ, ಪದ್ಮಯ ಗೌಡ ದೋಂತಿಲ, ಜಯಂತಿ ಬಾಲಕೃಷ್ಣ ಗೌಡ ಬಾಕಿಜಾಲು, ಪೂವಪ್ಪ ಗೌಡ ಇಚ್ಚೂರು, ಚಂದ್ರಶೇಖರ ಶೆಟ್ಟಿ ರಾಮನಗರ, ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪದಾಧಿಕಾರಿಗಳು, ಸದಸ್ಯರು, ಕೊಲ್ಯೊಟ್ಟು ಪ್ರಮುಖಿ ಸ್ವಸಹಾಯ ಸಂಘಗಳ ಸದಸ್ಯರು, ನೆಲ್ಯಾಡಿ, ಗೋಳಿತ್ತೊಟ್ಟು, ಕೊಣಾಲು, ಆಲಂತಾಯ, ಪೆರ್ಲ, ಮಾದೇರಿ, ಇಚ್ಚೂರು, ಪುಚ್ಚೇರಿ, ಪಡುಬೆಟ್ಟು, ಹಾರ್ಪಳ, ಬೊನ್ಯಸಾಗು, ರಾಮನಗರ, ಬಲ್ಯ, ಹೊಸಮಜಲು, ದೋಂತಿಲ, ಕೌಕ್ರಾಡಿ ಗ್ರಾಮಸ್ಥರು ಭಾಗವಹಿಸಿದ್ದರು. ನೋಣಯ್ಯ ಶೆಟ್ಟಿ ಅಂಬರ್ಜೆಯವರ ನೇತೃತ್ವದಲ್ಲಿ ನಡೆದ ಕುಣಿತ ಭಜನೆಯು ಹೊರೆಕಾಣಿಕೆ ಮೆರವಣಿಗೆಗೆ ಮೆರುಗು ತಂದಿತು.

LEAVE A REPLY

Please enter your comment!
Please enter your name here