ಮೇ.15 ವಿಟ್ಲ ಭಾಗದ ಗಾಣಿಗ ಸಮಯದಾಯ ವತಿಯಿಂದ ವಾಣಿಯೋತ್ಸವ 2022

0

ವಿಟ್ಲ: ವಿಟ್ಲ ಭಾಗದಲ್ಲಿ ವಾಣಿಯನ್ ಗಾಣಿಗ ಸಮುದಾಯದ 140 ಕುಟುಂಬಳಿದ್ದು, ಸಂಘಟನೆಯ ದೃಷ್ಟಿಯಿಂದ ಮೇ.15ರಂದು ಮೈರ ವಿಟ್ಲ ಗಾರ್ಡನ್ ಸಭಾಭವನದಲ್ಲಿ ವಾಣಿಯೋತ್ಸವ 2022 ಹಮ್ಮಿಕೊಳ್ಳಲಾಗಿದೆ ಎಂದು ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ ಅಧ್ಯಕ್ಷ ಉದಯಕುಮಾರ್ ದಂಬೆ ಹೇಳಿದರು. ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮ ವಿವರಣೆ ನೀಡಿದರು.

 

ಬೆಳಗ್ಗೆ 9ಕ್ಕೆ ಸಮುದಾಯದ ಮಕ್ಕಳಿಂದ ನೃತ್ಯ ವೈವಿಧ್ಯ, 10.30ರಿಂದ ಧಾರ್ಮಿಕ ಚಿಂತನೆ ನಡೆಯಲಿದ್ದು, ಹಿಂದೂ ಚಿತ ಚಿಂತಕ್ ಚಂದ್ರಹಾಸ ಮುರೂರು ಭಾಗವಹಿಸಲಿದ್ದು, ವಿಟ್ಲ ಸೀಮೆಯ ಕೋಮರ ಅಚ್ಚನ್ಮಾರರು, ಚೆಟ್ಟಿಯಾರ್, ಜಂಡಕ್ಕ, ಬೆಳ್ಳಿಪಾಡಚ್ಚನ್ ಪಟ್ಟಿಗಾರರು ಉಪಸ್ಥಿತರಿರಲಿದ್ದಾರೆ.

11.15ರಿಂದ ಸನ್ಮಾನ- ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾ ಉದ್ಘಾಟನೆ ನಡೆಸಲಿದ್ದು, ಇಂಧನ ಸಚಿವ ವಿ. ಸುನಿಲ್ ಕುಮಾರ್ ಆರೋಗ್ಯ ನಿಧಿ ಹಾಗೂ ಶಾಸಕ ಸಂಜೀವ ಮಠಂದೂರು ವಿದ್ಯಾನಿಧಿ ಲೋಕಾರ್ಪಣೆ ಮಾಡಲಿದ್ದಾರೆ. ಕೆ. ರಾಮ ಮುಗ್ರೋಡಿ ಮಂಗಳೂರು, ಬಾಲಕೃಷ್ಣ ವಾಟೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ದಿನಕರ್ ಅಳಿಕೆ, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯ ಜಯರಾಮ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here