ಮೂಡಂಬೈಲು ಶಾಲೆಯಲ್ಲಿ ಬೆಟ್ಟಂಪಾಡಿ ಕಾಲೇಜಿನ ಎನ್ನೆಸ್ಸೆಸ್‌ ಶಿಬಿರ

0

  • ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ ಸಜ್ಜು

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು  ಮೇ.15ರಿಂದ ಮೇ.21ರವರಗೆ  ಜರುಗಲಿರುವುದು. ವಿಜ್ಷಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ “ಪ್ಲಾಸ್ಟಿಕ್ಮುಕ್ತಸಮಾಜದತ್ತನಮ್ಮಚಿತ್ತ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ ಈ ಶಿಬಿರವು ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಆಯ್ಕೆಯಾದ ಪುಣಚ ಗ್ರಾಮಪಂಚಾಯತ್‌ನಲ್ಲಿ ಆಯೋಜನೆಗೊಳ್ಳಲಿದೆ.

ಪುತ್ತೂರು ವಿಧಾನ ಸಭಾಕ್ಷೇತ್ರದ ಗೌರವಾನ್ವಿತ ಶಾಸಕರಾದಂತಹ ಶ್ರೀಸಂಜೀವ ಮಠಂದೂರು ಇವರು ಉದ್ಘಾಟನೆ ಮಾಡಲಿರುವ ಈ ಶಿಬಿರವು ಹಲವಾರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿದಿನ ಅಪರಾಹ್ನ 2.30ಕ್ಕೆ ಜರುಗಲಿರುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಗ್ರಾಮ ಸಮೀಕ್ಷೆಯ ಮಹತ್ವ, ಎನ್ನೆಸ್ಸೆಸ್ಮತ್ತು ಕೌಶಲ್ಯ ಅಭಿವೃದ್ಧಿ‌, ಐತಿಹಾಸಿಕ ಸ್ಥಳಕ್ಕೆ ಭೇಟಿ, ರಂಗಕಲೆ ಮತ್ತು ನಟನಾ ಕೌಶಲ್ಯ, ವಾರಣಾಸಿ ಫಾರ್ಮ್‌ಗೆ ಭೇಟಿ ಮತ್ತು ಡಾ. ಕೃಷ್ಣಮೂರ್ತಿ ವಾರಣಾಸಿ ಇವರೊಂದಿಗೆ ಸಂವಾದ, ಘನತ್ಯಾಜ್ಯ ವಿಲೇವಾರಿ ವಿಷಯಕ್ಕೆ ಸಂಬಂಧಪಟ್ಟ ಬೀದಿ ನಾಟಕ ಪ್ರದರ್ಶನ ಅಂತರ್ಜಾಲದಲ್ಲಿ ಮೊದಲಾದ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ-ತರಬೇತಿಗಳನ್ನು ನೀಡಲಾಗುವುದು.

ಅಲ್ಲದೇ ಪ್ರತಿದಿನ ಸಾಯಂಕಾಲ 6.30ಕ್ಕೆ ಜರುಗಲಿರುವಂತಹ ಸಭಾಕಾರ್ಯಕ್ರಮದಲ್ಲಿ “ಗ್ರಾಹಕ ಹಿತ ರಕ್ಷಣಾ ಕಾಯಿದೆ” ಬಗ್ಗೆಶ್ರೀ ಎ ಮೋಹನ್‌, “ಯುವಜನತೆ ಮತ್ತು ಆಹಾರಪದ್ಧತಿ” ವಿಷಯದ ಬಗ್ಗೆ ಡಾ. ಪ್ರಮೋದ್‌ಎಮ್‌ಜಿ, “ಗ್ರಾಮಾಭಿವೃದ್ಧಿಯಲ್ಲಿ ಗಾಂಧಿತತ್ವದ ಪ್ರಸ್ತುತತೆ” ಬಗ್ಗೆ ಶ್ರೀಕಿರಣ್‌ ಚಂದ್ರ ರೈ ಬಿ, “ಯುವಜನತೆ ಮತ್ತು ಸಂಸ್ಕಾರ” ವಿಷಯದ ಬಗ್ಗೆ ಶ್ರೀವಿನಾಯಕ ಭಟ್ಗಾಳಿ ಮನೆ, “ನಾಗರಿಕಪ್ರಜ್ಞೆ” ಎಂಬ ವಿಷಯದ ಬಗ್ಗೆ ಶ್ರೀದಾಮೋದರ ಕಣಜಾಲು ಶಿಬಿರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಪನ್ಯಾಸ ನೀಡಲಿದ್ದಾರೆ.

