ಪುತ್ತೂರು ಪಾಲಿಕ್ಲಿನಿಕ್ ಶುಭಾರಂಭ

0

  • ಆರೋಗ್ಯ ಸರಿಯಿದ್ದರೆ ಮಾತ್ರ ಸಂಪತ್ತಿಗೆ ಮಹತ್ವ-ಮೂಡಬಿದ್ರೆಶ್ರೀ”

 

ಪುತ್ತೂರು : ಬೊಳುವಾರು ಮಹಾವೀರ ಮೆಡಿಕಲ್ ಸೆಂಟರ್ ಎದುರು ಗಡೆಯ ಮಹಾವೀರ ಮಾಲ್‌ನಲ್ಲಿ ಪುತ್ತೂರು ಪಾಲಿಕ್ಲಿನಿಕ್ ಮೇ.೧೨ರಂದು ಶುಭಾರಂಭಗೊಂಡಿತು.

ಪಾಲಿಕ್ಲಿನಿಕ್‌ನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಮೂಡಬಿದ್ರಿ ಮಠದ ಡಾ. ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಮಾತನಾಡಿ, ಆರೋಗ್ಯವೇ ಸಂಪತ್ತು. ಆರೋಗ್ಯ ಸರಿಯಿದ್ದರೆ ಮಾತ್ರ ಸಂಪತ್ತಿಗೆ ಮಹತ್ವ. ಆರೋಗ್ಯ ಸರಿಯಿಲ್ಲದಿದ್ದರೆ ಸಂಪತ್ತನ್ನು ಅನುಭವಿಸಲು ಸಾಧ್ಯವಿಲ್ಲ. ವೈದ್ಯರು ನಮ್ಮಲ್ಲಿರುವ ಅಜ್ಞಾನ ಗುರುತಿಸಿ, ಸುಜ್ಞಾನದ ಬೆಳಕು ನೀಡುವವರು ಆರೋಗ್ಯಕ್ಕೆ ಪೂರಕವಾದ ಔಷಧ ನೀಡುವವರು ವೈದ್ಯರ ಸೇವೆಯೇ ಪ್ರಾಮುಖ್ಯವಾಗಿದ್ದು ದೇವರು, ಗುರುವಿನ ನಂತರದ ಸ್ಥಾನ ಅವರಿಗೆ ನೀಡುತ್ತೇವೆ. ವೈದ್ಯರು ಜಾತಿ, ಮತ, ಭಾಷೆ, ಧರ್ಮ ಭೇದವಿಲ್ಲದೆ ಎಲ್ಲರಿಗೂ ದೇವರಂತೆ ಚಿಕಿತ್ಸೆ ನೀಡುತ್ತಾರೆ. ವೈದ್ಯರಲ್ಲಿ ಮಾನವೀಯತೆಯ ದೈವೀ ಸಂಪತ್ತು ಇರುವಂತೆ ವೈದ್ಯರನ್ನು ಗೌರವಿಸಬೇಕು ಎಂದರು. ವೈದ್ಯರಲ್ಲಿರುವ ಒಳ್ಳೆಯ ಮಾತುಗಳೇ ಅವರು ನೀಡುವ ಪ್ರಥಮ ಔಷಧ. ಅವರಲ್ಲಿರುವ ಉತ್ತಮ ಮಾತುಗಳೇ ಪರಿಣಾಮಕಾರಿ ಔಷಧ. ಇದು ವಿಜ್ಞಾನಕ್ಕೆ ಸವಾಲಾದ ಗುಣವಾಗಿದೆ. ವೈದ್ಯರನ್ನು ಕಂಡಾಗಲೇ ಕೆಲವರಿಗೆ ಅರ್ಧದಷ್ಟು ಕಾಯಿಲೆಗಳು ವಾಸಿಯಾಗುತ್ತದೆ. ಈ ಗುಣಗಳು ಎಲ್ಲಾ ವೈದ್ಯರಲ್ಲಿಬೇಕು ಎಂದು ಹೇಳಿ ಶ್ರೀಗಳು ಶುಭಹಾರೈಸಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ ಹಾರಕರೆ ಕೃಷಿಕ ಕುಟುಂಬದಿಂದ ಬೆಳೆದು ಬಂದು ವೈದ್ಯಕೀಯದಲ್ಲಿ ಉನ್ನತ ವ್ಯಾಸಂಗ ಮಾಡಿ, ದೊಡ್ಡ ದೊಡ್ಡ ಪಟ್ಟಣಗಳನ್ನು ಆಶ್ರಯಿಸದೇ ಮಾತೃ ನೆಲದ ಅಭಿಮಾನದಿಂದ ತನ್ನೂರಿನಲ್ಲಿಯೇ ಸೇವೆ ನೀಡಲು ಮುಂದಾಗಿರುವುದನ್ನು ಶ್ಲಾಸಿದರು. ನಿಮ್ಮ ಸೇವೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಗುರುತಿಸಲಿ. ಮಾತೃ ನೆಲದಲ್ಲಿಯೇ ಸೇವೆ ಸಲ್ಲಿಸುವ ಮೂಲಕ ಊರಿನ ಗೌರವವನ್ನು ವೃದ್ಧಿಸಿದಿರಿ. ಇದು ಎಲ್ಲರಿಗೂ ಮಾದರಿಯಾಗಲಿ ಎಂದರು.

