ಸುಶ್ರುತ ಆಸ್ಪತ್ರೆಗೆ ಎನ್‌ಎಬಿಎಚ್ ಮಾನ್ಯತಾ ಪ್ರಮಾಣ ಪತ್ರ

0

ಪುತ್ತೂರು : ಬೊಳುವಾರಿನಲ್ಲಿರುವ ಸುಶ್ರುತ ಆಯುರ್ವೇದ ಆಸ್ಪತ್ರೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಹ ಸಂಸ್ಥೆಯಾದ ಎನ್‌ಎಬಿಎಚ್ ಮಾನ್ಯತಾ ಪ್ರಮಾಣಪತ್ರ ಲಭಿಸಿದೆ. ನವದೆಹಲಿಯ ಆಯುಷ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಯುಷ್ ಕಾರ್ಯದರ್ಶಿ ಡಾ.ರಾಜೇಶ್‌ರವರು ಸುಶ್ರುತ ಆಯುರ್ವೇದ ಆಸ್ಪತ್ರೆಯ ಎಂ.ಡಿ., ಆಯುರ್ವೇದ ಸರ್ಜನ್ ಡಾ. ರವಿಶಂಕರ್ ಪೆರುವಾಜೆರವರಿಗೆ ಎನ್‌ಎಬಿಎಚ್ ಆಯುಚ್ ಎಂಟ್ರಿ ಲೆವೆಲ್ ಸರ್ಟಿಫಿಕೇಟ್ ಪ್ರಮಾಣಪತ್ರ ನೀಡಿದರು.

ದೇಶದಲ್ಲಿ ಮೊದಲ ಬಾರಿಗೆ ಆಯುರ್ವೇದ ಆಸ್ಪತ್ರೆಗಳಿಗೆ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಸಂಸ್ಥೆ(ಎನ್‌ಎಬಿಎಚ್)ಯಿಂದ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಪುತ್ತೂರಿನ ಸುಶ್ರುತ ಆಸ್ಪತ್ರೆ ಸೇರಿದಂತೆ ದೇಶದ ಐದು ಆಯುರ್ವೇದ ಆಸ್ಪತ್ರೆಗಳಿಗೆ ಈ ಪ್ರಮಾಣಪತ್ರ ವಿತರಿಸಲಾಯಿತು.

ಪಂಚಕರ್ಮ ಮತ್ತು ಶಲ್ಯತಂತ್ರ ಆಯುರ್ವೇದ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ವಿಭಾಗದಲ್ಲಿ ಗುಣಮಟ್ಟದ ಆಯುರ್ವೇದ ಚಿಕಿತ್ಸೆಗಾಗಿ ಈ ಪ್ರಮಾಣಪತ್ರ ದೊರೆತಿದೆ-ಡಾ.ರವಿಶಂಕರ್ ಪೆರುವಾಜೆ

LEAVE A REPLY

Please enter your comment!
Please enter your name here