ಈ ವರ್ಷದ ವಿಶೇಷ ಶಿಬಿರದ ವೈಶಿಷ್ಟ್ಯ ಕಾರ್ಯಕ್ರಮದ ಭಾಗವಾಗಿ “ಪ್ರಕೃತಿ ಜೊತೆಗಿನ ಬದುಕು”ಎಂಬ ವಿಷಯದ ಬಗ್ಗೆ ಪದ್ಮ ಶ್ರೀಮಹಾಲಿಂಗನಾಯ್ಕ ಇವರೊಂದಿಗೆಸಂವಾದ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ    ರಿಯ ಪ್ರಾಥಮಿಕ ಶಾಲೆ ಮೂಡಂಬೈಲು ಇಲ್ಲಿನ ತಂಡ ಪ್ರಸ್ತುತ ಪಡಿಸುವ “ವಿಪ್ರೊಅರ್ಥಿಯನ್” ಕಾರ್ಯಕ್ರಮ ಕೂಡ ಜರುಗಲಿರುವುದು. ಅಲ್ಲದೇ ಪ್ರತಿದಿನ ಬೆಳಗ್ಗೆ ೦೬.೧೫ಕ್ಕೆ ಶಿಬಿರಾಧಿಕಾರಿಯಾಗಿರುವ ಶ್ರೀಹರಿಪ್ರಸಾದ್‌ ಎಸ್‌ ಇವರಿಂದ “ದೈನಂದಿನ ಜೀವನಕ್ಕಾಗಿ ಯೋಗ” –ಯೋಗ ಮತ್ತು ಧ್ಯಾನ ತರಬೇತಿ ಕಾರ್ಯಕ್ರಮನ ಡೆಯಲಿರುವುದು.

 

ಏಳು ದಿನದ ಈ ಶಿಬಿರವು ಘನತ್ಯಾಜ್ಯ ವಿಲೇವಾರಿ ಬಗ್ಗೆ ರಿವು, ಶಾಲಾ ಕೈತೋಟದ ನಿರ್ಮಾಣ, ನಾಯಕತ್ವ ತರಬೇತಿ, ಸ್ವಚ್ಛ ಪರಿಸರ ನಿರ್ಮಾಣದ ಕುರಿತು ತರಬೇತಿ, ಸಂಸ್ಕೃತಿಯ ಪರಿಚಯಿಸುವಿಕೆ ಮತ್ತು ಪಾಲನೆ, ಶ್ರಮದಾನದ ಮಹತ್ವ ಅರಿಯ ಪಡಿಸುವುದು, ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ, ಗ್ರಾಮಸಮೀಕ್ಷೆ, ಕಾರ್ಯಕ್ರಮ ನಿರ್ವಹಣೆ ಬಗೆಗಿನ ತರಬೇತಿ, ಬೀದಿ ನಾಟಕ ತರಬೇತಿ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅನುಷ್ಠಾನ, ಐತಿಹಾಸಿಕ ಸ್ಥಳಕ್ಕೆ ಭೇಟಿ ಮತ್ತು ಕಾನೂನಿನ ಅರಿವು ಮೂಡಿಸುವ ಉದ್ದೇಶಗಳನ್ನು ಒಳಗೊಂಡಿದೆ.

ಎನ್ನೆಸ್ಸೆಸ್‌ ಶಿಬಿರದಲ್ಲಿ ಆಯೋಜಿಸಿರುವ ದೈನಂದಿನ ಕಾರ್ಯಕ್ರಮಗಳು ಶಿಬಿರಾರ್ಥಿಗಳಿಗೆ ಜವಾಬ್ದಾರಿಯುತ ಜೀವನ ನಿರ್ವಹಣೆಗೆ ಅವಶ್ಯಕವಿರುವ ವಿವಿಧ ಕೌಶಲ್ಯಗಳನ್ನು ಪರಿಚಯಿಸಿ,  ಬೆಳೆಸುವ ಉದ್ದೇಶವನ್ನು ಇಟ್ಟುಕೊಂಡಿದೆ. – ಹರಿಪ್ರಸಾದ್‌ಎಸ್‌ ರಾ. ಸೇ. ಯೋಜನಾಧಿಕಾರಿ

ಎನ್ನೆಸ್ಸೆಸ್‌ ಶಿಬಿರವು ಶಿಬಿರಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ಭರವಸೆಯ ಜೊತೆಗೆ ಹೊಸ ಜನರ ಜೊತೆ ಬೆರೆತು ಹೊಸತನವನ್ನು ಕಲಿಯುವ ಉತ್ಸಾಹದೊಂದಿಗೆಶಿಬಿರಕ್ಕೆಹೊರಡುತಿದ್ದೇವೆ. ಸಾರ್ಥಕ್‌  ಟಿ ಎನ್ನೆಸ್ಸೆಸ್‌ ಘಟಕನಾಯಕ

LEAVE A REPLY

Please enter your comment!
Please enter your name here