ಆನಡ್ಕ: ಕಲಿಕಾ ಚೇತರಿಕೆ ಶಾಲಾ ಪ್ರಾರಂಭೋತ್ಸವ

0

ಪುತ್ತೂರು:  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ  ಕಲಿಕಾ ಚೇತರಿಕೆ ವರ್ಷವನ್ನು ಸಂಭ್ರಮ ಸಡಗರದಿಂದ  ಮೇ.16ರಂದು ಆರಂಭಿಸಲಾಯಿತು.

ತಳಿರು ತೋರಣ, ಬಾಳೆಯ ಅಲಂಕಾರ, ರಂಗವಲ್ಲಿ ಗಳಿಂದ ಶಾಲೆಯನ್ನು ಸುಂದರವಾಗಿ ಅಲಂಕರಿಸಲಾಯಿತು. ಹೊಸದಾಗಿ ದಾಖಲೆ ಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕವಿಟ್ಟು ಪುಷ್ಪಾರ್ಚನೆ ಗೈದು ವಾದ್ಯಘೋಷಗಳೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಶಾಲೆಗೆ ಪೋಷಕರೊಂದಿಗೆ ಮಕ್ಕಳನ್ನು ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ವರ್ಷ 2022-23 ಫಲಕ ವಿರುವ ಫೈಲ್ಗಳನ್ನು ಗಣ್ಯರು ನೀಡುವ ಮೂಲಕ ಸ್ವಾಗತಿಸಲಾಯಿತು. ಬಣ್ಣಗಳೊಂದಿಗೆ ಆಟವಾಡುವ ಮೂಲಕ ಮಕ್ಕಳ ಮೊಗದಲ್ಲಿ ಹೊಸ ಕಳೆ ಮೂಡಿತು.

ಮಕ್ಕಳ ಬಾಯಿ ಸಿಹಿ ಮಾಡುವ ಮೂಲಕ ತರಗತಿಗೆ ಸ್ವಾಗತಿಸಲಾಯಿತು. ಆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಇವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ನರಿಮೊಗರು ಗ್ರಾಮ ಪಂಚಾಯತ ಉಪಾಧ್ಯಕ್ಷ ಸುಧಾಕರ ಕುಲಾಲ್ ಇವರು ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯರಾದ  ದಿನೇಶ್ ಮಜಲು ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮುಖ್ಯಗುರುಗಳಾದ  ಶುಭಲತಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.  ಮಾಲತಿ ಕಲಿಕಾ ಚೇತರಿಕೆ ವರ್ಷದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಅಕ್ಷತಾ ನಿರೂಪಿಸಿ  ಫೆಲ್ಸಿಟಾ ಡಿ ಕುನ್ಹಾ ವಂದಿಸಿದರು. ಮಧ್ಯಾಹ್ನ ಸಿಹಿಯೂಟದೊಂದಿಗೆ ಪೋಷಕರು ವಿದ್ಯಾರ್ಥಿಗಳು ಸಂಭ್ರಮಿಸುವುದು ರೊಂದಿಗೆ ಶಾಲಾ ಆರಂಭ ಅದ್ದೂರಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here