ಕಾಣಿಯೂರು ಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವ

0

ಕಾಣಿಯೂರು: ಕಾಣಿಯೂರು ಶ್ರೀ ರಾಮತೀರ್ಥ ಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವವು ಮೆ 15ರಂದು ನಡೆಯಿತು. ಬೆಳಿಗ್ಗೆ ವಿಶೇಷ ಪೂಜೆ, ಕಾಣಿಯೂರು ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಶ್ರೀ ಕಾಣಿಯೂರು ಮಠ ಸಂಸ್ಥಾನ ದೇವರ ಪೂಜೆ ನಡೆಯಿತು. ಬಳಿಕ ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರಿಂದ ಮಂತ್ರಾಕ್ಷತೆ ನಡೆಯಿತು. ಸುರತ್ಕಲ್ ತಡಂಬೈಲು ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಸುದರ್ಶನ ವಿಜಯ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು.

 

LEAVE A REPLY

Please enter your comment!
Please enter your name here