ಪುತ್ತೂರು: ಮುಳಿಯ ಚಿನ್ನೋತ್ಸವಕ್ಕೆ ಚಾಲನೆ

0

ಪುತ್ತೂರು : ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನ ಪ್ರತಿಷ್ಠಿತ ‘ಮುಳಿಯ ಚಿನ್ನೋತ್ಸವ’ – ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮೇ. 16 ರಿಂದ ಜೂನ್ 4ರವರೆಗೆ ನಡೆಯಲಿದ್ದು ಮೇ.16ರಂದು ಮುಳಿಯ ಪುತ್ತೂರು ಶೋರೂಮ್‌ನಲ್ಲಿ  ಚಾಲನೆ ನೀಡಲಾಯಿತು . ತುಳು ಸಿನಿಮಾ ಹಾಗೂ ರಂಗ ಭೂಮಿಯ ನವರಸರಾಜ ಖ್ಯಾತಿಯ ಭೋಜರಾಜ ವಾಮಂಜೂರು ಹಾಗೂ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಮತ್ತು ಸ್ವಸ್ತಿಕ ಕನ್ಸಲ್ಟೆನ್ಸಿ ಸರ್ವಿಸಸ್‌ನ ಸಿಇಒ ಡಾ|ರಾಘವೇಂದ್ರ ಹೊಳ್ಳ ಎನ್.ರವರು  ಉದ್ಘಾಟನೆ ಮಾಡಿದರು.


ಈ ಉತ್ಸವದಲ್ಲಿ ವಿವಿಧ ವಿನ್ಯಾಸಗಳ ಮನಸಿಗೊಪ್ಪುವ ಅಂದದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉತ್ಸವದಲ್ಲಿ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ೨ ಗಂಟೆಗೊಮ್ಮೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶವಿದೆ. ಮುಳಿಯ ಚಿನ್ನಾಭರಣ ಮಳಿಗೆಗೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸುವ ಗ್ರಾಹಕರಿಗೂ (ವಾಕ್ ಇನ್) ವಿಶೇಷ ಬಹುಮಾನ ಗೆಲ್ಲುವ ಅವಕಾಶವನ್ನು ಮುಳಿಯ ಸಂಸ್ಥೆ ಈ ಬಾರಿಯ ಚಿನ್ನೋತ್ಸವದಲ್ಲಿ ಒದಗಿಸುತ್ತಿದೆ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಮುಳಿಯ ಚಿನ್ನೋತ್ಸವ ನಡೆಯುತ್ತದೆ.

 

LEAVE A REPLY

Please enter your comment!
Please enter your name here