ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಮಹಾಸಭೆ- ಪುಸ್ತಕ ವಿತರಣೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗು ವಾರ್ಷಿಕ ಮಹಾಸಭೆ

0

ಪುತ್ತೂರು : ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗು ವಾರ್ಷಿಕ ಮಹಾಸಭೆ ಎಂಡೆಸಾಗು ಕೋಚಣ್ಣ ಪೂಜಾರಿಯವರ ಅದಿತಿ ನಿವಾಸದಲ್ಲಿ ಬಾಳಪ್ಪ ಪೂಜಾರಿ ಬಾಲಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ವಿತರಣೆ ಮಾಡಿ ಮಾತನಾಡಿ ಪುತ್ತೂರು ತಾಲೂಕು ಬಿಲ್ಲವ ಸಂಘವೂ ಪ್ರತೀ ವರ್ಷ ೫೧ ಗ್ರಾಮ ಸಮಿತಿಯಲ್ಲಿ ಪುಸ್ತಕ ವಿತರಣೆ ಮಾಡುತ್ತಾ ಬಂದಿದೆ. ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ೩ ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ನೀಡುತ್ತಾ ಬರುತ್ತಿದೆ ಎಂದು ತಿಳಿಸಿದರು. ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷೆ ಹಾಗೂ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಕಾರ್ಯದರ್ಶಿ ನಾಗೇಶ್ ಬಲ್ನಾಡು, ಜತೆಕಾರ್ಯದರ್ಶಿ ಚಿದಾನಂದ, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಸಂಚಾಲಕ ಕೋಚಣ್ಣ ಪೂಜಾರಿ ಎಂಡೆಸಾಗು, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಬಾಬು ಪೂಜಾರಿ ಇದ್ಪಾಡಿ, ಯುವವಾಹಿನಿ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಮಹಿಳಾ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷೆ ಪುಷ್ಪ ಬೊಲೋಡಿ ಹಾಗೂ ಬಿಲ್ಲವ ಗ್ರಾಮ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕುಂಬ್ರ ಸುಶಾ ಡ್ರೆಸ್ಸ್ ಸೆಂಟರ್ ನ ಮ್ಹಾಲಕ ಸುರೇಶ್ ತಿಂಗಳಾಡಿಯವರು ಪ್ರತೀ ವರ್ಷದಂತೆ ಈ ವರ್ಷವೂ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪೂರ್ಣಪ್ರಮಾಣದ ಪುಸ್ತಕವನ್ನು ಉಚಿತವಾಗಿ ನೀಡಿದರು. ಮೋಕ್ಷ ಪ್ರಾರ್ಥಿಸಿ ಗ್ರಾಮ ಸಮಿತಿ ಕಾರ್ಯದರ್ಶಿ ಪ್ರಸಾದ್ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಕೋಚಣ್ಣ ಪೂಜಾರಿ ಸ್ವಾಗತಿಸಿದರು. ಸತೀಶ್ ಕುಮಾರ್ ಎಂಡೆಸಾಗು, ಅಭಿಲಾಷ್ ಯಚ್ ಕೆ., ಮಾಲತಿ ಕೆ., ಬೇಬಿ ಬಾರಿಕೆ, ಅದೀಕ್ಷ ಸಹಕರಿಸಿದರು.

LEAVE A REPLY

Please enter your comment!
Please enter your name here