ಕುಂಬ್ರ: ಬದ್ರಿಯಾ ಮದ್ರಸ ಪ್ರಾರಂಭೋತ್ಸವ

0

  • ಮಕ್ಕಳು ದಾರಿತಪ್ಪದಂತೆ ಪೋಷರು ನಿಗಾವಹಿಸಬೇಕು: ಸಅದಿ

ಪುತ್ತೂರು: ಮಕ್ಕಳನ್ನು ಎಳೆಯ ಪ್ರಾಯದಲ್ಲೇ ಸರಿದಾರಿಗೆ ತರುವಲ್ಲಿ ಪೋಷಕರು ಹೆಚ್ಚುಗಮನ ನೀಡಿದರೆ ಮಕ್ಕಳು ದೊಡ್ಡವರಾದಾಗ ದಾರಿತಪ್ಪದಂತೆ ನಿಗಾವಹಿಸುವುದು ಸುಲಭವಾಗುತ್ತದೆ ಎಂದು ಕುಂಬ್ರ ಬದ್ರಿಯಾ ಜುಮಾ ಮಸೀದಿ ಖತೀಬರಾದ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್‌ಫಾಲಿಲಿ ಹೇಳಿದರು.
ಅವರು ಮೇ. 14 ರಂದು ಕುಂಬ್ರ ಬದ್ರಿಯಾ ನಗರ ಬದ್ರಿಯಾ ಮದ್ರಸ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಶಿಸ್ತು ಮೀರಿ ವರ್ತಿಸದಂತೆ ನಾವು ನೋಡಿಕೊಳ್ಳಬೇಕು. ಇಬ್ಬ ವ್ಯಕ್ತಿ ದೊಡ್ಡವನಾದ ಬಳಿಕ ಯಾವ ರೀತಿ ಶಿಸ್ತನ್ನು ಜೀವನದಲ್ಲಿ ಪಾಲಿಸಬೇಕೋ ಆ ಶಿಸ್ತನ್ನು ಮಕ್ಕಳಿಗೆ ಮದ್ರಸದಲ್ಲೇ ಕಲಿಯುವಂತಾಗಬೇಕು ಇದಕ್ಕೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ ಎಂದು ಹೇಳಿದರು.

ಮದ್ರಸ ಸದರ್ ಮುಅಲ್ಲಿಂ ಸಿದ್ದಿಕ್ ಸಅದಿ ಮಾತನಾಡಿ ಮಕ್ಕಳ ಕಲಿಕೆ ಮತ್ತು ಕಲಿಕಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮುಅಲ್ಲಿಂ ಆಶಿಕ್ ಹಿಷಾಮಿ ಮಾತನಾಡಿ ಮಕ್ಕಳ ಕೈಗೆ ಮೊಬೈಲ್ ನೀಡದಂತೆ ಪೋಷಕರಿಗೆ ಮನವಿ ಮಾಡಿದರು.

ವೇದಿಕೆಯಲ್ಲಿ ಮಸೀದಿ ಜತೆ ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ಕೊಯಿಲ, ಕೋಶಾಧಿಕಾರಿ ಇಸ್ಮಾಯಿಲ್ ಬದ್ರಿಯಾನಗರ, ನಿಕಟಪೂರ್ವ ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಜಮಾತ್ ಹಿರಿಯರಾದ ಪಳ್ಳಿಕುಂಞಿ ಕಡ್ತಿಮಾರ್ ಉಪಸ್ಥಿತರಿದ್ದರು. ಮಾಜಿ ಜೊತೆ ಕಾರ್ಯದರ್ಶಿ ಬಶೀರ್ ಕಡ್ತಿಮಾರ್, ಮಹಮ್ಮದ್ ಅಶ್ರಫ್ ಮಗಿರೆ, ಮಗಿರೆ ಹನೀಫ್, ಮಗಿರೆ ಲತೀಫ್, ಮುನೀರ್ ಮಗಿರೆ, ಸಿ ಎಂ ಅಬ್ದುಲ್‌ರಹಿಮಾನ್ ಶಾಂತಿನಡಿ, ಆದಂಕುಂಞಿ ಕೊಯಿಲ, ಸಮದ್ ಬದ್ರಿಯಾನಗರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೇಯಲ್ಲಿ ಸೀರಣಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here