ನಿಡ್ಪಳ್ಳಿ; ಮಳೆ ಬಂದಾಗ ತೋಡಿನಂತಾಗುವ ರೋಡು- ಪ್ರಯಾಣಿಕರಿಗೆ ನರಕ ಯಾತನೆ

0

ನಿಡ್ಪಳ್ಳಿ; ಬೆಟ್ಟಂಪಾಡಿಯಿಂದ ನಿಡ್ಪಳ್ಳಿ ತಂಬುತ್ತಡ್ಕ ಹೋಗುವ ಜಿಲ್ಲಾ ಪಂಚಾಯತ್ ರಸ್ತೆಯ ವಿಜಯನಗರದಿಂದ ತಂಬುತ್ತಡ್ಕ ತಿರುಗುವಲ್ಲಿ ವಿಪರೀತ ಮಳೆ ಬಂದಾಗ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗುತ್ತಿದೆ. ಮುಖ್ಯ ರಸ್ತೆ ಮತ್ತು ತಂಬುತ್ತಡ್ಕ ಎರಡೂ ರಸ್ತೆಯಿಂದ ನೀರು ಬರುವುದರಿಂದ ಅಲ್ಲಿ ನೀರು ತುಂಬಿ ರಸ್ತೆ ತೋಡಿನಂತಾಗುತ್ತದೆ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳು ನರಕ ಯಾತನೆ ಪಡುವಂತಾಗುತ್ತದೆ. ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ನೀರು ರಸ್ತೆ ಮೇಲೆ ಹರಿಯಲು ಕಾರಣ ಎಂದು ಸಾರ್ವಜನಿಕರು ಹೇಳುತ್ತಾರೆ.

 

ಚರಂಡಿ ನಿರ್ವಹಣೆ ಇಲ್ಲದಿರುವುದು ಸಮಸ್ಯೆಗೆ ಕಾರಣ : ಮಳೆಗಾಲ ಆರಂಭವಾಗುವ ಮುನ್ನ ರಸ್ತೆ ಸಂಬಂಧಿಸಿದ ಇಲಾಖೆಗಳು ರಸ್ತೆಗಳ ಮತ್ತು ಚರಂಡಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ರಸ್ತೆ ಹಾಳಾಗಲು ಪ್ರಮುಖ ಕಾರಣ.ರಸ್ತೆ ಅಗಲ ಮಾಡಿ ದುರಸ್ತಿ ಮಾಡಿದರೆ ಮಣ್ಣು ಚರಂಡಿಗೆ ಹಾಕಿ ಹೋಗುತ್ತಾರೆ. ನಂತರ ಆ ಕಡೆ ತಿರುಗಿಯೂ ನೋಡುತ್ತಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ. ಇದರ ನಿರ್ವಹಣೆ ಸರಿಯಾಗಿ ಮಾಡಿದರೆ ಯಾವುದೇ ಸಮಸ್ಯೆ ಉದ್ಬವಿಸಲಾರದು. ಆದುದರಿಂದ ಮಳೆಗಾಲ ಬರುವ ಮುನ್ನ ಸಂಬಂಧಿಸಿದ ಇಲಾಖೆಗಳು ರಸ್ತೆ ಮತ್ತು ಚರಂಡಿಯ ನಿರ್ವಹಣೆ ಮಾಡುವಲ್ಲಿ ಮುತುವರ್ಜಿ ವಹಿಸಲಿ ಎಂಬುದೇ ಎಲ್ಲರ ಅಭಿಪ್ರಾಯ.

LEAVE A REPLY

Please enter your comment!
Please enter your name here