34-ನೆಕ್ಕಿಲಾಡಿಯಲ್ಲಿ “ರೈಟ್ ಚಾಯ್ಸ್ ಪೆಟ್ರೋಲಿಯಂ” ಶುಭಾರಂಭ

0

  • ಪೆಟ್ರೋಲ್ ಬಂಕ್ ಆಧುನಿಕ ವ್ಯವಸ್ಥೆಗೊಂದು ಪೂರಕ ಸೌಲಭ್ಯ-ಮಠಂದೂರು

 

 

ಉಪ್ಪಿನಂಗಡಿ: ಇಲ್ಲಿನ 34-ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಎಂಬಲ್ಲಿ ನಿರ್ಮಾಣಗೊಂಡ ವಾಹನಗಳ ಇಂಧನ ಉತ್ಪನ್ನ ಮಾರಾಟ ಸಂಸ್ಥೆ ಎಂ.ಆರ್.ಪಿ.ಎಲ್. ಸಂಸ್ಥೆಯ ಅಧಿಕೃತ ವಿತರಣಾ ಕೇಂದ್ರ “”ರೈಟ್ ಚಾಯ್ಸ್ ಪೆಟ್ರೋಲಿಯಂ” ಮೇ. 15ರಂದು ಶುಭಾರಂಭಗೊಂಡಿತು.


ನೂತನ ಸಂಸ್ಥೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಆಧುನಿಕತೆಯ ಐಸರಾಮಿ ಜೀವನದ ಇನ್ನೊಂದು ಭಾಗವಾಗಿ ಕೃಷಿ, ಉದ್ಯೋಗಕ್ಕಾಗಿಯೂ ಇವತ್ತು ಸಾರಿಗೆ ವ್ಯವಸ್ಥೆ ಅತೀ ಅವಶ್ಯಕವಾಗಿದ್ದು, ಇದಕ್ಕೆ ಪೂರಕವಾಗಿ ಪೆಟ್ರೋಲ್ ಬಂಕ್ ಸೇವಾ ಸೌಲಭ್ಯ ಅತೀ ಅಗತ್ಯವಾಗಿದ್ದು, ಅದರಲ್ಲೂ ಹೆಸರುವಾಸಿ ಸಂಸ್ಥೆ ಎಂ.ಆರ್.ಪಿ.ಎಲ್. ಪೆಟ್ರೋಲಿಯಂ ಉನ್ನತ ಸ್ಥಾನದಲ್ಲಿದ್ದು, ಇದೀಗ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 2ನೇ ಬಂಕ್ ಇದಾಗಿದ್ದು, ಸಂಸ್ಥೆಯ ಮೂಲಕ ಗ್ರಾಹಕರಿಗೆ ಒಳ್ಳೆಯ ಸೇವೆ ಸಿಗುವಂತಾಗಲಿ ಮತ್ತು ಸಂಸ್ಥೆಯೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಈ ಭಾಗದಲ್ಲಿಎಂ.ಆರ್.ಪಿ.ಎಲ್. ಸಂಸ್ಥೆಯ ಬಂಕ್ ಇರಲಿಲ್ಲ, ಇದೀಗ ಈ ಸಂಸ್ಥೆಯ ಮೂಲಕ ಸೇವೆ ಲಭಿಸುವಂತಾಗಿದ್ದು, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಚೀಫ್ ರೀಜನಲ್ ಮೆನೇಜರ್ ಲಕ್ಷ್ಮೀಶ, ಸೇಲ್ಸ್ ಮೆನೇಜರ್ ಸ್ವಾಮಿ ಪ್ರಸಾದ್, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಡಾ. ರಘು ಬೆಳ್ಳಿಪ್ಪಾಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬೆಂಗಳೂರು ಇದರ ಉಪ ನಿರ್ದೇಶಕ ಹರೀಶ್ ಪಾಲೇಗಾರ್, ಸಂಸ್ಥೆಯ ಮಾಲಕ ಕೆಂಪರಾಜ್, ಹೇಮನಾಥ ಶೆಟ್ಟಿ ಪುತ್ತೂರು, ಸುದೀಪ್ ಕುಮಾರ್ ಶೆಟ್ಟಿ ಪಾಣೆಮಂಗಳೂರು, ಪ್ರಸಾದ್ ಪಾಣಾಜೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ, ಮಾಜಿ ಸದಸ್ಯರಾದ ಅಬ್ದುಲ್ ಹಮೀದ್, ಅನಿ ಮೆನೇಜಸ್, ಸ್ಥಳೀಯ ಪ್ರಮುಖರಾದ ಇಸ್ಮಾಯಿಲ್ ಮೇದರಬೆಟ್ಟು, ಉಸ್ಮಾನ್, ಎನ್. ಉಮೇಶ್ ಶೆಣೈ, ನಝೀರ್ ಮಠ, ಫೌಝರ್, ಅಜೀಜ್ ಪಿ.ಟ. ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಇಬ್ರಾಹಿಂ ನವಾಝ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ, ಬಂಕ್‌ನಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ವಾಹನಗಳ ಚಕ್ರಗಳಿಗೆ ಗಾಳಿ ವ್ಯವಸ್ಥೆ ಇರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here