ರೋಟರಿ ಕ್ಲಬ್ ಪುತ್ತೂರು, ಇನ್ನರ್‌ವೀಲ್ ಕ್ಲಬ್ ಜಂಟಿ ಕುಟುಂಬ ಸಮ್ಮಿಲನ

0

  • ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆಗೆ ನಾಗೇಶ್‌ರಿಗೆ ಸನ್ಮಾನ

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಮತ್ತು ಇನ್ನರ್‌ವೀಲ್ ಕ್ಲಬ್ ವತಿಯಿಂದ ಜಂಟಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ರೋಟರಿ ಸದಸ್ಯ ರಾಮ ಭಟ್ ಮತ್ತು ವಿದ್ಯಾ ಆರ್ ಗೌರಿ ದಂಪತಿ ನಿವಾಸದಲ್ಲಿ ನಡೆಯಿತು.

 

ಸರಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆಯ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಎಫ್‌ಡಿಎ ನಾಗೇಶ್ ಅವರನ್ನು ಗೌರವಿಸಲಾಯಿತು.ನಾಗೇಶ್‌ರವರು ಸುದ್ದಿ ಆನ್‌ಲೈನ್ ಓಟಿಂಗ್‌ನಲ್ಲಿ ಜನಮೆಚ್ಚಿದ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಮಹೇಶ್ ಕಜೆ ಅವರು ಮಾನವ ಸಂಬಂಧಗಳ ಕುರಿತಾಗಿ ಮಾತನಾಡಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಕಳೆದ ಹಲವಾರು ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಉತ್ತಮ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಸೇವೆಯಲ್ಲಿ ತೊಡಗಿಸುವ ಬನ್ನೂರು ನಿವಾಸಿ ನಾಗೇಶ್ ಅವರನ್ನು ಅವರ ಮನೆಮಂದಿಯೊಂದಿಗೆ ಸನ್ಮಾನಿಸಲಾಯಿತು.ರೋಟರಿ ಕ್ಲಬ್ ಸದಸ್ಯರಾದ ಅಶೋಕ್ ಪಡಿವಾಳ್, ಚಿಕ್ಕಪ್ಪ ನಾಕ್, ಬಲರಾಮ ಆಚಾರ್ಯ ಅವರನ್ನು ತಮ್ಮ ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿದ ಪ್ರಯುಕ್ತ ಗುರುತಿಸಿ ಸನ್ಮಾನಿಸಲಾಯಿತು.ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು, ಕ್ಲಬ್ ಸರ್ವಿಸ್ ನಿರ್ದೇಶಕ ಸುನಿಲ್ ಶೆಟ್ಟಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಬಿ.ಕೆ, ಕಾರ್ಯದರ್ಶಿ ರಾಜೇಶ್ವರಿ, ಅತಿಥೇಯರಾದ ರಾಮ ಭಟ್ ದಂಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಬಳಿಕ ದತ್ತಾತ್ರೇಯ ರಾವ್ ಮತ್ತು ದಾಮೋದರ್ ಕೆ.ಎ.ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here