ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0

ಪುತ್ತೂರು:ಅಜ್ಜಿ ಮನೆಗೆ ಬಿಡುವೆನೆಂದು ಹೇಳಿ ಅಪ್ರಾಪ್ತ ಬಾಲಕನನ್ನು ದಾರಿ ಮಧ್ಯೆ ಕರೆದೊಯ್ದು ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 22 ದಿನಗಳ ಬಳಿಕ ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ನೆಕ್ರಾಜೆ ನಿವಾಸಿ ಗಣೇಶ್ ಎಂಬವರ ಪುತ್ರ ಶ್ರೀಜಿತ್(೨೭ವ)ಬಂಧಿತ ಆರೋಪಿ.ಎ.22ರಂದು 9 ವರ್ಷದ ಬಾಲಕ ಹಾಲು ತರಲೆಂದು ಹೋದಾಗ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯಸ್ಥನಂತೆ ನಟಿಸಿ ಬಾಲಕನನ್ನು ಅಜ್ಜಿ ಮನೆಗೆ ಬಿಡುತ್ತೇನೆಂದು ಬೈಕ್‌ನಲ್ಲಿ ಕುಳ್ಳಿರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ.ಈ ಕುರಿತು ಬಾಲಕನ ಮನೆ ಮಂದಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ದ ಪೊಲೀಸರು ಕಲಂ 363,377,506ಐಪಿಸಿ ಹಾಗೂ ಕಲಂ5, 6 ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಕಾಸರಗೋಡಿನಲ್ಲಿ ಆರೋಪಿ ಬಂಧನ: ತನಿಖೆ ಕೈಗೆತ್ತಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಅಪರ ಅಧೀಕ್ಷಕ ಕುಮಾರಚಂದ್ರ ಅವರ ಸೂಚನೆಯಂತೆ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಉದಯರವಿ, ಎ.ಎಸ್.ಐ ಶ್ರೀಧರ್ ರೈ, ಹೆಡ್‌ಕಾನ್ ಸ್ಟೇಬಲ್ ಅದ್ರಾಮ, ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ಗಿರೀಶ್ ಅವರ ತಂಡ ಆರೋಪಿ ಶ್ರೀಜಿತ್ ಅವರನ್ನು ಕಾಸರಗೋಡಲ್ಲಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here