ಕಾವು ಹೇಮನಾಥ ಶೆಟ್ಟಿಯವರಿಂದ ಈದ್ ಸೌಹಾರ್ದ ಕೂಟ

0

  • ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸಿ ಗಲಭೆಗೆ ಬಿಜೆಪಿ ಯತ್ನ: ನಲಪಾಡ್ ಆರೋಪ

 

ಪುತ್ತೂರು: ದೇಶದಲ್ಲಿ ಅನಾದಿ ಕಾಲದಿಂದಲೂ ಇಲ್ಲಿರುವ ಪ್ರತಿಯೊಂದು ಧರ್ಮಿಯರೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಇದನ್ನು ಸಹಿಸಲಾಗದ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಹಿಂದೂ-ಮುಸ್ಲಿಂ ನಡುವೆ ಒಡಕುಮೂಡಿಸಿ ಕೋಮುಲಗಭೆಗೆ ಯತ್ನಿಸುತ್ತಿದೆ ಇದನ್ನು ತಡೆಯಲು ನಾವು ಭಾರತೀಯರಾಗಿ ಹೋರಾಟ ಮಾಡಬೇಕಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಹೇಳಿದರು.

ಅವರು ಪುತ್ತೂರಿನ ಲಯನ್ಸ್ ಸೇವಾಭವನದಲ್ಲಿ ಮೇ ೧೨ ರಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ನಡೆದ ಈದ್ ಸೌಹಾರ್ದಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸೌಹಾರ್ದತೆ ಇಂದಿನ ಕಾಲದ ಬೇಡಿಕೆಯಾಗಿದೆ; ಕಾವು ಹೇಮನಾಥ ಶೆಟ್ಟಿ: ಈದ್ ಸೌಹಾರ್ದಕೂಟದ ನೇತೃತ್ವ ವಹಿಸಿದ್ದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸೌಹಾದತೆ ಇಂದಿನ ಕಾಲದ ಬೇಡಿಕೆಯಾಗಿದೆ. ಸಮಾಜದಲ್ಲಿ ಕ್ಷುಲ್ಲಕ ವಿಚಾರವನ್ನು ಹಿಡಿದು ಕೋಮುಗಳ ನಡುವೆ ಪರಸ್ಪರ ವಿಷ ಬೀಜವನ್ನು ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಜನರ ನಡುವೆ ಸೇತುಬಂಧವಾಗುತ್ತಿದೆ ಎಂದು ಹೇಳಿದರು.

ಹಿಂದೂಗಳಿಂದ ಮುಸ್ಲಿಮರಿಗೆ ತೊಂದರೆಯಾಗಿಲ್ಲ; ಹುಸೈನ್ ದಾರಿಮಿ: ದೇಶದಲ್ಲಿ ಹಿಂದೂಗಳಿಂದ ಯಾವ ಮುಸ್ಲಿಮರಿಗೂ ತೊಂದರೆಯಾಗಿಲ್ಲ, ತೊಂದರೆ ಆಗುವುದೂ ಇಲ್ಲ. ಹಿಂದೂ ಧರ್ಮದ ಹೆಸರಿನಲ್ಲಿ ನಕಲಿ ಹಿಂದುತ್ವವನ್ನು ಪ್ರತಿಪಾದಿಸುವ ಕೋಮುಕ್ರಿಮಿಗಳಿಂದ ಸೌಹಾರ್ಧತೆಗೆ ಧಕ್ಕೆಯಾಗುತ್ತಿದೆ. ಇಂಥವರನ್ನು ಸರಕಾರ ನಿಗ್ರಹಿಸಬೇಕಿದೆ. ದೇಶದಲ್ಲಿ ಹಿಂದೂ- ಮುಸ್ಲಿಮರು ಪರಸ್ಪರ ಸೌಹಾರ್ಧತೆಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಕೆ.ಆರ್. ಹುಸೈನ್ ದಾರಿಮಿ ಹೇಳಿದರು.

ಬನ್ನೂರು ಚರ್ಚ್‌ನ ಧರ್ಮಗುರು ಪ್ರಶಾಂತ್ ಫೆರ್ನಾಂಡಿಸ್ ಮಾತನಾಡಿ ಸೌಹಾರ್ಧತೆಯ ಕುರಿತು ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಅಬ್ದುಲ್ ಕುಂಞಿ ಲಂಕೇಶ್ ಉಸ್ತಾದ್, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್ ಕೆ ಜಗನ್ನಿವಾಸ್ ರಾವ್, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಎಲ್ ಟಿ ರಝಾಕ್ ಹಾಜಿ,ಮಾಜಿ ಪುರಸಭೆ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಾಜಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ ಎ ರಹಿಮಾನ್ ಬಪ್ಪಳಿಗೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಫಝಲ್ ರಹೀಂ, ಇಕ್ಬಾಲ್ ಬಾಳಿಲ,ಮಾಜಿ ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಹನೀಫ್ ಪುಂಚತ್ತಾರ್, ಯುವ ಕಾಂಗ್ರೆಸ್ ಜಿಲ್ಲಾ ಪ್ರ. ಕಾರ್ಯದರ್ಶಿ ಬಶೀರ್ ಪರ್ಲಡ್ಕ, ರಾಜ್ಯ ಎನ್‌ಎಸ್‌ಯುಐ ಉಪಾಧ್ಯಕ್ಷ ಫಾರೂಕ್ ಬಾಯಬೆ,ಗಂಗಾದರ್ ಎಲಿಕ, ಇಸಾಕ್ ಸಾಲ್ಮರ, ಲ್ಯಾನ್ಸಿ ಮಸ್ಕರೇನ್ಹಸ್, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರಹಿಮಾನ್ ಸಂಪ್ಯ, ಮೋನು ಬಪ್ಪಳಿಗೆ, ಅನ್ವರ್ ಖಾಸಿಂ, ರವಿಚಂದ್ರ ಆಚಾರ್ಯ ಸಂಪ್ಯ, ದಿವ್ಯನಾಥ ಶೆಟ್ಟಿ ಕಾವು, ದಿನೇಶ್ ಪಾಣಾಜೆ, ಅಶ್ರಫ್ ಉಜಿರೋಡಿ, ಅಬ್ದುಲ್ ಖಾದರ್ ಮೇರ್ಲ, ಅಶ್ರಫ್ ಕಲ್ಲೇಗ, ಹೊನ್ನಪ್ಪ ಪೂಜಾರಿ ಕೈಂದಾಡಿ, ನ್ಯಾಯವಾದಿ ಎಂ ಪಿ ಅಬೂಬಕ್ಕರ್, ಅಬ್ಬಾಸ್ ಮುರ, ಕೆದಿಲ ಗ್ರಾಪಂ ಸದಸ್ಯೆ ಬೀಪಾತುಮ್ಮ, ಶಮ್ಮೂನ್ ಪರ್ಲಡ್ಕ, ನವೀನ್ ನಾಯ್ಕ್ ಬೆದ್ರಾಳ, ವೆಲೇರಿಯನ್ ತೋರಸ್, ಮಧುರಾ ಇಬ್ರಾಹಿಂ , ಎಂ ಕೆ ಮೂಸಾ, ಮುಕೇಶ್ ಕೆಮ್ಮಿಂಜೆ, ಸುದಾ ದರ್ಬೆ, ನಝೀರ್ ಮುಕ್ವೆ, ಜಮಾಲ್ ಮುಕ್ವೆ, ಅಬೂಬಕ್ಕರ್ ಮುಲಾರ್, ಅಭಿಷೇಕ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here