ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆ ಗೃಹ ಪ್ರವೇಶ, ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಹೊರೆ ಕಾಣಿಕೆ, ಭಜನೆ, ಸಾಂಸ್ಕೃತಿಕ ಹಾಗೂ ವೈದಿಕ ಕಾರ್‍ಯಕ್ರಮ

0

 

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆ ಗೃಹ ಪ್ರವೇಶ ಮತ್ತು ಧರ್ಮದೈವ ಜುಮಾದಿ ಬಂಟ ಮತ್ತು ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತ್ರತ್ವದಲ್ಲಿ ಪುರೋಹಿತರಾದ ಕೇಶವ ಕಲ್ಲೂರಾಯ ಬಂಬಿಲರವರ ಮಾರ್ಗದರ್ಶನದಲ್ಲಿ ಮೇ 15ರಂದು ಜರಗಲಿದ್ದು, ಅದರ ಪ್ರಯುಕ್ತ ಮೇ. ೧೪ ರಂದು ಬೆಳಿಗ್ಗೆ ಹಸಿರು ಹೊರೆ ಕಾಣಿಕೆ ಮೆರವಣಿಗೆಯನ್ನು ಸವಣೂರು ಬಸದಿ ವಠಾರದಿಂದ ಚಾಲನೆ ನೀಡಲಾಯಿತು.

 

 

ಸವಣೂರು ಬಸದಿಯ ಅರ್ಚಕ ಶ್ರೇಯಾಂಸ್ ಕುಮಾರ್ ಇಂದ್ರರವರು ಶುಭಹಾರೈಸಿದರು. ಸವಣೂರಿನ ಹಿರಿಯ ಉದ್ಯಮಿ ಎನ್.ಸುಂದರ ರೈ ಸವಣೂರು ತೆಂಗಿನಕಾಯಿ ಒಡೆಯುವ ಮೂಲಕ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು. ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ,  ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ    ಸದಸ್ಯ ರಾಕೇಶ್‌ ರೈ ಕೆಡಂಜಿ ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯ ಸತೀಶ್ ಅಂಗಡಿಮೂಲೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ ಕನಡಕುಮೇರು, ಶ್ರೀಧರ್ ಸುಣ್ಣಾಜೆ, ರಾಮಕೃಷ್ಣ ಪ್ರಭು ಸವಣೂರು, ರಾಜರಾಮ್ ರೈ ಕಲಾಯಿ, ಪ್ರಜ್ವಲ್ ಕೆ.ಆರ್.ಕೋಡಿಬೈಲು, ಬಾಲಚಂದ್ರ ರೈ ಕೆರೆಕೋಡಿ ಹಾಗೂ ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು. ತರವಾಡು ಮನೆಯ ಯಾಜಮಾನ ವಿಶ್ವನಾಥ ರೈ ದೇವಸ್ಯ ಸ್ವಾಗತಿಸಿ, ಗಿರಿಶಂಕರ್ ಸುಲಾಯ ದೇವಸ್ಯ ಕಾರ್‍ಯಕ್ರಮ ನಿರೂಪಿಸಿದರು. ಬಳಿಕ ಸವಣೂರು ಮುಖ್ಯ ರಸ್ತೆಯಾಗಿ ಮೆರವಣಿಗೆ ಹೊರಟು ಪುಣ್ಚಪ್ಪಾಡಿ ದೇವಶ್ಯ ತರವಾಡು ಮನೆಗೆ ಬಂತು. ಬೆಳಿಗ್ಗೆ ೮.೩೦ಕ್ಕೆ ಉಗ್ರಾಣ ತಂಬಿಸುವು ಕಾರ್‍ಯಕ್ರಮಕ್ಕೆ ಅರ್ಚಕರಾದ ಕೇಶವ ಕಲ್ಲೂರಾಯ ಬಂಬಿಲರವರು ಪೂಜಾ ವಿಧಿ ವಿಧಾನ ನೇರವೇರಿಸಿದರು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್‍ಯಕ್ರಮ, ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಮತ್ತು ಸ್ವಸ್ತಿಕಾ ಶೆಟ್ಟಿ ಹಾಗೂ ಬಳಗ ವಿಶ್ವಕಲಾನಿಕೇತನ ಇನ್‌ಸ್ವಿಟ್ಯೂಟ್ ಆಫ್ ಮತ್ತು ಕಲ್ಚರ್ ಕುದ್ಕಾಡಿ ಪುತ್ತೂರು ಇವರಿಂದ ಭರತನಾಟ್ಯ , ವಿದುಷಿ ಪಾರ್ವತಿ ಪದ್ಯಾಣ ಮತ್ತು ಬಳಗದವರಿಂದ ಸಂಗೀತ ರಸ ಸಂಭ್ರಮ, ಅಪರಾಹ್ನ ಶ್ರವಣರಂಗ ಪ್ರತಿಷ್ಠಾನ ಸವಣೂರು ಇವರಿಂದ ತಾರಾನಾಥ ಸವಣೂರು ಮತ್ತು ಪ್ರಶಾಂತ್ ರೈ ಮುಂಡಾಲಗುತ್ತುರವರ ಸಂಯೋಜನೆಯಲ್ಲಿ ಗಜಪುಷ್ಪ ಮಾಲೆ ಯಕ್ಷಗಾನ ತಾಳಮದ್ದಳೆ ಜರಗಿತು.

ಮೇ ೧೫-ದೇವಶ್ಯ ತರವಾಡು ಮನೆಯ ಗೃಹ ಪ್ರವೇಶ

ಮೇ. ೧೫ ರಂದು ಬೆಳಿಗ್ಗೆ ೭ ರಿಂದ ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ದ್ವಾರಪಾಲಕ ಪೂಜೆ, ಬ್ರಹ್ಮಕಲಶ ಪೂಜೆ ನಡೆದ ಬಳಿಕ ಬೆಳಿಗ್ಗೆ ೯.೫೨ ರಿಂದ ೧೦.೨೨ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ದೇವಶ್ಯ ತರವಾಡು ಮನೆಯ ಗೃಹ ಪ್ರವೇಶ, ನಂತರ ಧರ್ಮದೈವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ತಂಬಿಲ ಸೇವೆ, ಹರಿಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗೊನೆ ಮುಹೂರ್ತ, ಬಳಿಕ ಭಂಡಾರ ತೆಗೆದು, ಎಣ್ಣೆ ವೀಳ್ಯ, ಸಂಜೆಯಿಂದ ಪೂರ್ಣ ರಾತ್ರಿ ತನಕ, ಸತ್ಯದೇವತೆ, ಕೊರೆತ್ತಿ, ಜೋಡು ಕಲ್ಲುರ್ಟಿ, ವರ್ಣರ ಪಂಜುರ್ಲಿ ಹಾಗೂ ಪಿಲಿ ಚಾಮುಂಡಿ ದೈವದ ನೇಮ ಹಾಗೂ ಮೇ. 16 ರಂದು ಬೆಳಿಗ್ಗೆ 8 ರಿಂದ ಧರ್ಮದೈವ ಜುಮಾದಿ ಬಂಟ ದೈವದ ನೇಮ, ಮಧ್ಯಾಹ್ನ 1 ಕ್ಕೆ ಗುಳಿಗ, ಅಂಗಾರಬಾಕುಡ, ಎರುವಲ ದೈವದ ನೇಮ ನಡೆಯಲಿದೆ ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಯಾಜಮಾನ ವಿಶ್ವನಾಥ ರೈ ದೇವಸ್ಯ ಹಾಗೂ ದೇವಸ್ಯ ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here