ಚಿಕ್ಕಪುತ್ತೂರು ಕುಟುಂಬದ ತರವಾಡು ಮನೆಯಲ್ಲಿ ನೇಮೋತ್ಸವ

0

 

ಪುತ್ತೂರು : ಪುತ್ತೂರು ಕಸಬಾದ ಚಿಕ್ಕಪುತ್ತೂರು ಕುಟುಂಬದ ಧರ್ಮದೈವ ಶ್ರೀರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದು ಮೇ.14 ಮತ್ತು15ರಂದು ನೇಮೋತ್ಸವ ನಡೆಯಿತು.

 


ಮೇ.14ರಂದು ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಹರಿಸೇವೆ, ಸಬ್ಬಮ್ಮ ಪೂಜೆ, ಮಧ್ಯಾಹ್ನ ಕೆಂಚರಾಯನ ಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ಮಹಿಷಂತಾಯ, ಗುರುಕಾರ್ನೂರ್, ಸತ್ಯದೇವತೆ ನೇಮ, ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ, ಅಜ್ಜಿ ಕಲ್ಲುರ್ಟಿ, ಮೈಯಂತೆ ದೇವತೆ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಮಣಿಪಂದ ಪಂಜುರ್ಲಿ ನೇಮೋತ್ಸವ ನಡೆಯಿತು. ಮೇ.೧೫ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ರುದ್ರಚಾಮುಂಡಿ ಧರ್ಮನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗುಳಿಗ, ಅಂಗಾರ ಬಾಕುಟ ನೇಮೋತ್ಸವ ನಡೆಯಿತು. ಚಿಕ್ಕಪುತ್ತೂರು ಕುಟುಂಬದ ಹಿರಿಯರಾದ ಲಕ್ಷ್ಮಿ ಹಾಗೂ ತರವಾಡು ಮನೆಯ ರಾಮಚಂದ್ರ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here