ಬೆಟ್ಟಂಪಾಡಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಪ್ರಶಿಕ್ಷಣ ಕಾರ್ಯಾಗಾರ

0

  • ಎನ್ನೆಸ್ಸೆಸ್ ಶಿಬಿರ ವ್ಯಕ್ತಿ ಬದುಕಿನ ದಾರಿದೀಪ – ಹರಿಪ್ರಸಾದ್ ಎಸ್

 

 

ಪುತ್ತೂರು: ವಿಧ್ಯಾರ್ಥಿ ಜೀವನದಲ್ಲಿ ಎನ್ನೆಸ್ಸೆಸ್ ಶಿಬಿರದಲ್ಲಿ ಭಾಗವಹಿಸುವ ಮುಖಾಂತರ ವಿದ್ಯಾರ್ಥಿಗಳು ಶಿಸ್ತು ಬದ್ಧ ದೈನಂದಿನ ಜೀವನವನ್ನು ನಡೆಸಬಹುದು. ಶಿಬಿರದಲ್ಲಿ ಆಯೋಜಿಸುವ ಬೇರೆ ಬೇರೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕ ಜೀವನ ನಡೆಸಲು ದಾರಿದೀಪವಾಗಲಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ‌ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್ ಇವರು ಹೇಳಿದರು. ಮೇ 10 ರಂದು ಬೆಟ್ಟಂಪಾಡಿ ಕಾಲೇಜಿನಲ್ಲಿ ಅಯೋಜಿಸಿದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಬಿರದ ದಿನಚರಿಯ ಚಿತ್ರಣವನ್ನು ನೀಡಿದರಲ್ಲದೆ ಶಿಬಿರದಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆಯ ಕುರಿತು ಮಾಹಿತಿ ನೀಡಿದರು.

ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ದೀಕ್ಷಿತ್ ಕುಮಾರ್, ಎನ್ಎಸ್ಎಸ್ ಘಟಕ ನಾಯಕರುಗಳಾದ ಸಾರ್ಥಕ್ ಟಿ, ಶ್ರುತಿಕಾ ಪಿ, ಶೋಭಿತ್ ಕುಮಾರ್ ಕೆ ಮತ್ತು ಲಿಖಿತಾ ಕೆ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ವಯಂಸೇವಕರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here