ಕ್ಯಾಂಪ್ಕೋ ನೆಲ್ಯಾಡಿ ಶಾಖೆಯಲ್ಲಿ ಕಾಳುಮೆಣಸು ಖರೀದಿ ಆರಂಭ

0

ನೆಲ್ಯಾಡಿ: ಕ್ಯಾಂಪ್ಕೋ ಮಂಗಳೂರು ಇದರ ಸಹಭಾಗಿತ್ವದಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿರುವ ಕ್ಯಾಂಪ್ಕೋದ ನೆಲ್ಯಾಡಿ ಶಾಖೆಯಲ್ಲಿ ಕಾಳುಮೆಣಸು ಖರೀದಿ ಕೇಂದ್ರ ಮೇ.16 ರಂದು ಆರಂಭಗೊಂಡಿತು.

 


ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲರವರು ಕ್ಯಾಂಪ್ಕೋ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳುಮೆಣಸು ವಿಭಾಗದ ಆಧಿಕಾರಿ ನಿತಿನ್ ಕೋಟ್ಯಾನ್ ಮತ್ತು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾಕರ್ ರೈಯವರು ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕರಾದ ರಾಧಾಕೃಷ್ಣ ಎಡಪಡಿತ್ತಾಯ, ವಸಂತಕೃಷ್ಣ, ಎಂ. ಕೃಷ್ಣ, ಕಮಲಾಕ್ಷ, ಇಲಿಯಾಸ್ ಕೆ.ಪಿ., ಸುಮಯ್ಯ, ರವಿ ಕೆ.ಕೆ., ಎನ್. ವಿ.ವ್ಯಾಸ ಮೊದಲಾದ ಕೃಷಿಕರು ಕಾಳುಮೆಣಸು ಶಾಖೆಗೆ ಮಾರಾಟ ಮಾಡುವ ಮೂಲಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮ್ಯಾನೇಜರ್, ಸಿಬ್ಬಂದಿ ವರ್ಗ ಮತ್ತು ನೆಲ್ಯಾಡಿ ಕ್ಯಾಂಪ್ಕೋ ಶಾಖೆಯ ಸಿಬ್ಬಂದಿಗಳು ಸಹಕರಿಸಿದರು.ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಕ್ಯಾಂಪ್ಕೋ ಸಂಸ್ಥೆಯ ನೆಲ್ಯಾಡಿ ಶಾಖಾ ಮ್ಯಾನೇಜರ್ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here