ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಕೆ.ಸೀತಾರಾಮ ರೈಯವರಿಗೆ ಸವಣೂರು ಕೆರೆಕೋಡಿ ಸ್ನೇಹ ಸಿಂಚನ ನಿವಾಸದಲ್ಲಿ ಸನ್ಮಾನ

0

ಪುತ್ತೂರು: ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್.ರೈರವರನ್ನು ಸವಣೂರು ಕೆರೆಕೋಡಿ ಕುಸುಮಾ ಪಿ.ಶೆಟ್ಟಿ ಮತ್ತು ಪದ್ಮನಾಭ ಶೆಟ್ಟಿ ಕೆರೆಕೋಡಿರವರ ನೇತೃತ್ವ ದಲ್ಲಿ ಸ್ನೇಹ ಸಿಂಚನ ನಿವಾಸದಲ್ಲಿ ಮೇ. 15 ರಂದು ಸನ್ಮಾನಿಸಲಾಯಿತು.

 

ಸನ್ಮಾನ ಸ್ವೀಕರಿಸಿದ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ ಕುಸುಮಾ ಮತ್ತು ಪದ್ಮನಾಭ ಶೆಟ್ಟಿರವರ ಮನೆಯವರು ನೀಡಿರುವ ಸನ್ಮಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇವೆ, ಕುಸುಮಾ ಪಿ.ಶೆಟ್ಟಿರವರು ಸವಣೂರು ಸಿ.ಎ, ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಯಲ್ಲಿ 36 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಯುವತಿ ಮತ್ತು ಮಹಿಳಾ ಮಂಡಲದ ಮೂಲಕ ಸಮಾಜ ಸೇವೆಯನ್ನು ಮಾಡಿದ್ದಾರೆ ಎಂದು ಹೇಳಿ, ಜೂನ್ 9 ರಂದು ನಡೆಯುವ ನನ್ನ 75ನೇ ಹುಟ್ಟು ಹಬ್ಬ ಸಮಾರಂಭದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಸಹಕಾರ ರತ್ನ ಪ್ರಶಸ್ತಿ ಆರ್ಹವಾಗಿ ಸವಣೂರು ಸೀತಾರಾಮ ರೈಯವರಿಗೆ ಸಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕುಸುಮಾ ಪಿ.ಶೆಟ್ಟಿ ಮತ್ತು ಪದ್ಮನಾಭ ಶೆಟ್ಟಿರವರುಗಳು ಅತಿಥಿಗಳನ್ನು ಗೌರವಿಸಿದರು. ದುಬೈ ಉದ್ಯಮಿ ಆಶ್ರಫ್ ಮಾಂತೂರು ಸವಣೂರುರವರು ಸಂದಭೋಚಿತವಾಗಿ ಮಾತನಾಡಿದರು. ಹಿರಿಯ ಉದ್ಯಮಿ ಸವಣೂರು ಎನ್.ಸುಂದರ ರೈ, ತಾ.ಪಂ, ಮಾಜಿ ಸದಸ್ಯ ಮೋಹನ್ ರೈ ನರಿಮೊಗರು, ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಉಪಸ್ಥಿತರಿದ್ದರು. ಕುಸುಮಾ ಪಿ.ಶೆಟ್ಟಿ ಸ್ವಾಗತಿಸಿ, ಸ್ನೇಹಿತ್ ಶೆಟ್ಟಿ ದುಬೈ, ಸಿಂಚನ್ ಶೆಟ್ಟಿ ಬೆಂಗಳೂರು, ಶೀಲಾವತಿ ರೈ ಕೆರೆಕೋಡಿ, ನಿಶ್ಮಾ ರೈರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು. ಸವಣೂರು ಸಿ.ಎ.ಬ್ಯಾಂಕ್ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here