 

ಮೂಡಬಿದ್ರೆ ಶ್ರೀಗಳು ಆಶೀರ್ವಚನ ನೀಡುತ್ತಿರುವುದು

ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಮಾತನಾಡಿ, ಪುತ್ತೂರು ನಗರವು ದಿನೇ ದಿನೇ ಬೆಳೆಯುತ್ತದೆ. ಜಿಲ್ಲಾಕೇಂದ್ರ ಆಗುವ ಹಂತದಲ್ಲಿರುವ ಪುತ್ತೂರಿಗೆ ಇಂತಹ ಕ್ಲಿನಿಕ್ ಆವಶ್ಯಕವಾಗಿದೆ. ಹಳ್ಳಿಯ ಜನತೆಗೆ ಮಂಗಳೂರಿನ ಮಾದರಿಯಲ್ಲಿ ಪಾಲಿ ಕ್ಲಿನಿಕ್ ಮುಖಾಂತರ ಸೇವೆ ದೊರೆಯಲು ಸಹಕಾರಿಯಾಗಲಿದೆ ಎಂದರು.

ಮಂಗಳೂರು ಎಜೆ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಎಂಡಿ ಮತ್ತು ಸಿಇಒ ಡಾ.ಪ್ರಶಾಂತ್ ಮಾರ್ಲ ಮಾತನಾಡಿ, ದ.ಕ ಜಿಲ್ಲೆಯ ವೈದ್ಯರಿಗೆ ಹೊರ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭಾರೀ ಬೇಡಿಕೆಯಿದೆ. ನಾನಾ ಕಾರಣಗಳಿಂದ ಬಹಳಷ್ಟು ವೈದ್ಯರು ಹಳ್ಳಿಗಳಲ್ಲಿ ಸೇವೆ ನೀಡಲು ಹಿಂಜರಿಯುತ್ತಾರೆ, ಆದರೆ ಪಾಲಿಕ್ಲಿನಿಕ್ ಮುಖಾಂತರ ಹಳ್ಳಿಯ ಜನರಿಗೆ ಸೇವೆ ನೀಡಲು ಮುಂದಾಗಿದ್ದು ಜನರಿಗೆ ಉತ್ತಮ ಚಿಕಿತ್ಸೆ ದೊರೆಯಲು ಸಹಕಾರಿಯಾಗಲಿದೆ ಎಂದರು. ಧನ್ವಂತರಿ ಆಸ್ಪತ್ರೆಯ ಡಾ.ಚಂದ್ರಶೇಖರ ಕಜೆ ಮಾತನಾಡಿ, ಪಾಲಿಕ್ಲಿನಿಕ್ ಮುಖಾಂತರ ಯುವ ವೈದ್ಯರು ಪುತ್ತೂರಿಗೆ ಹೊಸ ಆಯಾಮ, ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ ಎಂದರು.

ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮಾತನಾಡಿ, ವೈದ್ಯರು ರೋಗಿಯ ರೋಗವನ್ನು ಮಾತ್ರ ನೋಡುವುದಲ್ಲ. ಆತನ ಮನುಷ್ಯತ್ವವನ್ನು ನೋಡಬೇಕು. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆಯು ಜನತೆಯ ಪ್ರೀತಿಗೆ ಪಾತ್ರವಾಗಲಿ ಎಂದು ಹೇಳಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಹಕಾರವಿದೆ ಎಂದರು.

