ಚಿಕ್ಕಪುತ್ತೂರು ತರವಾಡು ಮನೆಯಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

  • ಮೇ.15: ಕುಟುಂಬದ ಧರ್ಮದೈವ ರುದ್ರಚಾಮುಂಡಿ ಧರ್ಮನೇಮೋತ್ಸವ

ಪುತ್ತೂರು : ಪುತ್ತೂರು ಕಸಬಾದ ಚಿಕ್ಕಪುತ್ತೂರು ಕುಟುಂಬದ ಧರ್ಮದೈವ ಶ್ರೀರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಮೇ.12ಮತ್ತು 13ರಂದು ಚಿಕ್ಕಪುತ್ತೂರು ತರವಾಡು ಮನೆಯಲ್ಲಿ ನಡೆಯಿತು.

ಮೇ.12ರಂದು ಬೆಳಿಗ್ಗೆ 10ರಿಂದ ಉಗ್ರಾಣ ತುಂಬಿಸುವುದು, ಸಂಜೆ 5ರಿಂದ ತಂತ್ರಿಗಳ ಆಗಮನ, ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಿತು. ಮೇ.13ರಂದು ಬೆಳಿಗ್ಗೆ 5ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ 7.10ರ ವೃಷಭ ಲಗ್ನ ಶುಭಮುಹೂರ್ತದಲ್ಲಿ ಸಬ್ಬಮ್ಮ ತಾಯಿ, ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕುಟುಂಬದ ಹಿರಿಯರಾದ ಲಕ್ಷ್ಮೀ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಮೇ.15ರಂದು ಕುಟುಂಬದ ಧರ್ಮದೈವ ನೇಮೋತ್ಸವ: 15 ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ರುದ್ರಚಾಮುಂಡಿ ಧರ್ಮನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಗುಳಿಗ, ಅಂಗಾರ ಬಾಕುಟ ನೇಮೋತ್ಸವ ನಡೆಯಲಿದೆ

LEAVE A REPLY

Please enter your comment!
Please enter your name here