ಪುಣ್ಚಪ್ಪಾಡಿ ದೇವಸ್ಯ ತರವಾಡು ಗೃಹಪ್ರವೇಶ-ಧರ್ಮ ದೈವ ಜುಮಾದಿ ಬಂಟ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

 

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ದೇವಸ್ಯ ತರವಾಡು ಗೃಹಪ್ರವೇಶ ಮತ್ತು ಧರ್ಮದೈವ ಜುಮಾದಿ ಬಂಟ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ. 15ರಂದು ಜರಗಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ಪುರೋಹಿತರಾದ ಕೇಶವ ಕಲ್ಲೂರಾಯ ಬಂಬಿಲರವರ ಮಾರ್ಗದರ್ಶನದಲ್ಲಿ  ಪೂರ್ವಹ್ನ ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ದ್ವಾರಪಾಲಕ ಪೂಜೆ, ಬ್ರಹ್ಮಕಲಶ ಪೂಜೆ ನಡೆದ ಬಳಿಕ ದೇವಸ್ಯ ತರವಾಡು ಗೃಹಪ್ರವೇಶ ನಡೆಯಿತು. ಬಳಿಕ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜರಗಿತು. ದೇವಸ್ಯ ತರವಾಡು ಮನೆಯ ಯಾಜಮಾನ ವಿಶ್ವನಾಥ ರೈ ದೇವಸ್ಯ ಹಾಗೂ ಕುಟುಂಬಸ್ಥರು, ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಬೇಟಿ
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು ತರವಾಡು ಮನೆಗೆ ಭೇಟಿ ನೀಡಿ, ತರವಾಡು ಮನೆಯ ಪರಿಸರದಲ್ಲಿ ಕದಂಬ ಗಿಡವನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗೆಗಿನ ಮಹತ್ವವನ್ನು ತಿಳಿಸಿದರು ಈ ಸಂದರ್ಭದಲ್ಲಿ ತರವಾಡು ಮನೆಯ ಯಾಜಮಾನ ವಿಶ್ವನಾಥ ರೈ ದೇವಸ್ಯ ಮತ್ತು ಕುಟುಂಬಸ್ಥರು ಸಂಸದರನ್ನು ಸ್ವಾಗತಿಸಿ, ಗೌರವಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆ
ತರವಾಡು ಗೃಹಪ್ರವೇಶ ಮತ್ತು ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅತ್ಯಂತ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಬಂದಿದೆ. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸುಮಾರು ೨೫೦ ವರುಷಗಳ ಇತಿಹಾಸ ಇರುವ ಪುಣ್ಚಪ್ಪಾಡಿ ದೇವಸ್ಯ ತರವಾಡು ಕುಟುಂಬದ ಎಲ್ಲರ ಒಗ್ಗೂಡುವಿಕೆಯಿಂದ ಸುಂದರವಾದ ತರವಾಡು ಮನೆ ಮತ್ತು ಧರ್ಮ ದೈವಗಳ ಚಾವಡಿ ಸುಮಾರು ೭೫ ಲಕ್ಷ ರೂ, ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

LEAVE A REPLY

Please enter your comment!
Please enter your name here