ಕುಂಜೂರು ಪಂಜ ಶಾಲೆ ಅನುದಾನಿತ ದಿಂದ ಸರಕಾರಿ ಶಾಲೆಯಾಗಿ ಪ್ರಥಮ ಆರಂಭೋತ್ಸವ

0

ಪುತ್ತೂರು: ಕುಂಜೂರು ಪಂಜ ಶಾಲೆಯಲ್ಲಿ ಶಾಲಾ ಆರಂಬೋತ್ಸವ ಸಂಭ್ರ ಮದಿಂದ ನಡೆಯಿತು. ಆದರೆ ಅನುದಾನಿತವಾಗಿದ್ದ ಈ ಹಿಂದಿನ ವರ್ಷಗಳಿಂದ ತೀರಾ ಭಿನ್ನವಾಗಿ ಸರಕಾರಿ ಶಾಲೆಯಾಗಿ ರೂಪುಗೊಂಡ ಬಳಿಕ ಪ್ರಥಮ ಪ್ರಾರಂಭೋತ್ಸವ ಆಯಿತು.

 

1949 ರಲ್ಲಿ ಅನುದಾನಿತ ಶಾಲೆಯಾಗಿ ಆರಂಭಗೊಂಡ ಶಾಲೆಯಲ್ಲಿ ಸರಕಾರಿ ಶಿಕ್ಷಕರ ಸಂಖ್ಯೆ ಈಗಿನ ಮುಖ್ಯೋಪಾದ್ಯಾಯರು ನಿವೃತ್ತಿಯೊಂದಿಗೆ ಶೂನ್ಯಕ್ಕೆ ಬಂದು ಶಾಲೆಯ ಭವಿಷ್ಯ ಅನಿಶ್ಚಿತವಾಗಿತ್ತು. ಇತ್ತೀಚೆಗೆ ಊರವರ ಅಭೂತಪೂರ್ವ ಬೆಂಬಲದಿಂದ ಶಾಲೆಕಟ್ಟಡ ಪೂರ್ತಿ ಹೊಸತಾಗಿ ನಿಂತಿದ್ದರಿಂದ ಊರವರು ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ ಪುತ್ತೂರು ಬಿ.ಇ ಓ ಖಚೇರಿ, ಮಂಗಳೂರು ಡಿ.ಡಿ.ಪಿ.ಐ ಖಚೇರಿ, ಬೆಂಗಳೂರಲ್ಲಿ ಕಮಿಷನರ್, ಹಾಗೆಯೇ ಶಿಕ್ಷಣ ಸಚಿವರು ಹೀಗೆ ಎಲ್ಲ ಕಡೆ ಓಡಾಟ, ಸಂಪರ್ಕದ ಮೂಲಕ ಕೊನೆ ಗಳಿಗೆಯಲ್ಲಿ ಅನುದಾನಿತ ಶಾಲೆಯ ಬದಲಿಗೆ ಇದು ಸರಕಾರಿ ಶಾಲೆಯಾಗಿ ರೂಪಾಂತರ ಗೊಂಡಿದೆ.
ಇಂದು ಈ ಹೊಸತಾದ ಸರಕಾರಿ ಹಿ. ಪ್ರಾ. ಶಾಲೆಯ ಮೊತ್ತ ಮೊದಲ ಶಾಲಾ ಆರಂಬೋತ್ಸವ ನಡೆದಿರುವುದು ಸ್ಮರಣೀಯ. ಜಿಲ್ಲೆಯಲ್ಲೇ ಈ ರೀತಿ ರೂಪಾಂತರ ನಡೆದ ಪ್ರಥಮ ಹಾಗೂ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆ ಶಾಲೆಗೆ ದೊರೆತಿದೆ.

LEAVE A REPLY

Please enter your comment!
Please enter your name here