ಮಹಾವೀರ ಹಾಸ್ಪಿಟಲ್‌ನ ಎಮ್.ಡಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಹೊಂದಾಣಿಕೆಯಿಂದ ನಡೆಯಲಿ. ಎಲ್ಲಾ ಉತ್ತಮ ಸೇವೆ ದೊರೆಯಲು.
ಒಂದು ಉತ್ತಮ ಕ್ಲಿನಿಕ್ ನಡೆಸಲು ವೈದ್ಯರು ಹಾಗೂ ಅದಕ್ಕೆ ಪೂರಕವಾದ ಸಲಕರಣೆಗಳ ಜೊತೆಗೆ ಹೊಂದಾಣಿಕೆ ಆವಶ್ಯಕ. ಪಾಲಿ ಕ್ಲಿನಿಕ್‌ನಲ್ಲಿ ಇನ್ನಷ್ಟು ಉತ್ತಮ ಸಲಕರಣೆಗಳೊಂದಿಗೆ ಪುತ್ತೂರಿನಲ್ಲಿ ಉತ್ತಮ ಆರ್ಥೋಪೆಡಿಕ್ ಆಸ್ಪತ್ರೆಯನ್ನು ಪ್ರಾರಂಭಿಸುವಂತಾಗಲಿ ಎಂದು ಹಾರೈಸಿದರು.

ಡಾ. ನಝೀರ್ ಅಹಮ್ಮದ್ ಮಾತನಾಡಿ, ಕಲಿತ ವಿದ್ಯೆಯನ್ನು ಪ್ರಾಮಾಣಿಕವಾಗಿ ಸೇವೆ ನೀಡಿದಾಗ ಅಭಿವೃದ್ಧಿ ಸಾಧ್ಯ. ಹಿರಿಯ ವೈದ್ಯರ ಸಲಹೆ, ಸಹಕಾರ ಪಡೆದುಕೊಳ್ಳುವುದರ ಜೊತೆಗೆ ಬಡರೋಗಿಗಳಿಗೆ ರಿಯಾಯಿತಿ ಹಾಗೂ ಅವರಿಗೆ ಸಹಕಾರ ನೀಡಿದಾಗ ಅಭಿವೃದ್ಧಿ ಎಂದರು.

ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಪುತ್ತೂರು ಪಾಲಿಕ್ಲಿನಿಕ್ ದಾಖಲೆಯ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಕೃಷಿ ಕುಟುಂಬದಿಂದ ಬಂದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಾಹಸಕ್ಕೆ ಕೈಹಾಕಿದ್ದು, ಪುತ್ತೂರಿನಲ್ಲಿ ಮುತ್ತುವಾಗಿ ಪುತ್ತೂರು ಪಾಲಿ ಕ್ಲಿನಿಕ್ ಬೆಳೆಯಲಿ ಎಂದರು.

ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಎಪಿಎಂಸಿ ಸದಸ್ಯ ಕೃಷ್ಣ ಕುಮಾರ್ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್ ಮ್ಹಾಲಕ ಬಲರಾಮ ಆಚಾರ್ಯ, ಮುಳಿಯ ಜ್ಯವೆಲ್ಸ್‌ನ ಆಡಳಿತ ನಿರ್ದೆಶಕ ಕೃಷ್ಣನಾರಾಯಣ ಮುಳಿಯ, ಶಿವರಾಮ ಆಳ್ವ, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಡಾ.ಶಶಿಧರ ಕಜೆ, ಉದ್ಯಮಿಗಳಾದ ವಾಮನ ಪೈ, ವಿಶ್ವಪ್ರಸಾದ್ ಸೇಡಿಯಾಪು, ಶ್ರೀಕಾಂತ್ ಕೊಳತ್ತಾಯ, ಚೈತ್ರ ನಾರಾಯಣ ಸೇಡಿಯಾಪು, ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ಬಾಲಕೃಷ್ಣ ಜೋಯಿಷ ಯರ್ಮುಂಜ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಮಧು ನರಿಯೂರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ವ, ನಿರ್ದೇಶಕ ರಾಜಶೇಖರ ಜೈನ್, ಧನ್ಯಕುಮಾರ್ ಬಿಳಿಯೂರು, ಶಿಲ್ಪ ಗ್ಯಾಸ್‌ನ ಉಮಾನಾಥ, ನೆಲ್ಲಿಕಟ್ಟೆ ರಾಮಕೃಷ್ಣ ಸೇವಾಶ್ರಮದ ಕಾರ್ಯದರ್ಶಿ ಗುಣಪಾಲ ಜೈನ್, ನ್ಯಾಯವಾದಿಗಳಾದ ವಿಜಯ ನಾರಾಯಣ, ವಿರೂಪಾಕ್ಷ ಭಟ್, ಎಂ.ಪಿ ಅಬೂಬಕ್ಕರ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎ.ಜೆ ರೈ, ಆರ್.ಎಚ್ ಸೆಂಟರ್ ಮ್ಹಾಲಕ ಗೋಪಾಲ್ ಎಂ.ಯು., ಶಿವರಾಮ ನಾಕ್ ದೇಂತಡ್ಕ, ಭಾಸ್ಕರ ರೈ ಕಂಟ್ರಮಜಲು, ಬನ್ನೂರು ಗ್ರಾ.ಪಂ ಸದಸ್ಯ ಗಿರಿಧರ ಪಂಜಿಗುಡ್ಡೆ, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು, ರಾಜೇಶ್ ಬೇರಿಕೆ, ಶ್ರೀಧರ ಪಂಜಿಗುಡ್ಡೆ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನವೀನ್ ಪಡಿವಾಲ್ ಪ್ರಾರ್ಥಿಸಿದರು. ಅಜೇಯ್ ಪಡಿವಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ.ಅಶೋಕ್ ಪಡಿವಾಳ್, ಡಾ.ರಾಜಶ್ರೀ ಪಡಿವಾಳ್, ಹಾರಕರೆ ವೆಂಕಟ್ರಮಣ ಭಟ್, ಪ್ರೇಮ ವಿ. ಭಟ್ ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಸ್ವಾಗತಿಸಿದರು. ನರೇಂದ್ರ ಪಡಿವಾಳ್, ಡಾ.ಪೃಥ್ವಿಜಾ ಶೆಟ್ಟಿ, ಆರ್ಕಿಟೆಕ್ಟ್ ಸುದರ್ಶನ್ ಹಾರಕರೆ, ರಚನಾ ಅಜೇಯ್ ಪಡಿವಾಳ್, ಪ್ರದೀಪ್ ರಾವ್ ಕೆ.ಜೆ. ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಡಾ.ಸಚಿನ್ ಶಂಕರ್ ವಂದಿಸಿದರು.

ಸಂಜೀವ ಮಠಂದೂರು ಸಂಜೀವಿನಿ ಪರ್ವತವಿದ್ದಂತೆ

ಸಂಜೀವಿನಿ ಪರ್ವತದಲ್ಲಿ ಎಲ್ಲ ರೋಗಗಳನ್ನು ನಿವಾರಿಸುವ ಔಷಧಿಯ ಗುಣವಿದೆ. ಸಂಜೀವಿನಿ ಪರ್ವತವಿದ್ದಲ್ಲಿ ರೋಗ ನಿವಾರಣೆಯಾಗುತ್ತದೆ. ಹೀಗಾಗಿ ಸಂಜೀವ ಮಠಂದೂರು ಇರುವಲ್ಲಿ ಸಂಜೀನಿನಿ ಪರ್ವತವಿದ್ದಂತೆ. ಎಲ್ಲಾ ರೀತಿಯ ಸೇವೆಗಳನ್ನು ಕೇಂದ್ರವನ್ನಾಗಿಟ್ಟುಕೊಂಡ ಪಾಲಿಕ್ಲಿನಿಕ್ ಯಶಸ್ವಿಯಾಗಲಿದೆ ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು.

ಪಾಲಿಕ್ಲಿನಿಕ್‌ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ, ನೂತನ ಆವಿಷ್ಕಾರಗಳೊಂದಿಗೆ, ನುರಿತ ವೈದ್ಯರಿಂದ ಚಿಕಿತ್ಸೆಗಳು ದೊರೆಯಲಿದೆ. ಎಲುಬು ತಜ್ಞರಾಗಿ ಡಾ. ಸಚಿನ್‌ಶಂಕರ್ ಹಾರಕೆರೆ ಹಾಗೂ ದಂತ ವೈದ್ಯರಾಗಿ ಡಾ.ಪೃಥ್ವಿಜಾ ಶೆಟ್ಟಿ ಸೇವೆಗೆ ಲಭ್ಯರಿದ್ದಾರೆ ಎಂದು ಡಾ.ಅಜೇಯ್ ಪಡಿವಾಲ್ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮ ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿತ್ತು

LEAVE A REPLY

Please enter your comment!
Please enter your name here