ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನಿಂದ ಶ್ರೀನಿವಾಸ ಗೌಡರವರಿಗೆ ಧನಸಹಾಯ

0

 

ಪುತ್ತೂರು : ನೆಲ್ಯಾಡಿ ವಲಯದ ಕೊಣಾಜೆ ಒಕ್ಕಲಿಗ ಸ್ವಸಹಾಯ ಒಕ್ಕೂಟದ ಶ್ರೀಚಕ್ರವರ್ತಿ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯ ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದ ಶ್ರೀನಿವಾಸ ಗೌಡರವರಿಗೆ ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನಿಂದ ಧನಸಹಾಯದ ಚೆಕ್ ವಿತರಿಸಲಾಯಿತು. ವನಸುಮ ಒಕ್ಕಲಿಗ ಸ್ವ ಸಹಾಯ ಸಂಘದ ಹಿರಿಯ ಸದಸ್ಯ ಪೊಡಿಯ ಗೌಡರವರ ಮೂಲಕ ಚೆಕ್ ಹಸ್ತಾಂತರಿಸಲಾಯಿತು. ಟ್ರಸ್ಟ್‌ನ ಸಲಹಾ ಸಮಿತಿಯ ಸದಸ್ಯ ವೆಂಕಪ್ಪ ಗೌಡ, ಒಕ್ಕೂಟದ ಕಾರ್ಯದರ್ಶಿ ಮಾಧವ ಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಮಾಧವ ಗೌಡ ಸ್ವಾಗತಿಸಿ ನೆಲ್ಯಾಡಿ ವಲಯದ ಪ್ರೇರಕ ಪರಮೇಶ್ವರ ಗೌಡ ಕೊಂಬಾರು ವಂದಿಸಿದರು.

LEAVE A REPLY

Please enter your comment!
Please enter your name here