ಕೊಂಬಾರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0

ಕೊಂಬಾರು; ಕೊಂಬಾರು ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇ.11 ರಂದು ಚಾಲನೆ ನೀಡಲಾಯಿತು. ಮೂರು ಲಕ್ಷ ವೆಚ್ಚದ ಕೊಂಬಾರು ಗ್ರಾಮದ ಬೀಡು ಎಂಬಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆ ಕಾಂಕ್ರಿಟೀಕರಣ, 4.5 ಲಕ್ಷ ವೆಚ್ಚದಲ್ಲಿ ಬೋಳ್ನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ರಚನೆಗೆ, ಮೂರು ಲಕ್ಷ ವೆಚ್ಚದ ಕೋಲ್ಕಜೆ ಎಂಬಲ್ಲಿರುವ ಸಾರ್ವಜನಿಕ ರಸ್ತೆಗೆ ತಡೆಗೋಡೆ ರಚನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಶಿವಪ್ರಸಾದ್ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

 

gp Kombaru

ಎಲ್ಲಾ ಕಾಮಗಾರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುದಾನ ಕಾದಿರಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಸರಿತಾ, ಸದಸ್ಯರಾದ  ಮಧುಸೂದನ್ ಓಡೋಳಿ, ಚೆನ್ನಕೇಶವ ಗೌಡ ಕೈಂತಿಲ,  ಸುಜಾತಾ, ಶ್ರೀಮತಿ ವೀಣಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಶಾಲಾ ಮುಖ್ಯ ಶಿಕ್ಷಕ ಚಿದಾನಂದ ಗೌಡ, ಅಧ್ಯಾಪಕ ಅಬ್ರಹಾಂ, ಎಸ್ಡಿಎಂಸಿ ಅದ್ಯಕ್ಷ ರೇಗಪ್ಪಗೌಡ, ಕಲ್ಲರ್ತನೆಯ ಶಿವಪ್ರಸಾದ್ ಭಟ್, ಎಸ್ಡಿಎಂಸಿ ಸದಸ್ಯರು ಊರಿನ ನಾಗರಿಕರು ಹಾಗು ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಅಶ್ವಥ್, ಜನಾರ್ದನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here