ವಸ್ತು ಖರೀದಿಸುವಾಗ ರಸೀದಿ ಪಡೆಯುವುದು ಗ್ರಾಹಕರ ಆದ್ಯ ಕರ್ತವ್ಯ – ಎ ಮೋಹನ್

0

 

ಪುತ್ತೂರು: ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟ್ ಕೇಳಿ ಪಡೆಯುವುದು, ಅಲ್ಲದೆ ಯಾವುದೇ ವಸ್ತುವನ್ನು ಖರೀದಿಸಿದ ಸಂದರ್ಭದಲ್ಲಿ ರಸೀದಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಗ್ರಾಹಕನ ಆದ್ಯ ಕರ್ತವ್ಯ ಎಂದು ವಿಟ್ಲದ ವಕೀಲರಾಗಿರುವ ಎ. ಮೋಹನ್ ಇವರು ಹೇಳಿದರು. ಗ್ರಾಹಕ ಹಿತರಕ್ಷಣಾ ಕಾಯ್ದೆ ಬಗ್ಗೆ ಮಾತನಾಡಿದ ಇವರು ಸರಳವಾಗಿ ಶಿಬಿರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಾಯ್ದೆಯ ಪ್ರಯೋಜನವನ್ನು ಪಡೆಯುವ ಬಗ್ಗೆ ವಿವರಿಸಿದರು. ಇವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು ಇಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುಣಚ ಗ್ರಾಮ ಪಂಚಾಯಿತಿನ ಸದಸ್ಯೆ  ಗಂಗಮ್ಮ ಇವರು ಸೇವೆಯನ್ನು ಮಾಡಲು ಆಸಕ್ತಿಯನ್ನು ತೋರಿಸಿ ಎನ್ನೆಸ್ಸೆಸ್ ಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಪ್ರತಿಯೊಬ್ಬರೂ ಮನೆಯನ್ನು ಬೆಳಗಿಸುವ ಮುಖಾಂತರ ರಾಷ್ಟ್ರವನ್ನು ಮುನ್ನಡೆಸುವ ಪ್ರಜೆಗಳಾಗಬೇಕು ಎಂದು ಹೇಳಿದರು.

ವೈಭವಿ ಕಲಾ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೆಂಕಟ್ರಮಣ ಭಟ್ ನರೆಗುಂಡಿ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿಕ್ಕಮಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ಕುಮಾರ್, ಶಿಬಿರಾಧಿಕಾರಿಗಳು, ಸಹ ಶಿಬಿರಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ವಾಣಿಶ್ರೀ ಸ್ವಾಗತಿಸಿದರು, ಅನುಷಾ ವಂದಿಸಿದರು. ಘಟಕ ನಾಯಕಿ ಶ್ರುತಿಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here