ಕೊಕ್ಕಡ ಸೀಮೆ ಮಾಯಿಲಕೋಟೆಯಲ್ಲಿ ದೈವಗಳ ಪ್ರತಿಷ್ಠೆ

0

ನೆಲ್ಯಾಡಿ: 3 ಸಾವಿರ ವರ್ಷಗಳ ಇತಿಹಾಸವಿರುವ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಕೊಕ್ಕಡ ಸೀಮೆ ಮಾಯಿಲಕೋಟೆಯ ದೈವ ಸನ್ನಿಧಿಯಲ್ಲಿ ಮೇ. 13ರಂದು ಬೆಳಿಗ್ಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ ನಡೆಯಿತು.

 


ಕದಂಬ ವಂಶದ ಮಯೂರವರ್ಮನ ಆಡಳಿತದ ಅವಧಿಯಲ್ಲಿ ತುಳು ಮಾಯಿಲ ಎಂಬ ವೀರಪುರುಷ ಸೈನ್ಯ ಕಟ್ಟಿಕೊಂಡು ತನ್ನ ರಕ್ಷಣೆಗಾಗಿ ಕೊಕ್ಕಡ ಸಮೀಪ ಹತ್ತೂರು ಕಾಣುವ ಎತ್ತರ ಪ್ರದೇಶದಲ್ಲಿ ಕೋಟೆ ನಿರ್ಮಾಣಗೊಳಿಸಿ ಹಾಗೂ ದೈವಾನುಗ್ರಹಕ್ಕಾಗಿ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದ ಎಂಬುದು ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಶಿಸಿ ಹೋಗಿದ್ದ ಮಾಯಿಲ ಕೋಟೆಯ ಪುನರ್ ನಿರ್ಮಾಣ, ವರ್ಣಾರ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸುಮಾರು ೧.೫೦ಕೋಟಿ ರೂ.,ವೆಚ್ಚದಲ್ಲಿ ಶಿಲಾಮಯ ಗುಡಿ ನಿರ್ಮಾಣಗೊಳಿಸಲಾಗಿದೆ. ನೂತನ ಗುಡಿಯಲ್ಲಿ ಮೇ ೧೧ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಮೇ ೧೩ರಂದು ಬೆಳಿಗ್ಗೆ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರೂ ಆದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಿಥುನ ಲಗ್ನದಲ್ಲಿ ಕೇರಳ ನೀಲೇಶ್ವರ ಅರವತ್ತು ಎಡಮನೆ ಕೆ.ವಿ.ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠೆ ನಡೆಯಿತು. ಗಣಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆಯಿತು. ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಮಹೋತ್ಸವ ನಡೆಯಿತು. ಸಂಜೆ ಕಲ್ಲಡ್ಕ ವಿಠಲ ನಾಯಕ್ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.

 


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷ ಜಯರಾಮ ಗೌಡ ಹಾರ, ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ, ಕಾರ್ಯಾಧ್ಯಕ್ಷ ಜಯರಾಮ ಗೌಡ ನ್ಯೂ ಆರಿಗ, ಪ್ರಧಾನ ಸಂಚಾಲಕ ಬಿ.ಜಯರಾಮ ನೆಲ್ಲಿತ್ತಾಯ ಶಿಶಿಲ, ಸಹ ಸಂಚಾಲಕ ಹರೀಶ್ ರಾವ್ ಮುಂಡ್ರುಪ್ಪಾಡಿ, ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಎ.,ನ್ಯೂ ಆರಿಗ, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಟಿ.ಎಮ್., ಡಾ| ಬಿ.ಮೋಹನದಾಸ್ ಗೌಡ, ಜಯಾನಂದ ಬಂಟ್ರಿಯಾಲ್, ಕುಶಾಲಪ್ಪ ಗವಡ ಪುಡ್ಕೆತ್ತೂರು, ಕುಮಾರ ಬಳ್ಳಕ ಪಂಜ, ಕಾರ್ಯದರ್ಶಿಗಳಾದ ಶೀನ ನಾಯ್ಕ ಕೊಕ್ಕಡ, ಯೋಗೀಶ್ ಆಲಂಬಿಲ, ಸುರೇಶ್ ಪಡಿಪಂಡ, ಪ್ರಶಾಂತ್ ಪೂವಾಜೆ, ಪುರಂದರ ಗೌಡ ಕಡೀರ ಸೇರಿದಂತೆ ವಿವಿಧ ಸಮಿತಿ ಸಂಚಾಲಕರು, ಸಹ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here